ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎಗೆ ಆರ್ಥಿಕ ಮುಗ್ಗಟ್ಟು: ಹೆಬ್ಬಾಳ ಮೇಲ್ಸೇತುವೆ ಹೆಚ್ಚುವರಿ ಪಥ ಸ್ಥಗಿತ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಬಿಡಿಎಗೆ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು ಹೆಬ್ಬಾಳ ಜಂಕ್ಷನ್‌ನಲ್ಲಿ ಸ್ಥಾಪನೆಯಾಗುತ್ತಿರುವ ಮೇಲ್ಸೇತುವೆ ಹೆಚ್ಚುವರಿ ಪಥ ಯೋಜನೆಯನ್ನು ಅರ್ಧಕ್ಕೇ ಕೈಬಿಡಲಾಗಿದೆ.

ಹೆಬ್ಬಾಳ, ಮೇಖ್ರಿ ಸರ್ಕಲ್ ಆಸುಪಾಸಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಜಂಕ್ಷನ್ ದಾಟಲು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ, ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ, ಬೆಂಗಳೂರಲ್ಲಿ 75 ಲಕ್ಷ ವಾಹನಗಳಿವೆ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಹೆಬ್ಬಾಳ ಮಾರ್ಗವಾಗಿ ಏರ್‌ಪೋರ್ಟ್ ಗೆ ತೆರಳುವವರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮೇಲ್ಸೇತುವೆ ಹೆಚ್ಚುವರಿ ಪಥ ಯೋಜನೆಗೆ ಮುಂದಾಗಿತ್ತು. ಆದರೆ ಬಿಡಿಎಗೆ ಆರ್ಥಿಕ ಸಮಸ್ಯೆ ಎದುರಾಗಿದೆ ಗುತ್ತಿಗೆದಾರ ಕಂಪನಿಗೆ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ನಿಂತಿದೆ.

24 ತಿಂಗಳು ಕಾಮಗಾರಿಗೆ ಪೂರ್ಣಕ್ಕೆ ಗಡುವು ನೀಡಿತ್ತು

24 ತಿಂಗಳು ಕಾಮಗಾರಿಗೆ ಪೂರ್ಣಕ್ಕೆ ಗಡುವು ನೀಡಿತ್ತು

ಹೆಬ್ಬಾಳ ಮೇಲ್ಸೇತುವೆ ಹೆಚ್ಚುವರಿ ಪಥ ಕಾಮಗಾರಿ ಪೂರ್ಣಕ್ಕೆ 24 ತಿಂಗಳುಗಳ ಗಡುವು ನೀಡಲಾಗಿತ್ತು, 2016ರಲ್ಲೇ 87.10 ಕೋಟಿ ರೂ. ವೆಚ್ಚದ ಯೋಜನೆಗೆ ಒಪ್ಪಂದ ನಡೆದಿತ್ತು. ಮಣ್ಣು ಪರೀಕ್ಷೆ, ಮೇಲು ರಸ್ತೆಯ ಆಧಾರ ಸ್ತಂಭದ ಕೆಲಸವೂ ಸೇರಿ ಶೇ.೦rxfqu mAtfr ಪ್ರಗತಿಯಾಗಿದೆ.

ಹೆಬ್ಬಾಳದ ಮೂಲಕವೇ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಹೆಬ್ಬಾಳದ ಮೂಲಕವೇ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಚರಿಸಲಿದೆ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೆಟ್ರೋ ರೈಲು ಸಾಗುವ ಮಾರ್ಗದ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಲಾಗಿದ್ದು, ಹಿಂದಿನ ವಿನ್ಯಾಸದಲ್ಲಿದ್ದ ಆರ್‌ಕೆ ಹೆಗಡೆ ನಗರ ಬದಲು ಹೆಬ್ಬಾಳ ಮೂಲಕವೇ ಮಾರ್ಗ ನಿರ್ಮಿಸಲು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಪ್ರತಿದಿನ ಲಕ್ಷಾಂತರ ವಿಮಾನ ಪ್ರಯಾಣಿಕರು ಮತ್ತು ಮಾರ್ಗದ ನಡುವಿನ ಊರಿನ ನಿವಾಸಿಗಳಿಗೆ ಪ್ರಯಾಣ ಸುಗಮವಾಗಲಿದೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಸರ್ಕಾರ ನೆರವಿಗೆ ಬರಲಿದೆಯೇ

ಸರ್ಕಾರ ನೆರವಿಗೆ ಬರಲಿದೆಯೇ

ಹಿಂದಿನ ಸರ್ಕಾರ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಿ ತ್ವರಿತ ಗತಿಯಲ್ಲಿ ಕೆಲಸ ಪೂರ್ಣಗೊಳಿಸುವ ಭರವಸೆ ನೀಡಿತ್ತು. ಆದರೆ, ಸರಕಾರ ಅನುದಾನ ನಿಗದಿ ಮಾಡದೆ ಬಿಡಿಎ ಹಣದಲ್ಲೇ ಯೋಜನೆ ಕೈಗೆತ್ತಿಕೊಳ್ಳಲು ಸೂಚಿಸಿತ್ತು. ಇದರಿಂದಾಗಿ ಕಾಮಗಾರಿ ನಿಧಾನವಾಗಿ ಆರಂಭ ಕಂಡಿತು. ಈಗ ಹಣಕ್ಕಾಗಿ ಪ್ರಾಧಿಧಿಕಾರವು ಸರಕಾರದತ್ತ ದೃಷ್ಟಿ ಹರಿಸಿದೆ. ಬಿಡಿಎ ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಸರಕಾರ ಅನುದಾನ ನೀಡುವುದಿಲ್ಲ. ಆದರೂ, ಬಿಡಿಎ ತನ್ನ ಬೊಕ್ಕಸ ಬರಿದಾಗಿರುವ ಕಾರಣ ಮೂಲಸೌಕರ್ಯ ಯೋಜನೆಗಳ ಜಾರಿಗೆ ಆರ್ಥಿಕ ನೆರವು ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಲು ಮುಂದಾಗಿದೆ.

ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ! ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!

ಏರ್‌ಶೋಗೆ ತಟ್ಟಲಿದೆ ಟ್ರಾಫಿಕ್ ಜಾಮ್ ಬಿಸಿ

ಏರ್‌ಶೋಗೆ ತಟ್ಟಲಿದೆ ಟ್ರಾಫಿಕ್ ಜಾಮ್ ಬಿಸಿ

ಫೆಬ್ರವರಿಯಲ್ಲಿ ಯಲಹಂಕ ವಾಯುನೆಲೆಯಲ್ಲಿ ದ್ವೈವಾರ್ಷಿಕ ಏರ್‌ ಶೋ ಪ್ರದರ್ಶನ ನಡೆಯಲಿದೆ. ಜಾಗತಿಕ ಮಟ್ಟದ ಈ ಮೇಳಕ್ಕೆ ವಿಶ್ವದ ಪ್ರಮುಖ ದೇಶಗಳಿಂದ ಗಣ್ಯರು ಆಗಮಿಸಲಿದ್ದಾರೆ. ನಗರದಿಂದ ಈ ಸ್ಥಳ ತಲುಪಲು ಹೆಬ್ಬಾಳ ಜಂಕ್ಷನ್‌ ದಾಟಿಯೇ ಮುನ್ನಡೆಯಬೇಕು. ಸದಾ ದಟ್ಟಣೆಯಿಂದ ಕೂಡಿರುವ ಇಲ್ಲಿ ಮೇಳದ ವೇಳೆ ಅಧಿಧಿಕ ವಾಹನಗಳು ಚಲಿಸಲು ಪರ್ಯಾಯ ಮಾರ್ಗ ಇಲ್ಲ. ಕಾಮಗಾರಿ ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕಿರುವುದರಿಂದ ಏರ್‌ ಶೋಗೆ ತೆರಳುವವರಿಗೆ ಟ್ರಾಫಿಕ್‌ ಬಿಸಿ ತಟ್ಟುವುದು ನಿಶ್ಚಿತ.

ಏರೋ ಇಂಡಿಯಾ ಸ್ಥಳಾಂತರ ವಿವಾದ: ಬೆಂಗಳೂರಲ್ಲೇ ನಡೆಯಲಿ ಪ್ರದರ್ಶನಏರೋ ಇಂಡಿಯಾ ಸ್ಥಳಾಂತರ ವಿವಾದ: ಬೆಂಗಳೂರಲ್ಲೇ ನಡೆಯಲಿ ಪ್ರದರ್ಶನ

English summary
Bengaluru development authority has stopped work of additional path of Hebbal fly over due to lack of fund. It was proposed by the authority of Rs 87.10 crores in 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X