ಬೆಂಗಳೂರು, ಏಪ್ರಿಲ್ 6: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಿರುವ ಫ್ಲಾಟ್ಗಳನ್ನು ಖರೀದಿಸಲು ಆನ್ಲೈನ್ ಸೇವೆಯನ್ನು ಆರಂಭಿಸಿದೆ. ಮಾಳಗಾಳ (ನಾಗರಬಾವಿ), ಕಣಿಮಿಣಿಕೆ (ಕುಂಬಳಗೋಡು), ಕೊಮ್ಮಘಟ್ಟ (ಕೆಂಗೇರಿ, ನೈಸ್ ರಸ್ತೆಯ ಬಳಿ), ವಲಗೇರಹಳ್ಳಿ (ಕೆಂಗೇರಿ), ದೊಡ್ಡಬನಹಳ್ಳಿ (ಕೆ.ಆರ್ ಪುರಂ) ಬಡಾವಣೆಗಳಲ್ಲಿ ವಿವಿಧ ಆಳತೆಯ 1381 ಫ್ಲಾಟ್ಗಳು ಆನ್ಲೈನ್ನಲ್ಲಿ ಲಭ್ಯವಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಹಿಂದೆ ಫ್ಲಾಟ್ಗಳನ್ನು ಖರೀದಿಸಲು ಪ್ರಾಧಿಕಾರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಫ್ಲಾಟ್ಗಳನ್ನು ಖರೀದಿಸಲು ಆನ್ಲೈನ್ ಸೇವೆಯನ್ನು ಪ್ರಾರಂಭಿಸಿದೆ. ಸಾರ್ವಜನಿಕರು ಪ್ರಾಧಿಕಾರದ ವೆಬ್ಸೈಟ್ (www.housing.bdabangalore.org)ಗೆ ಭೇಟಿ ನೀಡಿ, ಫ್ಲಾಟ್ಗಳ ವಿವರ, ಬಡಾವಣೆಗಳ ಹೆಸರು, ನಕಾಶೆ, ಫ್ಲಾಟ್ಗಳ ಛಾಯಾಚಿತ್ರ ಮೂಲಕವೇ ತಮಗಿಷ್ಟವಾದ ಫ್ಲಾಟ್ಗಳನ್ನು ಕಾಯ್ದಿರಿಸಬಹುದು.
ಬಿಡಿಎ ಅಧ್ಯಕ್ಷರು ನಗರದ ವಿವಿಧೆಡೆ ನಿರ್ಮಿಸಿರುವ ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿ, ವಸತಿ ಸಮುಚ್ಛಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಗಮನಿಸಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆಗೊಳಿಸಲಾಗಿದೆ ಹಾಗೂ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿದೆ.
ಆಟದ ಮೈದಾನ, ಉದ್ಯಾನವನ, ಮಕ್ಕಳ ಆಟಿಕೆಗಳು, ಜಿಮ್, ವೆಲ್ಫೇರ್ ಅಸೋಸಿಯೇಷನ್ಗೆ ಕಚೇರಿ ನಿರ್ಮಿಸಲು ಸ್ಥಳ ಕಾಯ್ದಿರಿಸುವುದು, ವಸತಿ ಸಮುಚ್ಛಯಗಳಿಗೆ ಸೌರ ಫಲಕಗಳನ್ನು ಅಳವಡಿಸುವ ಕಾರ್ಯಗಳನ್ನು ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಸದ್ಯ ಲಭ್ಯವಿರುವ ಫ್ಲಾಟ್ಗಳ ಬೆಲೆ ಮತ್ತು ವಿವರ | ||||
---|---|---|---|---|
ಕ್ರಮ ಸಂಖ್ಯೆ | ಬಡಾವಣೆ ಹೆಸರು | ಬಿಎಚ್ಕೆ ವಿವರ | ಫ್ಲಾಟ್ಗಳ ಸಂಖ್ಯೆ | ಒಟ್ಟು ಮೊತ್ತ ರೂ. ಲಕ್ಷಗಳಲ್ಲಿ |
01 | ಕಣಿಮಿಣಿಕೆ ಹಂತ -2 | 2 BHK | 503 | 25 |
02 | ಕಣಿಮಿಣಿಕೆ ಹಂತ -3 | 2 BHK | 267 | 28.50 |
03 | ಕೊಮ್ಮಘಟ್ಟ ಹಂತ -1 | 2 BHK | 115 | 25 |
04 | ಕೊಮ್ಮಘಟ್ಟ ಹಂತ -2 | 2 BHK | 267 | 30.40 |
05 | ದೊಡ್ಡಬನಹಳ್ಳಿ ಹಂತ -1 | 2 BHK | 43 | 25 |
06 | ವಲಗೇರಹಳ್ಳಿ ಹಂತ -6 | 2 BHK | 51 | 44 |
07 | ಮಾಳಗಾಲ ಹಂತ -2 | 2 BHK | 42 | 42 |
08 | ಕಣಿಮಿಣಿಕೆ ಹಂತ -4 | 3 BHK | 93 | 40 |
ಒಟ್ಟು | 1381 |
RECOMMENDED STORIES