ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ನಿವೇಶನ ಕೊಳ್ಳುವ ಕನಸಿದ್ದರೆ ಸದ್ಯಕ್ಕೆ ಮರೆತುಬಿಡಿ

|
Google Oneindia Kannada News

ಬೆಂಗಳೂರು, ಮಾರ್ಚ್ 27: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರಾದ್ಯಂತ ನಿರ್ಮಿಸಿರುವ ನಿವೇಶನಗಳ ಹರಾಜಿಗೆ ಚುನಾವಣಾ ಆಯೋಗದ ಅನುಮತಿ ಕೋರಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಳೆದ 15 ದಿನಗಳ ಹಿಂದೆಯೇ ಅರ್ಜಿಯು ಬಿಡಿಎ ಕಚೇರಿಯಿಂದ ಸರ್ಕಾರಕ್ಕೆ ತಲುಪಿದೆ ಅಲ್ಲಿಂದ ಚುನಾವಣಾ ಆಯೋಗಕ್ಕೆ ಹೋಗಿದೆ. ಆಯೋಗದ ಅನುಮತಿಗಾಗಿ ಬಿಡಿಎ ಕಾಯುತ್ತಿದೆ.

ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು

ಹಣಕಾಸಿನ ವ್ಯವಹಾರ ನಡೆಯುವ ಕಾರಣ ಅನುಮತಿ ಕೋರಲಾಗಿದೆ, ನಿವೇಶನ ಮಾರಾಟ ದಿನನಿತ್ಯದ ಚಟುವಟಿಕೆಯಾಗಿದ್ದ ವಿಶೇಷ ಅನುಮತಿ ಪಡೆಯುವ ಅಗತ್ಯವಿರಲಿಲ್ಲ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಬಿಡಿಎ ನೀತಿ ಪ್ರಕಾರ ಪ್ರತಿ 14 ದಿನಗಳಿಗೊಮ್ಮೆ ನಿವೇಶನಗಳ ಹರಾಜು ಕೂಗಲಾಗುತ್ತದೆ. ಕೊನೆಯ ಹರಾಜು ಫೆಬ್ರವರಿಯಲ್ಲಿ ನಡೆದಿತ್ತು. ಸರ್‌ ಎಂ ವಿಶ್ವೇಶ್ವರಯ್ಯ ಬಡಾವಣೆ, ಅರ್ಕಾವತಿ ಬಡಾವಣೆ, ನಂದಿನಿ ಬಡಾವಣೆ, ನಾಗರಬಾವಿ, ಜೆಪಿನಗರ ಹಾಗೂ ಬನಶಂಕರಿಯಲ್ಲಿ ಬಿಡಿಎಯು ತನ್ನ 50 ನಿವೇಶನಗಳ ಹರಾಜಿಗೆ ಅರ್ಜಿಯನ್ನು ಆಹ್ವಾನಿಸಿದೆ.

 ಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆ ಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆ

ಹೆಚ್ಚುವರಿ ಚುನಾವಣಾ ಅಧಿಕಾರಿ ಕೆಜಿ ಜಗದೀಶ್ ಹೇಳುವ ಪ್ರಕಾರ ಬಿಡಿಎ ಅರ್ಜಿಯು ಸರ್ಕಾರದ ಮೂಲಕ ಮಾರ್ಚ್ 19ರಂದು ನಮಗೆ ತಲುಒಇದೆ, ದೆಹಲಿಯ ಚುನಾವಾ ಆಯೋಗಕ್ಕೆ ಕಳುಹಿಸಲಾಗಿದೆ ಅವರ ಉತ್ತರಕ್ಕೆ ಕಾಯುತ್ತಿದ್ದೇವೆ. ಯಾವುದೇ ನಿರ್ಧಾರವನ್ನು ಇಲ್ಲಿ ತೆಗದುಕೊಳ್ಳುವುದಿಲ್ಲ ಎಂದಿದ್ದಾರೆ.

ಬನಶಂಕರಿಯಲ್ಲಿ ಶೀಘ್ರ ತಲೆ ಎತ್ತಲಿದೆ ಬಿಡಿಎ ಬೃಹತ್ ಶಾಪಿಂಗ್ ಮಾಲ್

ಬನಶಂಕರಿಯಲ್ಲಿ ಶೀಘ್ರ ತಲೆ ಎತ್ತಲಿದೆ ಬಿಡಿಎ ಬೃಹತ್ ಶಾಪಿಂಗ್ ಮಾಲ್

ಬನಶಂಕರಿ ಬಳಿ ಇರುವ ಬಿಡಿಎ ಬಡಾವಣೆಯಲ್ಲಿ ಬೃಹತ್ ಶಾಪಿಂಗ್ ಮಾಲ್ ನಿರ್ಮಿಸಲು ಬಿಡಿಎ ಮುಂದಾಗಿದೆ.

ಬನಶಂಕರಿಯ ಆರನೇ ಹಂತದಲ್ಲಿರುವ 35 ಗುಂಟೆ ಜಾಗದಲ್ಲಿ 350 ಕೋಟಿ ರೂ ವೆಚ್ಚದಲ್ಲಿಮಾಲ್ ತಲೆ ಎತ್ತಲಿದೆ. 200ಕ್ಕೂ ಅಧಿಕ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ದೊರೆಯಲಿದೆ. 2009ರಲ್ಲೇ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.

ಒಟ್ಟು ಆರು ಎಕರೆ ಜಾಗದಲ್ಲಿ ಬೃಹತ್ ವಾಣಿಜ್ಯ ಸಮುಚ್ಚಯ ನಿರ್ಮಾಣವಾಗಲಿದೆ. ನಗರದ ಹಲವೆಡೆ ಬಿಡಿಎ ಕಾಂಪ್ಲೆಕ್ಸ್‌ಗಳಿವೆ, ಹಳೆ ವಿನ್ಯಾಸದ ಈ ಕಟ್ಟಡಗಳು ಕಚೇರಿಗಾಗಿ ಬಳಕೆಯಾಗುತ್ತಿದೆ. ಇದರಲ್ಲಿ ಮಲ್ಟಿ ಯೂಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತದೆ.

ಏಪ್ರಿಲ್ ಮೊದಲ ವಾರದಲ್ಲಿ ಅರ್ಹ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಕಂಪನಿಯು ಕಟ್ಟಡ ನಿರ್ಮಾಣ ಹಾಗೂ ಜಾಗದ ಅಭಿವೃದ್ಧಿ ಮಾಡಲಿದೆ. ಬಾಡಿಗೆ ಹಾಗೂ ಪಾರ್ಕಿಂಗ್ ನಲ್ಲಿ ಸ್ವಲ್ಪ ಮೊತ್ತವನ್ನು ಬಿಡಿಎ ಪಡೆಯಲಿದೆ.

ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾರಾಟವಾಗದ ಬಿಡಿಎ ಫ್ಲಾಟ್‌ಗಳು

ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾರಾಟವಾಗದ ಬಿಡಿಎ ಫ್ಲಾಟ್‌ಗಳು

ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಬಿಡಿಎ ನಿವೇಶನ ನೀಡುವ ಕುರಿತು ಪೊಲೀಸ್ ಇಲಾಖೆಯೊಂದಿಗೆ ಬಿಡಿಎ ಮಾತುಕತೆ ನಡೆಸಿದೆ.

ನಗರದ ಹಲವೆಡೆ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿ ಮಾರಾಟವಾಗದ ಬಿಡಿಎ ಫ್ಲಾಟ್‌ಗಳನ್ನು ಅಗ್ನಿಶಾಮಕ ಸಿಬ್ಬಂದಿಗಳಿಗೆ ನೀಡಲು ನಿರ್ಧರಿಸಿದೆ. ಈ ಹಿಂದೆ ಇಲಾಖೆಗೆ ಅಗತ್ಯವಾದ ವಸತಿ ಸಮುಚ್ಚಯಗಳನ್ನು ಪೊಲೀಸ್ ಗೃಹ ನಿರ್ಮಾಣ ಮಂಡಳಿಯೇ ನಿರ್ಮಿಸುತ್ತಿತ್ತು.

ಆದರೆ ಇತ್ತೀಚಿನ ಇನಗಳಲ್ಲಿ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಕಾರಣ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಇತರೆ ಸಲಕರಣೆಗಳ ಬೆಲೆಯೂ ಹೆಚ್ಚಾಗಿದೆ.

ಆ ಹಿನ್ನೆಲೆಯಲ್ಲಿ ಗೃಹ ರಕ್ಷಕ ಮತ್ತು ಅಗ್ನಿಸಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ತನ್ನ ಸಿಬ್ಬಂದಿಗೆ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

ಬನಶಂಕರಿಯಲ್ಲಿ ಶೀಘ್ರ ತಲೆ ಎತ್ತಲಿದೆ ಬಿಡಿಎ ಬೃಹತ್ ಶಾಪಿಂಗ್ ಮಾಲ್ಬನಶಂಕರಿಯಲ್ಲಿ ಶೀಘ್ರ ತಲೆ ಎತ್ತಲಿದೆ ಬಿಡಿಎ ಬೃಹತ್ ಶಾಪಿಂಗ್ ಮಾಲ್

ಹೊಸ ಪ್ಲಾನ್: ಕ್ಲಬ್ ಹೌಸ್ ನಿರ್ಮಾಣ ಮಾಡಲು ಹೊರಟ ಬಿಡಿಎ

ಹೊಸ ಪ್ಲಾನ್: ಕ್ಲಬ್ ಹೌಸ್ ನಿರ್ಮಾಣ ಮಾಡಲು ಹೊರಟ ಬಿಡಿಎ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕ್ಲಬ್ ಹೌಸ್ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ಜೊತೆಗೆ ಫ್ಲ್ಯಾಟ್‌ಗಳತ್ತ ಜನರನ್ನು ಸೆಳೆಯಲು ಮುಂದಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಕಣಿಮಿಣಿಕೆ ಫ್ಲ್ಯಾಟ್‌ಗಳ ಮೇಲೆ ಶೇ.5 ರಷ್ಟು ಮತ್ತು 10 ರಿಯಾಯಿತಿಯನ್ನು ಬಿಡಿಎ ಘೋಷಣೆ ಮಾಡಿತ್ತು. ರಿಯಾಯಿತಿ ಪ್ರಕಟಿಸಿದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿರಲಿಲ್ಲ, ನಿವೇಶನ ಕೊಳ್ಳಲು ಆಸಕ್ತಿ ತೋರಿಸಿರಲಿಲ್ಲ. ಇದೀಗ ಬಿಡಿಎ ಪ್ರಾಧಿಕಾರದ ಕಣಿಮಿಣಿಕೆ ವಸತಿ ಸಮುಚ್ಛಯದಲ್ಲಿ ಕ್ಲಬ್ ಹೌಸ್ ನಿರ್ಮಾಣ ಮಾಡಲು ಮುಂದಾಗಿದೆ.

ಬಿಡಿಎ ದಾಸನಪುರ ಬಳಿ ನಿರ್ಮಿಸಲಿರುವ 4 ಬಿಎಚ್‌ಕೆ ವಿಲ್ಲಾಗಳಿಗೆ ಈಗಲೇ ಬೇಡಿಕೆ ಆರಂಭವಾಗಿದೆ. ದಾಸನಪುರ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ 320 ವಿಲ್ಲಾಗಳ ಪೈಕಿ 200 ಕ್ಕೂ ವಿಲ್ಲಾಗಳಿಗೆ ಈಗಲೇ ಭಾರಿ ಬೇಡಿಕೆ ಬಂದಿದೆ.

ಕೆಂಪೇಗೌಡ ಬಡಾವಣೆ: ಫಲಾನುಭವಿಗಳಿಂದ ನಿವೇಶನ ವಾಪಸ್

ಕೆಂಪೇಗೌಡ ಬಡಾವಣೆ: ಫಲಾನುಭವಿಗಳಿಂದ ನಿವೇಶನ ವಾಪಸ್

ಸೆಪ್ಟೆಂಬರ್ ತಿಂಗಳಲ್ಲಿ ಕೆಂಪೇಗೌಡ ಬಡಾವಣೆಯ ಎರಡನೇ ಹಂತದ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು ಆದರೆ ಎರಡೇ ತಿಂಗಳಲ್ಲಿ ನಿವೇಶನ ಫಲಾನುಭವಿಗಳು ನಿವೇಶನ ವಾಪಸ್ ನೀಡಲು ಮುಂದಾಗಿದ್ದಾರೆ.

ಹಂಚಿಕೆ ಪತ್ರ ಪಡೆದವರಲ್ಲಿ ಕೆಲವರು ಬಾಕಿ ಹಣ ಪಾವತಿಗೆ ಹೆಚ್ಚುವರಿ ಸಮಯ ನಿಗದಿ ಮಾಡದಿರುವುದು, ಸೈಟ್ ಮೌಲ್ಯ ಹೆಚ್ಚಳ ಇತ್ಯಾದಿ ಕಾರಣ ನೀಡಿ ನಿವೇಶನ ವಾಪಸ್ ಮಾಡಲು ಮುಂದಾಗಿದ್ದಾರೆ.

20/30 ಅಳತೆಯ ನಿವೇಶನ ಹಂಚಿಕೆ ಪತ್ರವನ್ನು ವಾಪಸ್ ಮಾಡಲು ಕೆಲವು ಫಲಾನುಭವಿಗಳು ಮುಂದಾಗಿದ್ದಾರೆ. ಇದೇ ರೀತಿ ಇನ್ನೂ ಕೆಲವು ಜನರು ನಿವೇಶನವನ್ನು ವಾಪಸ್ ಮಾಡುವ ಕುರಿತು ಮಾತನಾಡಿದ್ದಾರೆ.

English summary
The Bangalore Development Authority (BDA) has sought permission from the Election Commission to auction its sites across the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X