ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ನಿರ್ಮಿಸಲಿದೆ 4ಬಿಎಚ್‌ಕೆ ವಿಲ್ಲಾ, ಕೊಳ್ಳಲು ಸಿದ್ಧರಾಗಿ

By Nayana
|
Google Oneindia Kannada News

ಬೆಂಗಳೂರು, ಜೂನ್ 25: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಇದೀಗ ವಿಲ್ಲಾಗಳ ಯೋಜನೆ ಜಾರಿಗೆ ಸಾಕಷ್ಟು ಸಿದ್ಧತೆಗಳನ್ನು ನಡೆಸಿದೆ.

ಪ್ರಾಧಿಕಾರವು ಈ ಮೊದಲು 2,3 ಕೊಠಡಿ ಮಾದರಿಯ ವಿಲ್ಲಾ ಯೋಜನೆ ಕೈಗೆತ್ತಿಕೊಂಡು ಯಶಸ್ಸು ಕಂಡಿದೆ, ಇದೀಗ ಖಾಸಗಿ ನಿರ್ಮಾಣ ಸಂಸ್ಥೆಗಳೊಂದಿಗೆ ಸೆಡ್ಡು ಹೊಡಿಯಲು ಮುಂದಾಗಿದೆ. ನಾಲ್ಕು ಕೊಠಡಿ ಮಾದರಿಯಲ್ಲಿ ವಿಲ್ಲಾ ನಿರ್ಮಿಸಲು ಚಿಂತನೆ ನಡೆಸಿದೆ.

ಕೆಂಪೇಗೌಡ ಬಡಾವಣೆ: ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬಕೆಂಪೇಗೌಡ ಬಡಾವಣೆ: ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬ

ಬೆಂಗಳೂರಿನಲ್ಲಿ ಮೂರು ಹಾಗೂ ನಾಲ್ಕು ಕೊಠಡಿಯ ಮನೆಗಳಿಗೆ ಹೆಚ್ಚು ಬೇಡಿಕೆಯಿದೆ. ಕಾರ್ಪೊರೇಟ್‌ ಹಾಗೂ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಸುಸಜ್ಜಿತ ವಿಲ್ಲಾಗಳ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ.ಸದಸ್ಯದಲ್ಲೇ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಪ್ರಸ್ತಾವನೆಗೆ ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ.

BDA planning to 4BHK villas in Dasanpura

ಈ ವಿಲ್ಲಾಗಳನ್ನು 30 ಎಕರೆ ವಿಸ್ತೀರ್ಣದಲ್ಲಿ 375 ಸಂಖ್ಯೆಯಷ್ಟು 4 ಬಿಎಚ್‌ಕೆ ಮಾದಿಯ ವಿಲ್ಲಾಗಳನ್ನು ನಿರ್ಮಿಸಲಾಗುತ್ತಿದೆ. ಈ ವಿಲ್ಲಾಗಳು ತುಮಕೂರು ರಸ್ತೆಯ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ಸ್ಥಳವನ್ನು ಗುರುತಿಸಲಾಗಿದೆ.ಪ್ರತಿಯೊಂದು ವಿಲ್ಲಾಗಳು ಸ್ವತಂತ್ರ ಕಾಂಪೌಂಡ್‌ ಹೊಂದಿರುತ್ತದೆ. ಸಂಪೂರ್ಣ ಹಸಿರು ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

ಬಿಲ್ಡಪ್‌ ಏರಿಯಾ 2200 ಚದರ ಅಡಿ ಹಾಗೂ ಕಾರ್ಪೆಟ್‌ ಏರಿಯಾ 1950 ಚದರ ಅಡಿ ವಿಸ್ತೀರ್ಣ ಇರಲಿದೆ. ಎರಡು ಕಾರುಗಳಿಗೆ ನಿಲುಗಡೆ ಸ್ಥಳ, ವಿಲಲಾ ಮುಂದೆ ಕಿರು ಉದ್ಯಾನ ಬೆಳೆಸಲಾಗುತ್ತದೆ. ಕ್ಲಬ್‌ಹೌಸ್‌, ಆಟದ ಮೈದಾನವೂ ಕೂಡ ಇರಲಿದೆ.

English summary
To compete with the private builders, Bangalore Development Authority is planning to build 4BHK villas at Dasanpura in Bangalore within next two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X