ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡಾವಣೆಗಳ ನಿರ್ವಹಣೆ ಇಲ್ಲದೇ BDA ನಿರ್ವಹಣಾ ಶುಲ್ಕ ವಸೂಲಿ: ಸಾರ್ವಜನಿಕರ ಆಕ್ರೋಶ

|
Google Oneindia Kannada News

ಬೆಂಗಳೂರು, ಏ. 27: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿರುವ ಲೇಔಟ್‌ಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಗಿಡ ನೆಟ್ಟಿಲ್ಲ, ಪಾರ್ಕ್‌ಗಳ ನಿರ್ವಹಣೆ ಇಲ್ಲ. ನೆಟ್ಟಿರುವ ಗಿಡಗಳಿಗೆ ನೀರು ಹಾಕುತ್ತಿಲ್ಲ. ಹೀಗಿರುವಾಗ ನಾವು ಯಾಕೆ ಬಿಡಿಎ ಬಡಾವಣೆ ನಿರ್ವಹಣೆ ಶುಲ್ಕವನ್ನು ಪಾವತಿಸಬೇಕು?

ಹೀಗೊಂದು ಪ್ರಶ್ನೆ ಮುಂದಿಟ್ಟುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಬಿಡಿಎ ನಿವೇಶನದಾರರು ಆನ್‌ ಲೈನ್ ಪಿಟೀಷನ್ ಮೂಲಕ ಆಂದೋಲನ ಆರಂಭಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಳಲು ತೋಡಿಕೊಳ್ಳುವ ಮೂಲಕ ಬಿಡಿಎಗೆ ನಿವೇಶನ ನಿರ್ವಹಣಾ ಶುಲ್ಕ ಮನ್ನ ಮಾಡುವಂತೆ ಆಗ್ರಹಿಸಿದ್ದಾರೆ.

ಆನ್ ಲೈನ್ ಮೂಲಕ ದೂರು ಸಲ್ಲಿರುವ ಮಂಜುನಾಥ್ ಅವರ ಈ ವಿಚಾರವನ್ನು ಬಿಡಿಎ ಐದು ನೂರಕ್ಕೂ ಹೆಚ್ಚು ನಿವೇಶನದಾರರು ಬೆಂಬಲ ಸೂಚಿಸಿದ್ದಾರೆ. ಇನ್ನು ಬಿಡಿಎ ಬಡಾವಣೆಗಳನ್ನು ನಿರ್ವಹಣೆ ಮಾಡಬೇಕಿದ್ದ ಬಿಡಿಎ ಇಂಜಿನಿಯರಿಂಗ್ ವಿಭಾಗ ಬಡಾವಣೆಗಳ ನಿರ್ವಹಣೆ ಶುಲ್ಕ ವಸೂಲಿ ಮಾಡುತ್ತಿದೆ. ಆದರೆ, ಲೇಔಟ್ ಗಳಲ್ಲಿ ಹುಲ್ಲು ಕಡ್ಡಿ ಕೂಡ ಎತ್ತಿಲ್ಲ. ಗಿಡಗಳ ನಿರ್ವಹಣೆ, ಗಿಡಗಳಿಗೆ ನೀರು ಹಾಕುವುದು, ಪಾರ್ಕ್‌ಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

BDA layout Residents demand to remove BDA maintenance charges

ಈ ಕುರಿತು ಮಂಜುನಾಥ್ ಟಿಎಂ ಎಂಬವರು ಚೇಂಜ್. ಆರ್ಗ್ ವೆಬ್ ತಾಣದಲ್ಲಿ ಎತ್ತಿರುವ ಪ್ರಶ್ನೆ ಹೀಗಿದೆ. ಬಿಡಿಎ ಅಭಿವೃದ್ಧಿ ಪಡಿಸಿರುವ ಲೇಔಟ್ ಗಳಲ್ಲಿ ಸಣ್ಣ ನಿರ್ವಹಣಾ ಕೆಲಸ ಮಾಡಿಲ್ಲ. ಗಿಡಗಳನ್ನು ನೆಟ್ಟಿಲ್ಲ. ಪಾರ್ಕ್ ಗಳನ್ನು ನಿರ್ವಹಣೆ ಮಾಡಿಲ್ಲ. ರಸ್ತೆಗಳಲ್ಲಿ ಬಿದ್ದಿರುವ ಒಂದು ಗುಂಡಿ ಕೂಡ ಮುಚ್ಚಿಲ್ಲ.

ಅಂಜನಾಪುರ ಬಡಾವಣೆ ಸೇರಿದಂತೆ ಬಿಡಿಎ ಲೇಔಟ್‌ಗಳಲ್ಲಿ ಈ ಪರಿಸ್ಥಿತಿಯಿದೆ. ಹೀಗಿರುವಾಗ ಹೇಳಿ, ನಿವೇಶನದಾರರು ಯಾಕೆ ಬಿಡಿಎಗೆ ಲೇಔಟ್‌ ನಿರ್ವಹಣಾ ಶುಲ್ಕ ಪಾವತಿ ಮಾಡಬೇಕು. ಬಿಡಿಎ ಯಾವ ನಿಯಮ ನಿರ್ವಹಣೆ ನಿಲ್ಲದೇ ನಿರ್ವಹಣ ಶುಲ್ಕ ಪಡೆಯಲು ಹೇಳಿದೆ ಸ್ವಲ್ಪ ತಿಳಿಸಿಕೊಂಡಿ ಎಂದು ನಿವೇಶನ ಖರೀದಿದಾರರು ಕಿಡಿ ಕಾರಿದ್ದಾರೆ. ಹೀಗಾಗಿ ನಿರ್ವಹಣೆ ಇಲ್ಲದೇ ನಿರ್ವಹಣಾ ವೆಚ್ಚ ವಾರ್ಷಿಕ 1200 ರೂ. ಪಡೆಯುವುದನ್ನು ನಿಲ್ಲಿಸಿ. ಈಗಾಗಲೇ ಪಾವತಿ ಮಾಡಿರುವ ತೆರಿಗೆಯನ್ನು ವಾಪಸು ಕೊಡಿ. ಬಿಡಿಎ ಬಡಾವಣೆ ನಿವಾಸಿಗಳ ಪರವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ. ಇದಕ್ಕೆ ಉತ್ತರ ಕೊಡಿ ಎಂದು ಬಿಡಿಎ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

BDA layout Residents demand to remove BDA maintenance charges

ಈ ಕುರಿತು ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತ ರಾಜೇಶ್ ಗೌಡ, ಯಾವ ಬಡಾವಣೆಯಲ್ಲಿ ನಿರ್ವಹಣೆ ಮಾಡದೇ ನಿರ್ವಹಣಾ ಶುಲ್ಕ ಪಡೆಯಲಾಗಿದೆಯೋ ಅದರ ವಿವರಗಳನ್ನು ಸಂಗ್ರಹಿಸಿ ಸಂಬಂಧಪಟ್ಟವರ ಮೇಲೆ ದೂರು ಕೊಡೋಕೆ ಹೇಳಿ. ಎಸಿಬಿ ಇದೆಯಲ್ಲಾ? ಅಲ್ಲಿಗೆ ಹೋಗೋಕೆ ಹೇಳಿ. ಅಲ್ಲಿ ಹೋಗಿ ದೂರು ಕೊಡಲಿ. ಎಸಿಬಿಯವರು ತನಿಖೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

English summary
Not even single maintenance work in BDA layouts, But BDA officials collecting Maintenance fee from site owners, read more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X