ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತರಿಗೆ ಪರಿಹಾರದ ನಿವೇಶನ ವಿತರಿಸಲು ಬಿಡಿಎ ರೆಡಿ: ಒಂದು ಸಮಸ್ಯೆ

|
Google Oneindia Kannada News

ಬೆಂಗಳೂರು, ಜುಲೈ 27: ರೈತರಿಗೆ ಪರಿಹಾರದ ನಿವೇಶನ ವಿತರಿಸುವುದಾಗಿ ಬಿಡಿಎ ಭರವಸೆ ನೀಡಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಪಾರಿಹಾರ ರೂಪದ ನಿವೇಶನ ಕಾಲಮಿತಿಯಲ್ಲಿ ವಿತರಿಸುವುದಾಗಿ ಬಿಡಿಎ ತಿಳಿಸಿದೆ.

ಕೆಂಪೇಗೌಡ ಬಡಾವಣೆ ಫಲಾನುಭವಿಗಳಿಗೆ ಹೊಸ ಆತಂಕ ಶುರು

ಶುಕ್ರವಾರ ಪ್ರಾಧಿಕಾರದ ಕಚೇರಿಯಲ್ಲಿ ಬಿಡಿಎ ಆಯುಕ್ತರು ಹಾಗೂ ರೈತರ ನಡುವೆ ನಡೆದ ಚರ್ಚೆಯಲ್ಲಿ ಈ ಭರವಸೆ ನೀಡಿದ್ದಾರೆ.ಬಡಾವಣೆಯ 4,027 ಎಕರೆ ಪೈಕಿ 2500 ಎಕರೆ ಪ್ರದೇಶದಲ್ಲಿ ನಿವೇಶನ ರಚಿಸಲಾಗಿದೆ. ಜೊತೆಗೆ ಅಂದಾಜು 700 ಎಕರೆಗೆ ಸಂಬಂಧಿಸಿದ ಭೂಮಿಯ ವ್ಯಾಜ್ಯ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಇದು ಶೀಘ್ರ ಇತ್ಯರ್ಥಗೊಂಡಲ್ಲಿ ರೈತರಿಗೆ ತ್ವರಿತ ಪರಿಹಾರ ಒದಗಿಸಬಹುದು ಎಂದು ಹೇಳಿದೆ.

BDA is Ready to Give Compensation Site to Farmers

ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಂಡು ಸರ್ಕಾರದ ಅನುಮೋದನೆಗೆ ಕಡತ ಕಳುಹಿಸಿಕೊಡಲಾಗುವುದು. ಇದಕ್ಕೆ ಒಪ್ಪಿಗೆ ದೊರೆತರೆ ರೈತರಿಗೆ ನಿವೇಶನ ವಿತರಿಸಲಾಗುವುದು .

ಇದಲ್ಲದೆ ವ್ಯಾಜ್ಯವಿಲ್ಲದ ನಿವೇಶನ ನೀಡಲು ಯಾವುದೇ ಸಮಸ್ಯೆ ಇಲ್ಲ ಎಂದು ಆಯುಕ್ತರು ಅಭಯ ನೀಡಿದ್ದಾರೆ. ಮುಖ್ಯವಾಗಿ ಬಡಾವಣೆ ಮಧ್ಯೆ ಹಾದುಹೋಗುವ ಮುಖ್ಯ ಸಂಪರ್ಕ ರಸ್ತೆ ಸಮೀಪದಲ್ಲಿ ಪರಿಹಾರ ನಿವೇಶನ ವಿತರಿಸುವಂತೆ ರೈತರು ಮನವಿ ಮಾಡಿದ್ದಾರೆ.

English summary
Bengaluru Development Authority is Ready to Give Compensational site to Farmers who gave their lands in Kempegowda Layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X