ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿವೇಶನ ಇ-ಹರಾಜಿಗೆ ಅರ್ಜಿ ಕರೆದ ಬಿಡಿಎ; ಎಲ್ಲೆಲ್ಲಿ ಇವೆ ಸೈಟ್

|
Google Oneindia Kannada News

ಬೆಂಗಳೂರು, ಜೂನ್ 19 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಾಸಯೋಗ್ಯ ಮೂಲೆ ಮತ್ತು ಮಧ್ಯಂತರ ನಿವೇಶನಗಳ ಇ-ಹರಾಜಿಗೆ ಪ್ರಕಟಣೆ ಹೊರಡಿಸಿದೆ. 6/7/2020ರ ಸಂಜೆ 4 ಗಂಟೆಯ ತನಕ ಆಸಕ್ತರು ಬಿಡ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ.

Recommended Video

ಮತ್ತೆ ಕ್ರಿಕೆಟ್ ಅಂಗಳಕ್ಕೆ ವಾಪಸಾದ ಶ್ರೀಶಾಂತ್ | Sreesanth | Oneindia Kannada

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( ಬಿಡಿಎ)ದ ಮೂಲೆ ನಿವೇಶನಗಳು, ಮಧ್ಯಂತರ ನಿವೇಶನಗಳು, ವಾಣಿಜ್ಯ ನಿವೇಶನಗಳು ಮತ್ತು ಇತರೆ ಹರಾಜು ಮಾಡಬಹುದಾದದ ನಿವೇಶನಗಳ ವಿಲೇವಾರಿ ನಿಯಮಾವಳಿ 1984ರ ಅನುಸಾರ ಹರಾಜು ನಡೆಸಲಾಗುತ್ತದೆ.

ಬಿಡಿಎ ನಿವೇಶನಗಳ ಹಂಚಿಕೆ; ಅಧಿಸೂಚನೆ ಪ್ರಕಟ ಬಿಡಿಎ ನಿವೇಶನಗಳ ಹಂಚಿಕೆ; ಅಧಿಸೂಚನೆ ಪ್ರಕಟ

ನಿವೇಶನಗಳು ಎಲ್ಲಿ ಹೇಗಿವೆಯೋ ಹಾಗಿರುವ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುತ್ತದೆ ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ. ನೇರ ಬಿಡ್ಡಿಂಗ್‌ ಅನ್ನು 20/6/2020ರ ಬೆಳಗ್ಗೆ 11ಕ್ಕೆ ಆರಂಭಿಸಲಾಗುತ್ತದೆ.

ಬಿಡಿಎ ಮೂಲೆ ನಿವೇಶನಗಳ ಮಾರಾಟ ಅಷ್ಟು ಸುಲಭವಾಗಿಲ್ಲ ಬಿಡಿಎ ಮೂಲೆ ನಿವೇಶನಗಳ ಮಾರಾಟ ಅಷ್ಟು ಸುಲಭವಾಗಿಲ್ಲ

ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರಿಗೆ 6/7/2020ರ ಸಂಜೆ 4 ಗಂಟೆ ತನಕ ಅವಕಾಶವಿದೆ. ಇ-ಹರಾಜನ್ನು 7/7/2020ರ ಸಂಜೆ 6 ಗಂಟೆಗೆ ಮುಕ್ತಾಯಗೊಳಿಸಲಾಗುತ್ತದೆ. ಪ್ರತಿ ಚದರ ಮೀಟರ್‌ಗೆ ರೂ. 500ಗಳ ಗುಣಕಗಳಲ್ಲಿ ಬಿಡ್ ದರದ ಕನಿಷ್ಠ ಏರಿಕೆ ಇರುತ್ತದೆ.

ಮನೆ, ಕಾರು ಖರೀದಿ ಇನ್ನು ಅಗ್ಗ: ಬಡ್ಡಿ ದರ ಕಡಿತಗೊಳಿಸಿದ ದೇಶದ 2ನೇ ದೊಡ್ಡ ಬ್ಯಾಂಕ್ಮನೆ, ಕಾರು ಖರೀದಿ ಇನ್ನು ಅಗ್ಗ: ಬಡ್ಡಿ ದರ ಕಡಿತಗೊಳಿಸಿದ ದೇಶದ 2ನೇ ದೊಡ್ಡ ಬ್ಯಾಂಕ್

ಬಿಡಿಎ ಸೈಟ್‌ಗಳ ಇ-ಹರಾಜು

ಬಿಡಿಎ ಸೈಟ್‌ಗಳ ಇ-ಹರಾಜು

ಸರ್. ಎಂ. ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ1ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 8ನೇ ಬ್ಲಾಕ್ ಮತ್ತು 9ನೇ ಬ್ಲಾಕ್‌ನಲ್ಲಿ ನಿವೇಶನಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ.

ಎಲ್ಲೆಲ್ಲಿ ನಿವೇಶನಗಳಿವೆ?

ಎಲ್ಲೆಲ್ಲಿ ನಿವೇಶನಗಳಿವೆ?

ಬನಶಂಕರಿ 6ನೇ ಹಂತ 10ನೇ ಬ್ಲಾಕ್, ಪೂರ್ವ ಎನ್‌ಜಿಎಫ್ ಲೇಔಟ್, ಬಿಟಿಎಂ 4ನೇ ಹಂತ 2ನೇ ಬ್ಲಾಕ್, ಜೆ. ಪಿ. ನಗರ 8ನೇ ಫೇಸ್ 1ನೇ ಬ್ಲಾಕ್, 2ನೇ ಬ್ಲಾಕ್, ಜೆ. ಪಿ. ನಗರ 9ನೇ ಫೇಸ್ 3ನೇ ಬ್ಲಾಕ್, 7ನೇ ಬ್ಲಾಕ್, ಅಂಜನಾಪುರ ಲೇಔಟ್ 11ನೇ ಬ್ಲಾಕ್‌ಗಳಲ್ಲಿ ಸೈಟ್‌ಗಳಿವೆ.

ಬಿಡಿಎ ನಿವೇಶನಗಳ ವಿವರ

ಬಿಡಿಎ ನಿವೇಶನಗಳ ವಿವರ

ಬಿಎಸ್‌ಕೆ 6ನೇ ಹಂತ 6ನೇ ಬ್ಲಾಕ್, 9ನೇ ಬ್ಲಾಕ್, ಹೆಚ್. ಎಸ್. ಆರ್. ಲೇಔಟ್, ಹೆಚ್‌. ಎಸ್‌. ಆರ್. ಲೇಔಟ್ 2ನೇ ಸೆಕ್ಟರ್, 3ನೇ ಸೆಕ್ಟರ್, 6ನೇ ಸೆಕ್ಟರ್, ಮುಂದುವರೆದ ಬಡಾವಣೆ ಬನಶಂಕರಿ 6ನೇ ಹಂತ 4ನೇ ಬ್ಲಾಕ್ (ವಾಜರಹಳ್ಳಿ ಗ್ರಾಮ), ಗುಬ್ಬಾಲಾಳ ಗ್ರಾಮ, ಬನಶಂಕರಿ 6ನೇ ಹಂತ 11ನೇ ಬ್ಲಾಕ್, ರಾಜಾಜಿನಗರ 1ನೇ 'ಎನ್' ಬ್ಲಾಕ್‌ನಲ್ಲಿ ಸೈಟ್‌ಗಳಿವೆ.

ನಿಬಂಧನೆಗಳೇನು?

ನಿಬಂಧನೆಗಳೇನು?

* ಹರಾಜಿನಲ್ಲಿ ಭಾಗವಹಿಸುವವರು ಭಾರತೀಯ ಪ್ರಜೆಯಾಗಿರಬೇಕು
* ಪ್ರತಿ ನಿವೇಶನಕ್ಕೆ ಇ. ಎಂ. ಡಿ ಮೊತ್ತ ರೂ. 4 ಲಕ್ಷ ನಿಗದಿಗೊಳಿಸಿದ್ದು, ಮೊತ್ತವನ್ನು ಹಾಗೂ ಇ-ಹರಾಜಿನ ಶುಲ್ಕುವನ್ನು ಇ-ಪ್ರೊಕ್ಯೂರ್‌ಮೆಂಟ್‌ ಪೋರ್ಟ್‌ಲ್‌ನಲ್ಲಿರುವಂತೆ ಪಾವತಿ ಮಾಡಬೇಕು. ಆದರೆ, ಸದರಿ ಮೊತ್ತವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಖಾತೆಗೆ ಪಾವತಿಸಬಾರದು.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

English summary
Bangalore Development Authority (BDA) issued notification for the auctioning for corner sites. People can bid for site till 6/7/2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X