ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆ: ಸೈಟ್‌ ಹಂಚಿಕೆದಾರರ ತಾತ್ಕಾಲಿಕ ಪಟ್ಟಿ ಪ್ರಕಟ

By Nayana
|
Google Oneindia Kannada News

ಬೆಂಗಳೂರು, ಜೂನ್‌ 30: ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ಸೀಟು ಹಂಚಿಕೆ ಪ್ರಕ್ರಿಯೆ ಬಜೆಟ್‌ ಮುಗಿದ ಮೇಲೆ ಆರಂಭಗೊಳ್ಳಲಿದ್ದರೂ ಹಂಚಿಕೆದಾರರದ ತಾತ್ಕಾಲಿಕ ಪಟ್ಟಿಯನ್ನು ಬಿಡಿಎ ಬಿಡುಗಡೆ ಮಾಡಿದೆ.

5 ಸಾವಿರ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಪಟ್ಟಿ ಪ್ರಕಟಿಸಲಾಗಿದೆ. ಹಿರಿತನದಲ್ಲಿ ಅರ್ಜಿದಾರರ ವಯಸ್ಸು, ಸೈಟ್‌ ಪಡೆಯಲು ಪ್ರಯತ್ನ, ಮೀಸಲು ನಿಯಮಾವಳಿಯನ್ನು ಪರಿಗಣಿಸಲಾಗಿದೆ. ವಿವರಗಳನ್ನು ಬಿಡಿಎ ವೆಬ್‌ಸೈಟ್‌ನಿಂದ ಪಡೆಯಬಹುದಾಗಿದೆ.

ಎರಡನೇ ಹಂತದಲ್ಲಿ 20/30 ಅಡಿ ವಿಸ್ತೀರ್ಣದ ಸೈಟ್ ವರ್ಗದಲ್ಲಿ ಎಡಬ್ಲ್ಯೂಎಸ್‌ಗೆ 1 ಸಾವಿರ ಮಂದಿಗೆ ಹಾಗೂ ಸಾಮಾನ್ಯ ಬರ್ಗಕ್ಕೆ 500 ಸೈಟ್‌ ಮೀಸಲಿಡಲಾಗಿದೆ. 30/40 ಅಡಿ ಸೈಟ್‌ 2500 ಮಂದಿಗೆ, 40/60 ಅಡಿ ಸೈಟ್‌ 700 ಮಂದಿಗೆ ಹಾಗೂ 50/80 ಅಡಿ ವಿಸ್ತೀರ್ಣದ ಸೈಟ್‌ 700 ಮಂದಿಗೆ ಹಂಚಿಕೆ ಮಾಡಲಾಗುತ್ತದೆ.

ರಾಜ್ಯ ಬಜೆಟ್‌ ನಂತರ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ ರಾಜ್ಯ ಬಜೆಟ್‌ ನಂತರ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ

ಒಂದು ವರ್ಷದಿಂದ ಅರ್ಜಿಗಳ ಪರಿಶೀಲನೆಗೆ ದೀರ್ಘ ಸಮಯ ಹಿಡಿದಿದೆ. ಅರ್ಜಿದಾರರು ಠೇವಣಿ ಹಣ ಪಾವತಿಸಿದ್ದರೂ, ಕಾಲಮಿತಿಯಲ್ಲಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಾಧಿಕಾರಕ್ಕೆ ಸಾಧ್ಯವಾಗಿರಲಿಲ್ಲ, ಮೊದಲ ಹಂತದಲ್ಲಿ ಐದು ಸಾವಿರ ನಿವೇಶನ ಹಂಚಿಕೆಗೆ ಎರಡು ವರ್ಷ ಹಿಡಿದಿತ್ತು.

ಎರಡನೇ ಹಂತದಲ್ಲೂ ಅಷ್ಟೇ ಸಂಖ್ಯೆಯ ಸೈಟ್‌ ಹಂಚಿಕೆ ವೇಳೆ ವಿಳಂಬ ಮಾಡುವುದಿಲ್ಲ ಎಂಬ ವಾಗ್ದಾನ ಹುಸಿಯಾಗಿದೆ. ವಿಳಂಬಕ್ಕಾಗಿ ಸಾರ್ವಜನಿಕರು ಕಚೇರಿಗೆ ಕರೆ ಮಾಡಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಂಪೇಗೌಡ ಬಡಾವಣೆ: ಆಕ್ಷೇಪಣೆಗೆ 10 ದಿನ ನಿಗದಿ

ಕೆಂಪೇಗೌಡ ಬಡಾವಣೆ: ಆಕ್ಷೇಪಣೆಗೆ 10 ದಿನ ನಿಗದಿ

ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ತಪ್ಪುಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಜು.10ರವರೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಗಳನ್ನು ಲಿಖಿತ ರೂಪದಲ್ಲಿ ಪ್ರಾಧಿಕಾರದ ಕಾರ್ಯದರ್ಶಿಗೆ ತಲುಪಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಡುವು ಮುಗಿದ ಬೆನ್ನಲ್ಲೇ ಅಂತಿಮ ಪಟ್ಟಿ ಬಿಡುಗಡೆ ಭರವಸೆ

ಗುಡುವು ಮುಗಿದ ಬೆನ್ನಲ್ಲೇ ಅಂತಿಮ ಪಟ್ಟಿ ಬಿಡುಗಡೆ ಭರವಸೆ

ಮೊದಲ ಹಂತದ ಹಂಚಿಕೆ ಸಂದರ್ಭ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಪಟ್ಟಿ ಬಿಡುಗಡೆ ವಿಳಂಬವಾದ ಕಾರಣ ಕಾಲಾವಕಾಶವನ್ನು ಕಡಿಮೆಗೊಳಿಸಲಾಗಿದೆ. ಗಡುವುದು ಮುಗಿದ ಬೆನ್ನಲ್ಲೇ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುವ ವಾಗ್ದಾನವನ್ನು ಬಿಡಿಎ ನೀಡಿದೆ.

ವಿಧಾನಸಭೆ ಚುನಾವಣೆ ನೀತಿ ಸಂಹಿತೆಯಿಂದ ಸೀಟು ಹಂಚಿಕೆ ವಿಳಂಬ

ವಿಧಾನಸಭೆ ಚುನಾವಣೆ ನೀತಿ ಸಂಹಿತೆಯಿಂದ ಸೀಟು ಹಂಚಿಕೆ ವಿಳಂಬ

ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12ರಂದು ನಡೆದಿದೆ, ಇದರ ನೀತಿ ಸಂಹಿತೆಯಿಂದಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆ ಎರಡನೇ ಹಂತದ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗಿತ್ತು. ನಂತರ ಜಯನಗರ, ರಾಜರಾಜೇಶ್ವರಿ ನಗರ ಚುನಾವಣೆ ವಿಳಣಬವಾದ ಕಾರಣ ಇದರ ಮೇಲೆ ಪರಿಣಾಮ ಬೀರಿತ್ತು.

ಎಷ್ಟು ಮಂದಿಗೆ ಎಷ್ಟು ಚದರಡಿ ಸೈಟ್‌

ಎಷ್ಟು ಮಂದಿಗೆ ಎಷ್ಟು ಚದರಡಿ ಸೈಟ್‌

1 ಸಾವಿರ ಮಂದಿಗೆ 20/30 ಅಡಿ ವಿಸ್ತೀರ್ಣದ ಸೈಟ್‌, 2500 ಮಂದಿಗೆ 30/40 ಚದರಡಿ, 700 ಮಂದಿಗೆ 40/60 ಚದರಡಿ, 700 ಮಂದಿಗೆ 50/80 ಚದರಡಿ ಸೈಟ್‌ ನೀಡಲಾಗುತ್ತಿದೆ, ಬಜೆಟ್‌ ನಂತರ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

English summary
Bengaluru Development Authority has announced list of sites allocation in second phase of Nadaprabhu Kempegowda layout. The authority has given 10 days to file objections from public if any.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X