ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ, ದರಪಟ್ಟಿ

|
Google Oneindia Kannada News

ಬೆಂಗಳೂರು, ಮೇ 19 : 5 ವರ್ಷಗಳ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಮುಂದಿನ 10 ವರ್ಷಗಳಲ್ಲಿ ಈ ಯೋಜನೆಯಿಂದ ಬಿಬಿಎಂಪಿ 397.46 ಕೋಟಿ ಆದಾಯದ ನಿರೀಕ್ಷೆಯಲ್ಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಐದು ವರ್ಷಗಳ ಹಿಂದೆ ಬಿಬಿಎಂಪಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಪ್ರಸ್ತಾವನೆ ಸಿದ್ಧಪಡಿಸಿತ್ತು. ನಗರದ 85 ರಸ್ತೆಗಳಲ್ಲಿ ಡಿಸೆಂಬರ್‌ನಲ್ಲಿ ಯೋಜನೆ ಜಾರಿಗೆ ಬರಲಿದೆ. ಯೋಜನೆಗೆ ಕರೆದಿದ್ದ ಎರಡು ಟೆಂಡರ್ ರದ್ದಾಗಿತ್ತು. ಈಗ ಮೂರನೇ ಟೆಂಡರ್ ಅಂತಿಮಗೊಂಡಿದೆ.

ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಜಗಳ, 10 ರೂ.ಗೆ ಕೊಲೆ!ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಜಗಳ, 10 ರೂ.ಗೆ ಕೊಲೆ!

ಬಿಬಿಎಂಪಿ ಸಿದ್ಧಪಡಿಸಿದ್ದ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ. ಬಿಲ್ಡಿಂಗ್ ಕಂಟ್ರೋಲ್ ಸಲ್ಯೂಷನ್ ಇಂಡಿಯಾ ಪ್ರೈ.ಲಿ. ಯೋಜನೆಯ ಟೆಂಡರ್ ಪಡೆದಿದೆ. ನಗರದ ರಸ್ತೆಗಳನ್ನು ಪ್ರೀಮಿಯಂ, ಸ್ಟಾಂಡರ್ಡ್, ಸ್ಮಾಲರ್ ಸ್ಟ್ರೀಟ್ ಎಂದು ವಿಭಜನೆ ಮಾಡಲಾಗಿದೆ.

ಬೆಂಗಳೂರಿನ 12 ಕಡೆಗಳಲ್ಲಿ ಸ್ಮಾರ್ಟ್ ಬಸ್‌ ನಿಲ್ದಾಣ, ವಿಶೇಷತೆಯೇನು?ಬೆಂಗಳೂರಿನ 12 ಕಡೆಗಳಲ್ಲಿ ಸ್ಮಾರ್ಟ್ ಬಸ್‌ ನಿಲ್ದಾಣ, ವಿಶೇಷತೆಯೇನು?

BBMPs smart parking system come to effect from December

ಬ್ರಿಗೇಡ್ ರಸ್ತೆ, ರೇಸ್ ಕೋರ್ಸ್ ರಸ್ತೆ ಮುಂತಾದವುಗಳು ಪ್ರೀಮಿಯಂ ವಿಭಾಗಕ್ಕೆ ಸೇರುತ್ತವೆ. ಎಸ್‌.ಪಿ.ರೋಡ್, ಧನ್ವಂತರಿ ರಸ್ತೆ, ಕಸ್ತೂರ ಬಾ ರಸ್ತೆ, ಪ್ಯಾಲೇಸ್ ರಸ್ತೆ ಸ್ಟಾಂಡರ್ಡ್ ವಿಭಾಗದಲ್ಲಿವೆ. ಚಿಕ್ಕಪೇಟೆ, ಬಳೆಪೇಟೆ, ಬನ್ನಪ್ಪ ಪಾರ್ಕ್ ರಸ್ತೆ ಸ್ಮಾಲರ್ ಸ್ಟ್ರೀಟ್ ವ್ಯಾಪ್ತಿಗೆ ಸೇರುತ್ತದೆ.

ಪ್ರೀಮಿಯಂ, ಸ್ಟಾಂಡರ್ಡ್ ಮತ್ತು ಸ್ಮಾಲರ್ ಸ್ಟ್ರೀಟ್ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಪ್ರತ್ಯೇಕವಾಗಿರುತ್ತದೆ. ಆದರೆ, ಎಲ್ಲಾ ರಸ್ತೆಗಳಲ್ಲಿ ಸೈಕಲ್ ಪಾರ್ಕಿಂಗ್ ಉಚಿತವಾಗಿರುತ್ತದೆ.

ದರಪಟ್ಟಿ

* ಪ್ರೀಮಿಯಂ ರಸ್ತೆ : ಕಾರು 30, ಬೈಕ್ 15
* ಸ್ಟಾಂಡರ್ಡ್ ರಸ್ತೆ : ಕಾರು 20, ಬೈಕ್ 10
* ಸ್ಮಾಲರ್ ರಸ್ತೆ : ಕಾರು 15, ಬೈಕ್ 5 ರೂ.

English summary
In a month of December 2019 BBMP's smart parking system come into effect on 85 roads of Bengaluru city. The roads have been classified into a premium, standard and smaller.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X