• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೌರಕಾರ್ಮಿಕರಿಗೆ ಇಸ್ಕಾನ್‌ ಬದಲಾಗಿ ಇಂದಿರಾ ಕ್ಯಾಂಟೀನ್‌ ಊಟ

By Nayana
|

ಬೆಂಗಳೂರು, ಜು.27: ಇಸ್ಕಾನ್ ದರ ಹೆಚ್ಚಳ ಮಾಡುವ ಬೇಡಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಗಸ್ಟ್ 10 ರಿಂದ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕವೇ ಮಧ್ಯಾಹ್ನದ ಬಿಸಿಯೂಟ ನೀಡಲು ಬಿಬಿಎಂಪಿ ನಿರ್ಧರಿಸಿದೆ‌.

ಈ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಮಾತನಾಡಿ, ಇದುವರೆಗೆ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರಿಗೆ ಇಸ್ಕಾನ್‌ ವತಿತಿಂದ 20 ರೂಗೆ ಊಟವನ್ನು ನೀಡಲಾಗುತ್ತಿತ್ತು, ಆದರೆ ಇಸ್ಕಾನ್‌ನವರು ಒಂದು ಊಟಕ್ಕೆ 25 ರೂ ನೀಡುವಂತೆ ಕೇಳುತ್ತಿರುವ ಹಿನ್ನೆಲೆಯಲ್ಲಿ ಇಸ್ಕಾನ್‌ ಜತೆಗೆ ಇದ್ದ ಒಪ್ಪಂದವನ್ನು ಕಡಿತ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ಆರೋಪ ತಳ್ಳಿಹಾಕಿದ ಯು.ಟಿ. ಖಾದರ್

ಪೌರ ಕಾರ್ಮಿಕರಿಗೆ ಆ.10ರಿಂದ ಪೌರಕಾರ್ಮಿಕರಿಗೆ 20 ರೂ.ಗೆ ಇಂದಿರಾ ಕ್ಯಾಂಟೀನ್‌ ಊಟವನ್ನು ನೀಡಲಾಗುತ್ತದೆ. ಇಸ್ಕಾನ್‌ನಿಂದ ಪೂರೈಸುವ ಆಹಾರದ ಕುರಿತು ಪೌರಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಹಿಂದೆ ಪಾಲಿಕೆಯು ಇಸ್ಕಾನ್‌ ಜೊತೆ ಒಪ್ಪಂದವನ್ನು ಕೈಬಿಡಲು ಮುಂದಾಗಿತ್ತು.

ಇಸ್ಕಾನ್‌ನಿಂದ ಪೂರೈಕೆಯಾಗುವ ಆಹಾರದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಬಳಸುವುದಿಲ್ಲ. ಹೀಗಾಗಿ ಆಹಾರ ರುಚಿಯಾಗಿರುವುದಿಲ್ಲ. ಹೀಗಾಗಿ ಆಹಾರ ಬದಲಿಸಬೇಕು ಎಂದು ಪೌರಕಾರ್ಮಿಕರು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಇಸ್ಕಾನ್‌ ಬದಲಿಗೆ ಇಂದಿರಾ ಕ್ಯಾಂಟೀನ್‌ಗಳಿಂದಲೇ ಆಹಾರ ಸರಬರಾಜು ಮಾಡಲು ನಿರ್ಧರಿಸಲಾಗಿದೆ.

English summary
BBMP commissionaire Manjunath Prasad has said that the agreement with Iskcon will be withdrawn as the Iskcon was sought more price on food and the BBMP will distribute lunch for poura karmikas through Indira Canteen from August 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X