ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚಿದ ನೀರಿನ ಬೇಡಿಕೆ, ಟ್ಯಾಂಕರ್ ಬಾಡಿಗೆ ಪಡೆದು ನೀರು ಪೂರೈಸಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಏ.1: ಬೆಂಗಳೂರಲ್ಲೂ ನೀರಿಗೆ ಹಾಹಾಕಾರ ಆರಂಭವಾಗಿದೆ. ಜಲಮೂಲಗಳು ಬತ್ತುತ್ತಿವೆ. ಬೋರ್‌ವೆಲ್‌ಗಳಲ್ಲೂ ನೀರಿಲ್ಲ. ನೀರಿಗೆ ಬೇಡಿಕೆ ಹೆಚ್ಚಾಗಿದೆ.

ಬೇಡಿಕೆ ವಿಪರೀತವಾದ ಕಾರಣ ಬಿಬಿಎಂಪಿಯು ನೀರಿನ ಟ್ಯಾಂಕರ್‌ ಬಾಡಿಗೆ ಪಡೆದು ಜನರಿಗೆ ನೀರು ಪೂರೈಕೆ ಮಾಡಲು ಆರಂಭಿಸಿದೆ.

ಜಲಮಂಡಳಿಯಲ್ಲಿ ಟ್ಯಾಂಕರ್‌ಗಳ ಕೊರತೆಯಿಂದಾಗಿ ಕಾವೇರಿ ನೀರಿನ ಅಭಾವವಿರುವ ಪ್ರದೇಶಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ.

ಈಗ ಬಿಬಿಎಂಪಯಿಂದಲೇ ಎಂಟು ವಲಯಗಳಲ್ಲಿ ಒಟ್ಟು 4 ಲಕ್ಷ ರೂ ಮೊತ್ತದ ಪ್ರತ್ಯೇಕ ಟೆಂಡರ್ ಕರೆದು ಟ್ಯಾಂಕರ್ ಬಾಡಿಗೆಗೆ ಪಡೆಯುವ ಪ್ರಕ್ರಿಯೆ ಆರಂಭಿಸಿದೆ.

ನೀರಿನ ಮಿತ ಬಳಕೆ ಜಾಗೃತಿಗೆ 'ಹಾಫ್ ಬಕೆಟ್ ಚಾಲೆಂಜ್': ನೀವೂ ಸ್ವೀಕರಿಸಿ ನೀರಿನ ಮಿತ ಬಳಕೆ ಜಾಗೃತಿಗೆ 'ಹಾಫ್ ಬಕೆಟ್ ಚಾಲೆಂಜ್': ನೀವೂ ಸ್ವೀಕರಿಸಿ

ಕಾವೇರಿ ನೀರಿನ ಸಂಪರ್ಕ ಹೊಂದಿರುವಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಕಡಿಮೆ ಒತ್ತಡದಿಂದ ನೀರು ಬಾರದೆ ಇದ್ದರೆ ಜಲಮಂಡಳಿಯಿಂದ ಟ್ಯಾಂಕರ್ ನೀರು ಪೂರೈಸಲಾಗು್ತತದೆ. ಜಲಮಂಡಳಿ ಬಳಿ 68 ಟ್ಯಾಂಕರ್ ಗಳು ಮಾತ್ರ ವಿದೆ.

vBBMP will supply water through rented tankers

ಸರಿಯಾದ ಸಮಯಕ್ಕೆ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಬಿಬಿಎಂಪಿ ಕಾರ್ಪೊರೇಟರ್‌ಗಳು 110 ಹಳ್ಳಿಗಳಿಗೆ ಟ್ಯಾಂಕರ್ ನೀರು ಪೂರೈಸುವಂತೆ ಜಲಮಂಡಳಿಗೆ ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾನುವಾರ, ಸರ್ಕಾರಿ ರಜಾದಿನಗಳಲ್ಲಿ ನೀರು ಪೂರೈಸಬೇಕು. ಟ್ಯಾಂಕರ್‌ಗಳು ನಿಗದಿಪಡಿಸಿದ ಬಡಾವಣೆಗೆ ತೆರಳಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಜಿಪಿಎಸ್ ಉಪಕರಣ ಅಳವಡಿಸಿರಬೇಕು. ಪ್ರತಿ ದಿನ 7 ಟ್ರಿಪ್ ಮಾಡಬೇಕೆಂದು ಟೆಂಡರ್‌ನಲ್ಲಿ ಷರತ್ತು ವಿಧಿಸಲಾಗಿದೆ. 43 ಜಲಾಗಾರಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.

English summary
110 villages of BBMP is suffering water shortage. So BBMP is supplying water through rented water tanks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X