ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ.ರಾಜ್‌ಕುಮಾರ್ ನೆಟ್ಟು ನೀರೆರೆದಿದ್ದ ಪಿಂಕ್ ಫ್ಲವರ್ ಗಿಡ ಸಂರಕ್ಷಣೆಗೆ ಕ್ರಮ

|
Google Oneindia Kannada News

ಬೆಂಗಳೂರು, ಏಪ್ರಿಲ್ 04: ನಗರದ ಸಜ್ಜನ್ ರಾವ್ ವೃತ್ತದ ಉದ್ಯಾನದಲ್ಲಿ ನೆಲಕ್ಕೆ ಬಾಗಿದ್ದ ಡಾ. ರಾಜ್‌ಕುಮಾರ್ ನೆಟ್ಟಿದ್ದ ಪಿಂಕ್ ಫ್ಲವರ್ ಗಿಡ ಸಂರಕ್ಷಣೆಗೆ ಬಿಬಿಎಂಪಿ ಮುಂದಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಭೂಮಿಗೆ ಬಾಗಿದ್ದ ಗಿಡವನ್ನು ನಿಲ್ಲಿಸಲಾಗಿದ್ದು, ಮಳೆ ಮತ್ತು ಗಾಳಿಗೆ ಗಿಡ ಮತ್ತೆ ಬೀಳದಂತೆ ಹಗ್ಗಗಳಿಂದ ಎಳೆದು ಕಟ್ಟಲಾಗಿದೆ. 2005ರ ಜುಲೈ.2ರಂದು ವಿಶ್ವಪರಿಸರ ದಿನವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದ ಅಂದಿನ ಬಸವನಗುಡಿ ಕ್ಷೇತ್ರದ ಶಾಸಕ ಕೆ. ಚಂದ್ರಶೇಖರ್ ಅವರು ವಿಧೇಶದಿಂದ ಪಿಂಕ್ ಪೇಪರ್ ಫಲ್ವರ್ ಗಿಡವನ್ನು ತರಿಸಿದ್ದರು.

ಜ್ಞಾನಭಾರತಿ: ಒಂದು ವರ್ಷದಲ್ಲಿ 36 ಗಂಧದ ಮರ ಕಳವುಜ್ಞಾನಭಾರತಿ: ಒಂದು ವರ್ಷದಲ್ಲಿ 36 ಗಂಧದ ಮರ ಕಳವು

ಸಜ್ಜನ್ ರಾವ್ ವೃತ್ತದ ಮಧ್ಯಭಾಗದಲ್ಲಿರುವ ಪಾರ್ಕ್ ನಲ್ಲಿ ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರು ಗಿಡವನ್ನು ನೆಟ್ಟು, ನೀರೆರೆದಿದ್ದರು. ಗಿಡದ ಸುತ್ತ ಕಬ್ಬಿಣದ ಬೇಲಿ ನಿರ್ಮಿಸಿ ಬಂದೋಬಸ್ತ್ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಬಿದ್ದ ಮಳೆಗೆ ಗಿಡದ ಬುಡ ಕುಸಿದು ನೆಲಕ್ಕುರುಳಿತ್ತು.

BBMP will save pink flower tree which is planted by Dr. Rajkumar

ಈ ಕುರಿತು ಸ್ಥಳೀಯರು ಕೂಡ ಬೇಸರ ವ್ಯಕ್ತಪಡಿಸಿದ್ದರು, ಇದಕ್ಕೆ ಸ್ಪಂದಿಸಿದ ಬಿಬಿಎಂಪಿ ಅಧಿಕಾರಿಗಳು ಕೂಡಲೇ ಗಿಡವನ್ನು ಸಂರಕ್ಷಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಬಿಬಿಎಂಪಿ ಸಿಬ್ಬಂದಿ ಗಿಡವನ್ನು ಎತ್ತಿ ನಿಲ್ಲಿಸಿ ಹಗ್ಗ ಕಟ್ಟಿ ಬೀಳದಂತೆ ಸಂರಕ್ಷಿಸಿದ್ದಾರೆ.

ಈಗಾಗಲೇ ಈ ಪಾರ್ಕ್ ನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶನೇಶ್ವರ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ಬಿದ್ದುಹೋಗುತ್ತಿರುವ ಪಿಂಕ್ ಪೇಪರ್ ಫ್ಲವರ್ ಗಿಡವನ್ನು ತೆರವುಗೊಳಿಸಿ ದೇವಸ್ಥಾನಗಳನ್ನು ನಿರ್ಮಿಸುವ ಸಂಚು ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು.

English summary
Veteran Kannada Actor Dr. Rajkumar planted pink tree in Sajjan rao circle. BBMP now will take special care for this tree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X