ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 198 ವಾರ್ಡ್ ಗಳಿಗೆ ಬೈಕ್ ಆಂಬುಲೆನ್ಸ್!

|
Google Oneindia Kannada News

ಬೆಂಗಳೂರು, ಜನವರಿ 10: ನಗರದ 198 ಬಿಬಿಎಂಪಿ ವಾರ್ಡ್ ಗಳಲ್ಲಿ ಪ್ರತಿ ಎರಡು ವಾರ್ಡ್ ಗಳಿಗೆ ಒಂದರಂತೆ ಬೈಕ್ ಆಂಬುಲೆನ್ಸ್ಗಳು ಶೀಘ್ರದಲ್ಲಿ ಲಭ್ಯವಾಗಲಿದೆ.

ತುರ್ತು ಚಿಕಿತ್ಸೆ ಅಗತ್ಯವಿರುವ ಅದೆಷ್ಟೋ ರೋಗಿಗಳಿಗೆ ಟ್ರಾಫಿಕ್ ಜಾಮ್ ನಿಂದಾಗಿ ಸಕಾಲಕ್ಕೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಹೀಗಾಗಿ ಮಾರ್ಗ ಮಧ್ಯದಲ್ಲೇ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಅಂತ್ಯ ಹಾಡಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಇದೇ ಮೊದಲ ಬಾರಿಗೆ ಸ್ವಿಚಕ್ರ ವಾಹನ ಅಂಬುಲೆನ್ಸ್ ಸೇವೆ ಆರಂಭಿಸುತ್ತಿದೆ.

ಸಂಕ್ರಾಂತಿ ವಿಶೇಷ ಪುಟ

ಅಪಘಾತದಲ್ಲಿ ಗಾಯಗೊಂಡವರು ಮತ್ತು ರೋಗಿಗಳಿಗೆ ಸಕಾಲದಲ್ಲಿ ಉಚಿತ ತುರ್ತು ಸೇವೆ ಒದಗಿಸಲು ದ್ವಿಚಕ್ರ ಮಾದರಿಯ ಅಂಬುಲೆನ್ಸ್ ಸೇವೆಯನ್ನು ಪಾಲಿಕೆ ಪ್ರಾರಂಭಿಸಲು ತೀರ್ಮಾನಿಸಿದೆ. ಆರೋಗ್ಯ ಇಲಾಖೆಯು ನಗರದಲ್ಲಿ 19 ಬೈಕ್ ಆಂಬುಲೆನ್ಸ್ಗಳಿಂದ ತುರ್ತು ಚಿಕಿತ್ಸೆ ಕಲ್ಪಿಸುತ್ತಿದೆ. ಆದರೆ, ಈ ಅಂಬುಲೆನ್ಸ್ ಗಳು 800 ಚ.ಅಡಿ ವಿಸ್ತೀರ್ಣದಲ್ಲಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ.

ಹಾಗಾಗಿ ಬಿಬಿಎಂಪಿಯ ಆರೋಗ್ಯ ಸ್ಥಾಯಿ ಸಮಿತಿಯ ಜನಸಾಮಾನ್ಯರು ಮತ್ತು ಅಪಘಾತಕ್ಕೊಳಗಾಗಿ ಅಸಹಾಯಕರಾಗಿರುವವರಿಗೆ ಪ್ರಥಮ ಚಿಕಿತ್ಸೆ ಸೇವೆ ಒದಗಿಸಲು ದ್ವಿಚಕ್ರ ವಾಹನ ಮೊಬೈಲ್ ಆಂಬುಲೆನ್ಸ್ ಎಂಬ ಯೋಜನೆ ಜಾರಿಗೊಳಸುತ್ತಿದೆ.

 ದ್ವಿಚಕ್ರ ಆಂಬುಲೆನ್ಸ್ ನಲ್ಲಿ ಮಹಿಳೆಯರಿಗೆ ಮೀಸಲು

ದ್ವಿಚಕ್ರ ಆಂಬುಲೆನ್ಸ್ ನಲ್ಲಿ ಮಹಿಳೆಯರಿಗೆ ಮೀಸಲು

ಬಿಬಿಎಂಪಿಯ ದ್ವಿಚಕ್ರ ವಾಹನ ಮೊಬೈಲ್ ಆಂಬುಲೆನ್ಸ್ ಸೇವೆಗಾಗಿ 100 ಮಂದಿ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಿದೆ. ಇದರಲ್ಲಿ ಶೇ.50ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಿದೆ. ದ್ವಿಚಕ್ರ ವಾಹನವನ್ನು ವೇಗವಾಗಿ ಮತ್ತು ಚಾಕ ಚಕ್ಯತೆಯಿಂದ ಓಡಿಸುವ ಸಾಮರ್ಥ್ಯ ಹೊಂದಿರುವ ಪುರುಷರು ಮತ್ತು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

100 ಬೈಕ್ ಆಂಬುಲೆನ್ಸ್ ಖರೀದಿ

100 ಬೈಕ್ ಆಂಬುಲೆನ್ಸ್ ಖರೀದಿ

ಪ್ರತಿ ಎರಡು ವಾರ್ಡ್ ಗಳಿಗೆ ಒಂದು ದ್ವಿಚಕ್ರ ವಾಹನ ಮೊಬೈಲ್ ಆಂಬುಲೆನ್ಸ್ವಾಹನ ಒದಗಿಸಲಾಗುತ್ತಿದೆ. ಈ ವಾಹನಗಳು ನಿಗದಿತ ಸ್ಥಳದಲ್ಲಿ ನಿಲುಗಡೆಯಾಗಿರುತ್ತದೆ. ಆಂಬುಲೆನ್ಸ್ಸೇವೆಗಾಗಿಯೇ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ನಿಯಂತ್ರಣಾ ಕೊಠಡಿಯೊಂದನ್ನು ಸ್ಥಾಪಿಸಲಾಗುತ್ತಿದೆ. ಜನರು ಈ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಅಪಘಾತದ ಮಾಹಿತಿ ನೀಡಿದಾಕ್ಷಣ, ಸ್ಥಳೀಯ ಆಂಬುಲೆನ್ಸ್ ಸಿಬ್ಬಂದಿಗೆ ಸಂದೇಶ ರವಾನೆಯಾಗುತ್ತದೆ. ಅವರು ಸ್ಥಳಕ್ಕೆ ತೆರಳಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಿದ್ದಾರೆ.

ಆಂಬುಲೆನ್ಸ್ ಸೇವೆಗೆ1 ಕೋಟಿ ಖರ್ಚು

ಆಂಬುಲೆನ್ಸ್ ಸೇವೆಗೆ1 ಕೋಟಿ ಖರ್ಚು

2017-18 ನೇ ಸಾಲಿನ ಬಜೆಟ್ ನಲ್ಲಿ ಶವ ಸಾಗಣೆ ವಾಹನ ಖರೀದಿ, ಆರೋಗ್ಯ ಮತ್ತು ನೈರ್ಮಲ್ಯೀಕರಣಕ್ಕೆ 2 ಕೋಟಿ ರೂ ಗಳ ಅನದಾನ ಮೀಸಲಿಡಲಾಗಿದೆ. ಇದರಲ್ಲಿ ಒಂದು ಕೋಟಿ ರೂ. ಹಣವನ್ನು ಆಂಬುಲೆನ್ಸ್ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಆಂಬುಲೆನ್ಸ್ ಕೆಲವೇ ಕ್ಷಣಗಳಲ್ಲಿತಲುಪಿ ಗಾಯಾಳುಗಳಿಗೆ ಶುಶ್ರೂಷೆ ನೀಡಲಿದೆ. ನರ್ಸಿಂಗ್ ಕೋರ್ಸ್ ಅಭ್ಯಸಿಸಿ, ಶುಶ್ರೂಷೆಯಲ್ಲಿ ಪರಿಣತಿ ಹೊಂದಿರುವ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಮೊಬೈಲ್ ಆಂಬುಲೆನ್ಸ್ ನಲ್ಲಿ ಏನೇನಿದೆ

ಮೊಬೈಲ್ ಆಂಬುಲೆನ್ಸ್ ನಲ್ಲಿ ಏನೇನಿದೆ

ಪ್ರತಿಯೊಂದು ಬೈಕ್ ಆಂಬುಲೆನ್ಸ್ ಗೂ ಜಿಪಿಎಸ್ ಅಳವಡಿಸಲಾಗುತ್ತದೆ. ಅಪಘಾತಕ್ಕೀಡಾದವರಿಗೆ ಸಕಾಲದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ದ್ವಿಚಕ್ರ ವಾಹನ ಬೊಮೈಲ್ ಅಂಬುಲೆನ್ಸ್ ಕಿಟ್ ನಲ್ಲಿ ಗ್ಲುಕೊಮೀಟರ್, ಆಕ್ಸಿಜನ್ ಸಿಲಿಂಡರ್, ಹೃದಯ ಬಡಿತ, ರಕ್ತದೊತ್ತಡ ಪರೀಕ್ಷಿಸುವ ಉಪಕರಣಗಳು, ಇನ್ ಕ್ಯುಬೇಟರ್ ಕಿಟ್, ಬ್ಯಾಂಡೇಜ್ ಮತ್ತು ಇನ್ನಿತರೆ ಜೀವರಕ್ಷಕ ಔಷಧಗಳು, ಉಪಕರಣಗಳಿರುತ್ತವೆ.

English summary
BBMP has decided to provide each bike ambulance to every two wards to serve medical emergencies in 198 wards of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X