ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯ ಉದ್ಯಾನದಲ್ಲಿ ಹುತಾತ್ಮ ಯೋಧ ಗುರು ಪ್ರತಿಮೆ ನಿರ್ಮಾಣ

|
Google Oneindia Kannada News

ಬೆಂಗಳೂರು, ಮಾರ್ಚ್ 2: ಇತ್ತೀಚೆಗಷ್ಟೇ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮಡಿದ ಮಂಡ್ಯದ ಯೋಧ ಗುರು ಅವರ ಪ್ರತಿಮೆಯನ್ನು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸಲು ಬಿಬಿಎಂಪಿ ಆಲೋಚನೆ ನಡೆಸಿದೆ.

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗುರು ಅವರು ವೀರ ಮರಣ ಹೊಂದಿದ್ದು, ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪಾಲಿಕೆಯ 198 ಸದಸ್ಯರಿಗೆ ಒಂದು ತಿಂಗಳ ಗೌರವಧನವನ್ನು ಅವರಿಗೆ ನೀಡಲು ಹಿಂದೆ ನಿರ್ಧರಿಸಲಾಗಿತ್ತು. ಅದರಂತೆ ಇದೀಗ ಚೆಕ್ ನೀಡಲಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದರು.

ಹುತಾತ್ಮ ಯೋಧ ಗುರು ಪುಣ್ಯತಿಥಿಯಂದೇ ಉಗ್ರರನ್ನು ಚೆಂಡಾಡಿದ ಸೇನೆ ಹುತಾತ್ಮ ಯೋಧ ಗುರು ಪುಣ್ಯತಿಥಿಯಂದೇ ಉಗ್ರರನ್ನು ಚೆಂಡಾಡಿದ ಸೇನೆ

ಹುತಾತ್ಮ ಯೋಧ ಕುಟುಂಬಕ್ಕೆ 25 ಲಕ್ಷ ರೂ ಪಾಲಿಕೆವತಿಯಿಂದ ನೀಡಲಾಗುತ್ತಿದೆ. ಯೋಧ ಗುರು ಸ್ಮರಣಾರ್ಥ ಬೆಂಗಳೂರಲ್ಲಿ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಲು ಆಲೋಚಿಸಿದ್ದೇವೆ ಸ್ವಾತಂತ್ರ್ಯ ಉದ್ಯಾನದಲ್ಲಿಯೇ ಅವರ ಪ್ರತಿಮೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

BBMP will build martyred Guru statue at Freedom Park

ಸಂದರ್ಭದಲ್ಲಿ ಆಡಳಿತ ಪಕ್ಷ ನಾಯಕ ಅಬ್ದುಲ್ ವಾಜಿದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಉಪಸ್ಥಿತರಿದ್ದರು.

English summary
BBMP want to built martyred Guru statue at Bengaluru so they decided to build statue at Freedom park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X