ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಮನೆಗೆ ವೋಟರ್ ಸ್ಲಿಪ್ ವಿತರಣೆ ಕಾರ್ಯ ಆರಂಭ

By Nayana
|
Google Oneindia Kannada News

ಬೆಂಗಳೂರು,ಮೇ 3: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಮನೆಗೆ ಬಾಗಿಲಿಗೆ ಗುರುವಾರದಿಂದ ವೋಟರ್ ಸ್ಲಿಪ್ ತಲುಪಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ವೋಟರ್ ಸ್ಲಿಪ್ ಜತೆಗೆ ಮತದಾನದ ಮಾರ್ಗದರ್ಶಿ ಕೈಪಿಡಿಯನ್ನು ಸಹ ನೀಡಲಾಗುತ್ತದೆ. ನಗರದಲ್ಲಿ ಒಟ್ಟು 91,13,095 ಮಂದಿ ಮತದಾರರಿದ್ದು, ಚುನಾವಣಾ ಸಿಬ್ಬಂದಿಯು ಮನೆ ಮನೆಗೆ ಭೇಟಿ ನೀಡಿ ವೋಟರ್ ಸ್ಲಿಪ್ ಗಳನ್ನು ವಿತರಿಸಲಿದ್ದಾರೆ.

ಮತದಾರರಿಗೆ ವೋಟರ್ಸ್ ಗೈಡ್ ಹಂಚಿಕೆ: ರಾಜ್ಯದಲ್ಲಿ ಮೊದಲ ಪ್ರಯೋಗಮತದಾರರಿಗೆ ವೋಟರ್ಸ್ ಗೈಡ್ ಹಂಚಿಕೆ: ರಾಜ್ಯದಲ್ಲಿ ಮೊದಲ ಪ್ರಯೋಗ

ಈ ವೋಟರ್ ಸ್ಲಿಪ್ ನಲ್ಲಿ ಮತದಾರರ ಹೆಸರು, ಭಾವಚಿತ್ರ, ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆಯ ವಿವರವಿರಲಿದೆ. ಇದೇ ಮೊದಲ ಬಾರಿಗೆ ಮತದಾನದ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡುವ ಕೈಪಿಡಿಯನ್ನೂ ಕೂಡ ನೀಡಲಾಗುತ್ತದೆ. ಅಲ್ಲದೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದವರಿಗೆ ಚುನಾವಣಾ ಗುರುತಿನ ಚೀಟಿಯನ್ನು ಇದೇ ಸಂದರ್ಭದಲ್ಲಿ ವಿತರಿಸಲಿದ್ದಾರೆ.

BBMP will bring voters slip to doorstep

ನಗರ ಜಿಲ್ಲಾಡಳಿತ ಮತ್ತು ಪಾಲಿಕೆಯ 8278 ಮಂದಿ ಸಿಬ್ಬಂದಿ ಮತದಾರರ ಮನೆ ಬಾಗಿಲಿಗೆ ವೋಟರ್ ಸ್ಲಿಪ್, ಮತದಾನ ಮಾರ್ಗದರ್ಶಿ ಕೈಪಿಡಿ ಮತ್ತು ಚುನಾವಣಾ ಗುರುತಿನ ಚೀಟಿಯನ್ನು ತಲುಪಿಸುವ ಕೆಲಸ ಮಾಡಲಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೂರು ದಿನಗಳ ಕಾಲ ವೋಟರ್ ಸ್ಲಿಪ್ ಗಳನ್ನು ವಿತರಿಸಲಾಗುತ್ತದೆ. ಮನೆಯಲ್ಲಿ ಲಭ್ಯವಿಲ್ಲದವರಿಗೆ ಮತದಾನದ ದಿನದಂದದು ಮತಗಟ್ಟೆಗಳ ಬಳಿಯೇ ವೋಟರ್ ಸ್ಲಿಪ್‌ಗಳನ್ನು ವಿತರಿಸಲಾಗುತ್ತದೆ. ಇದಕ್ಕೂ ಅಗತ್ಯ ಸಿದ್ಧತೆಗಳನ್ನು ಪಾಲಿಕೆ ಕೈಗೊಂಡಿದೆ.

ಪಾಲಿಕೆ ಸಿಬ್ಬಂದಿಯು ಮೇ 6ರವರೆಗೆ ವೋಟರ್ ಸ್ಲಿಪ್, ಮತದಾನ ಮಾರ್ಗದರ್ಶಿ ಕೈಪಿಡಿಯನ್ನು ಮತದಾರರ ಮನೆ ಮನೆಗೆ ತೆರಳಿ ವಿತರಣೆ ಮಾಡಲಿದ್ದಾರೆ. ಈ ಬಾರಿ ಹೊಸದಾಗಿ 4.40 ಲಕ್ಷ ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

English summary
BBMP will distribute voter's slip to doorstep in 28 assembly constituencies in Bengaluru from May 3. Voters will get hand book along with voter's list in a first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X