ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ಹಾನಿಯಿಂದ ಉಂಟಾಗುವ ಸಾವಿಗೆ ಬಿಬಿಎಂಪಿ ಹೊಣೆ- ಎಎಪಿ ಎಚ್ಚರ

|
Google Oneindia Kannada News

ಬೆಂಗಳೂರು, ಮೇ 18: ಕೊರೊನಾ ಮಹಾ ಭೀತಿಯ ಪರಿಹಾರ ಕಾರ್ಯಗಳಲ್ಲಿ ಮಗ್ನರಾಗಿ ಮುಂಬರುವ ಮುಂಗಾರಿನಿಂದ ಬೆಂಗಳೂರಿನ ಹಲವು ಭಾಗಗಳು ಹಾನಿಯಾಗಿ ಸಾವು ನೋವುಗಳು ಸಂಭವಿಸುವ ಮುನ್ನೆಚ್ಚರಿಕೆ ಗೊತ್ತಿದ್ದರೂ ಸಹ ನಿರ್ಲಕ್ಷ್ಯ ಮಾಡಿಕೊಂಡೇ ಬಂದಿರುವ ಬಿಬಿಎಂಪಿ ಈ ಬಗೆಗಿನ ಮುಂಜಾಗ್ರತಾ ಕೆಲಸಗಳ ಕಡೆಗೆ ಗಮನ ಹರಿಸದೆ ದಿವ್ಯ ನಿರ್ಲಕ್ಷ್ಯವಹಿಸಿರುವುದು ನೋಡಿದರೆ ಈ ಬಾರಿಯ ಮಳೆಗಾಲ ಬೆಂಗಳೂರನ್ನು ನರಕ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಆಮ್ ಅದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

Recommended Video

ಗೌಡರ ಹೆಸರಲ್ಲಿ ರಕ್ತದಾನ ಮಾಡಿದ ಶರವಣ | TA Sharavana | JDS

ಜೂನ್ 4 ರಿಂದ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೂ ಸಹ ಕೇವಲ ವಿಪತ್ತು ನಿರ್ವಹಣಾ ಪಡೆಯನ್ನು ಸ್ಥಾಪಿಸಿ, ಕೈಚೆಲ್ಲಿ ಕುಳಿತಿರುವ ಬಿಬಿಎಂಪಿಯಿಂದ ಸರ್ಮರ್ಥ ಆಡಳಿತ ನಿರ್ವಹಣೆ ಇದುವರೆವಿಗೂ ಸಾಧ್ಯವಾಗಿಲ್ಲ. ಈ ವೈಫಲ್ಯದ ಕುರಿತಾಗಿ ಆಮ್ ಆದ್ಮಿ ಪಕ್ಷವು ಮಳೆ ಅವಘಡದ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಹಲವು ಬಾರಿ ಎಚ್ಚರಿಕೆಯನ್ನು, ದೂರುಗಳನ್ನು, ಮನವಿ ಪತ್ರಗಳನ್ನು ನೀಡಿದ್ದರೂ ಸಹ ಬಿಬಿಎಂಪಿ ಅಧಿಕಾರ ವರ್ಗ ಯಾವುದೇ ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ಎಎಪಿ ಅಸಮಾಧಾನ ಹೊರಹಾಕಿದೆ.

ಮುಂದಿನ 6 ಗಂಟೆಗಳಲ್ಲಿ ತೀವ್ರಗೊಳ್ಳಲಿದೆ 'ಅಂಫಾನ್' ಚಂಡಮಾರುತಮುಂದಿನ 6 ಗಂಟೆಗಳಲ್ಲಿ ತೀವ್ರಗೊಳ್ಳಲಿದೆ 'ಅಂಫಾನ್' ಚಂಡಮಾರುತ

ರಾಜಕಾಲುವೆಗಳ ಅಭಿವೃದ್ಧಿ ನೆಪದಲ್ಲಿ ಬೆಂಗಳೂರಿನ ಕೆಲ ಶಾಸಕರುಗಳು, ಮಂತ್ರಿಗಳು, ಹಾಗೂ ಮಹಾನಗರ ಪಾಲಿಕೆ ಸದಸ್ಯರುಗಳು ಅಧಿಕಾರ ದುರುಪಯೋಗ - ಸ್ವಜನ ಪಕ್ಷಪಾತದಿಂದಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆಯುವುದರಲ್ಲಿ ಮಾತ್ರ ನಿರತರಾಗಿದ್ದಾರೆ. ರಾಜಕಾಲುವೆಗಳ ಅಭಿವೃದ್ಧಿ -ನಿರ್ಮಾಣಗಳಲ್ಲಿ ಯಾವುದೇ ನೀತಿ ನಿಯಮಗಳು ಪಾಲನೆಯಾಗದೇ ಕಳಪೆ ಕಾಮಗಾರಿಗಳಾಗಿವೆ.

ನೂರಾರು ತೊಂದರೆಗಳು

ನೂರಾರು ತೊಂದರೆಗಳು

ನಗರದಲ್ಲಿ ಮಳೆಯಿಂದ ಹಾನಿಗೆ ಒಳಗಾಗುವ ಸುಮಾರು 211 ತಗ್ಗು ಪ್ರದೇಶಗಳಿವೆ ಎಂಬುದು ಒಂದು ಲೆಕ್ಕಾಚಾರವಾದರೆ ಒಂದು ಸಮೀಕ್ಷೆಯ ಪ್ರಕಾರ ಸುಮಾರು 517 ತಗ್ಗು ಪ್ರದೇಶಗಳಿದ್ದು ಪ್ರತಿ ವರ್ಷ ಮಳೆಗಾಲದಲ್ಲಿ ಕಿರಿಕಿರಿ ಅನುಭವಿಸುತ್ತಲೇ ಇವೆ, ಮನೆ ಮುಳುಗಡೆ, ಮನೆ ಕುಸಿತ, ರಸ್ತೆ ಕುಸಿತ, ನೀರು ನುಗ್ಗುವುದು ಹೀಗೆ ನೂರಾರು ತೊಂದರೆಗಳು ಇದ್ದರು ಬಿಬಿಎಂಪಿ ಎನ್ನುವ ಬೃಹತ್ ಭ್ರಷ್ಟಾಚಾರ ಸಂಸ್ಥೆ ಯುದ್ದ ಕಾಲದಲ್ಲಿ ಮತ್ತೆ ಶಸ್ತ್ರಾಭ್ಯಾಸ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಮುಳುಗಡೆ ಆದ ವೇಳೆಗೆ ಒಂದಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳುವ ಬದಲು ಈ ಕೂಡಲೇ ಕ್ರಮಗಳನ್ನು ಈಗಲೇ ತೆಗೆದುಕೊಂಡರೆ ಒಳಿತಲ್ಲವೇ ಎಂದು ಎಎಪಿ ಆಗ್ರಹಿಸಿದೆ.

ಕಾಲರ ರೋಗ ಹಬ್ಬುತ್ತಿದೆ

ಕಾಲರ ರೋಗ ಹಬ್ಬುತ್ತಿದೆ

ಕಳೆದ ವರ್ಷ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಸುಮಾರು 1,380 ಕೋಟಿಯಷ್ಟು ಹಣ ಬೆಂಗಳೂರು ನಗರ ಒಂದರಲ್ಲೆ ನಷ್ಟ ಉಂಟಾಗಿತ್ತು. ಇಷ್ಟಾದರೂ ಎಚ್ಚೆತ್ತು ಕೊಳ್ಳದ ಬಿಬಿಎಂಪಿ ಆಡಳಿತ ಪಕ್ಷ ತಣ್ಣಗೆ ಎಸಿ ಕೊಠಡಿಯಲ್ಲಿ ಕುಳಿತುಕೊಂಡಿತ್ತು. ಅವಘಡ ಸಂಭವಿಸಿದ ದಿವಸ ಮೇಯರ್ ಹಾಗೂ ಇನ್ನಿತರ ಅಧಿಕಾರಿಗಳು ಕಾಲ್ ಸೆಂಟರ್ ನಲ್ಲಿ ಕುಳಿತುಕೊಂಡು ಸಂತ್ರಸ್ತರ ಅಳಲನ್ನು ಕೇಳಿಸಿಕೊಳ್ಳುವ ಕಾರ್ಯದಲ್ಲಿ ಮಾತ್ರ ತೃಪ್ತರಾಗಿದ್ದಾರೆ. ಕೊರೊನಾ ಗಲಾಟೆಯಲ್ಲಿ ಬೆಂಗಳೂರಿನಲ್ಲಿ ಕಾಲರ ರೋಗ ವ್ಯಾಪಕವಾಗಿ ಎಲ್ಲ ಕಡೆ ಹಬ್ಬುತ್ತಿದೆ. ಸಾಂಕ್ರಮಿಕ ರೋಗಗಳಿಂದ ಜನ ಇನ್ನಷ್ಟು ಬಳಲಬೇಕಾಗುತ್ತದೆ.

ಎಲ್ಲಿಗೆ ಹೋಗಬೇಕು? ಏನು ಮಾಡಬೇಕು?

ಎಲ್ಲಿಗೆ ಹೋಗಬೇಕು? ಏನು ಮಾಡಬೇಕು?

ಮೇ ತಿಂಗಳಲ್ಲಿ ಅಲ್ಲಲ್ಲಿ ಸುರಿದ ಸಣ್ಣ ಪ್ರಮಾಣದ ಮಳೆಯಿಂದಲೇ ಬೆಂಗಳೂರಿನ ಹಲವು ಭಾಗಗಳ ರಸ್ತೆಗಳು, ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯ ಮೇಲಿದ್ದ ಒಂದೆರಡು ವಾಹನಗಳೇ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಕಸ್ಮಾತ್ ಮನೆಗಳಿಗೆ ನೀರು ನುಗ್ಗಿದರೆ ಜನ ಎಲ್ಲಿಗೆ ಹೋಗಬೇಕು? ಏನು ಮಾಡಬೇಕು. ಕೊರೊನಾ ಸೋಂಕು ಇನ್ನೂ ತಹಬಂದಿಗೆ ಬರದ ಈ ಹೊತ್ತಿನಲ್ಲಿ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ಹರಿದರೆ ಅಲ್ಲಿನ ನಿವಾಸಿಗಳ ಗತಿ ಏನು ಹಾಗೂ ಅವರಿಗೆ ಆಹಾರ, ವಸತಿ ಹೀಗೆ ಮೂಲ ಸೌಕರ್ಯಗಳ ಪೂರೈಕೆಗೆ ಹೆಣಗಾಡಬೇಕಾಗುತ್ತದೆ. ಈ ಸಂದಿಗ್ಧ ಪರಿಸ್ಥಿತಿಗೆ, ಆತಂಕಕ್ಕೆ ಸರ್ಕಾರ ಹಾಗೂ ಬಿಬಿಎಂಪಿಯ ಬೇಜವಾಬ್ದಾರಿತನವೇ ಕಾರಣವಾಗಿದೆ. ಎಂದು ಎಎಪಿ ಪ್ರಶ್ನೆ ಮಾಡಿದೆ.

ಬಿಬಿಎಂಪಿಯ ಜವಾಬ್ದಾರಿ

ಬಿಬಿಎಂಪಿಯ ಜವಾಬ್ದಾರಿ

ಇನ್ನು ಮುಂದೆ ಸುರಿಯುವ ಮಳೆಗೆ ಬೆಂಗಳೂರು ಮತ್ತಷ್ಟು ತತ್ತರಿಸುವುದನ್ನು ಕಡಿಮೆ ಮಾಡಲು ಮುಂದಾಗಬೇಕು. ಇಂತಹ ಪರಿಸ್ಥಿತಿ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ ಅನಾಹುತವನ್ನು ನಿಯಂತ್ರಿಸಲು ಮುಂದಾಗಬೇಕು. ಕೊರೊನಾ ಕಾರಣವನ್ನು ಮುಂದಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಇದ್ದರೆ, ಮುಂದಾಗುವ ಅವಘಡಗಳಿಗೆ ಬಿಬಿಎಂಪಿಯ ಜವಾಬ್ದಾರಿ ಹೊತ್ತಿರುವ ಮೇಯರ್ ಮತ್ತು ಆಯುಕ್ತರನ್ನೆ ನೇರ ಹೊಣೆ ಮಾಡಬೇಕಾಗುತ್ತದೆ. ಎಂದು ಆಮ್ ಆದ್ಮಿ ಪಾರ್ಟಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.

ತುರ್ತು ಪರಿಹಾರ ಕಾರ್ಯ

ತುರ್ತು ಪರಿಹಾರ ಕಾರ್ಯ

ಭಾರಿ ಮಳೆ ಬಂದರೆ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಕ್ಷಣವೇ ಬಿಬಿಎಂಪಿಯು ಯೋಜನೆಯೊಂದನ್ನು ರೂಪಿಸಿ ಕಾರ್ಯನಿರತವಾಗಬೇಕು. ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಕ್ಷಿಪ್ರ-ಕಾರ್ಯಪಡೆ, ಮಳೆ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಅಗತ್ಯ ಮತ್ತು ಅವಶ್ಯಕ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿಗಳ ವ್ಯವಸ್ಥೆಯನ್ನು ಮಾಡಬೇಕು. ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಸ್ಪಂದಿಸಲು ಶಾಶ್ವತ ಸಹಾಯವಾಣಿ ಸ್ಥಾಪನೆ ಆಗಬೇಕು. *ಭಾರೀ ಮಳೆಯಿಂದ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಕೂಡಲೇ ವಿಶೇಷ ಕಾಮಗಾರಿ ಹಾಗೂ ನಿಗಾ ಇರಿಸಲು ತಂಡ ರಚಿಸಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ.

English summary
BBMP Mayor and Commissioner will be directly responsible for any deaths caused by monsoon-related disasters in Bengaluru- AAP Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X