ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ: ವಿಚಾರಣೆ ಆ.29ಕ್ಕೆ ಮುಂದೂಡಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್ 17: ಬಿಬಿಎಂಪಿ ಚುನಾವಣೆಯ ವಾರ್ಡ್ ಪುನರ್ ವಿಂಗಡಣೆಯನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.‌ ವಾದ ಪ್ರತಿವಾದ ಆಲಿಸಿದ ಕೋರ್ಟ್ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ. ಅರ್ಜಿಯ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ.

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೊರ್ಟ್ ನಡೆಸಿತು.ನ್ಯಾ. ಹೇಮಂತ್ ಚಂದನ್ ಗೌಡರ್ ಪೀಠದಲ್ಲಿ ನಡೆದ ಅರ್ಜಿಯ ವಿಚಾರಣೆಯ ವೇಳೆ ಚುನಾವಣಾ ಆಯೋಗದ ಪರ ಕೆ.ಎನ್. ಫಣೀಂದ್ರ ವಾದವನ್ನು ಮಂಡಿಸಿದರು.ಸೆ.22ರೊಳಗೆ ಮತದಾರರ ಪಟ್ಟಿ ಅಂತಿಮವಾಗಲಿದೆ. ಸೆ.22ರ ಬಳಿಕ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಸಹ ಪ್ರಾರಂಭವಾಗಲಿದೆ.ಸುಪ್ರೀಂ ಕೋರ್ಟ್ ಶೀಘ್ರ ಚುನಾವಣೆಯನ್ನು ನಡೆಸಲು ಸೂಚನೆ ನೀಡಿದೆ. ಅರ್ಜಿದಾರದು ಆಕ್ಷೇಪಣೆಗಳಿದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಿ ಎಂದು ವಾದಿಸಿದರು.

ಬಿಬಿಎಂಪಿ: ಅಂತಿಮ ವಾರ್ಡ್‌ ಮೀಸಲಾತಿ ಪಟ್ಟಿ ಪ್ರಕಟ- ಯಾವ ವಾರ್ಡ್‌ ಯಾರಿಗೆ ಮೀಸಲು? ಬಿಬಿಎಂಪಿ: ಅಂತಿಮ ವಾರ್ಡ್‌ ಮೀಸಲಾತಿ ಪಟ್ಟಿ ಪ್ರಕಟ- ಯಾವ ವಾರ್ಡ್‌ ಯಾರಿಗೆ ಮೀಸಲು?

ಸರ್ಕಾರ ನಿನ್ನೆ ಮೀಸಲಾತಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ವಾರ್ಡ್ ಪುನರ್ ವಿಂಗಡಣೆ ತಡೆ ನೀಡಲು ಅರ್ಜಿದಾರರ ಪರ ವಕೀಲರು ಮನವಿಯನ್ನು ಮಾಡಿದರು. ಇದಕ್ಕೆ ನ್ಯಾಯಪೀಠ ಸರ್ಕಾರ ಎಲ್ಲವನ್ನು ತರಾತುರಿಯಲ್ಲೇ ಮಾಡುತ್ತಿದೆ, ಸುಪ್ರೀಂನಿಂದಲೇ ಸ್ಪಷ್ಟನೆ ಪಡೆಯುವುದು ಸೂಕ್ತ ಎಂದು ನ್ಯಾ. ಹೇಮಂತ್ ಚಂದನ್ ಗೌಡರ್ ಅಭಿಪ್ರಾಯಪಟ್ಟಿದ್ದಾರೆ‌ ಇನ್ನು ಮಧಯಂತರ ಆದೇಶ ನೀಡಲು ಕೋರ್ಟ್ ನಿರಾಕರಿಸಿದೆ.

BBMP wards Delimitation: High Court Hearing adjourned to Aug 29

Recommended Video

ಭಾರತ-ಜಿಂಬಾಬ್ವೆ ಮೊದಲ ಪಂದ್ಯದಲ್ಲಿರ್ತಾರಾ ಆರ್‌.ಸಿ.ಬಿ ಹುಡುಗ ಶಾಬಾಜ್..? *Cricket | OneIndia Kannada

ವಾರ್ಡ್ ಪುನರ್ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿಯ ವಾದ ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿದೆ. ಅದೇನಾದ್ರು ನ್ಯಾಯಾಲಯಗಳು ಮಧ್ಯಪ್ರವೇಶ ಮಾಡದಿದ್ದರೆ ಬಿವಿಎಂಪಿ ಚುನಾವಣೆ ಶೀಘ್ರವೇ ನಡೆಯಲಿದೆ ಎಂಬುದಂತೂ ನಿಶ್ಚಿತ. ಒಂದು ವೇಳೆ ಯಾರಾದರು ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿ ಬಿಬಿಎ‍ಪಿ ಚುನಾವಣೆ, ವಾರ್ಡ್‌ ಮರು ವಿಂಗಡಣೆ, ಮೀಸಲಾತಿಯನ್ನು ಪ್ರಶ್ನಿಸಿ ತಡೆಯನ್ನು ತರಲು ಸಾಧ್ಯವಾದರೇ ಮಾತ್ರ ಬಿಬಿಎಂಪಿ ಚುನಾವಣೆ ಮಂದೂಡಿಕೆಯಾಗಲಿದೆ.

English summary
The High Court heard the petition challenging the Delimitation of BBMP election wards. After hearing the arguments, the court refused to issue an interim order. The hearing of the petition was adjourned to August 29, know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X