ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking News: ಬಿಬಿಎಂಪಿ ವಾರ್ಡ್ ಮರುವಿಂಗಡಣೆ ವಿರುದ್ಧ ಮೊದಲ ಆಕ್ಷೇಪಣೆ

|
Google Oneindia Kannada News

ಬೆಂಗಳೂರು, ಜೂನ್ 25:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿದೆ. 198 ವಾರ್ಡ್‌ಗಳ್ನು ಮರುವಿಂಗಡಣೆ ಮಾಡಿ 243 ವಾರ್ಡ್‌ಗಳಿಗೆ ಏರಿಕೆಯನ್ನು ಮಾಡಿದೆ. 2011ರ ಜನಗಣತಿ ಆಧಾರದಲ್ಲಿ ವಾರ್ಡ್ ವಿಂಗಡಣೆ ಮಾಡಲಾಗಿದ್ದರು ವಾರ್ಡ್ ವಿಂಗಡಣೆ ಅವೈಜ್ಞಾನಿಕದ ಆರೋಪ ಕೇಳಿಬಂದಿದೆ.

ವಾರ್ಡ್ ಮರುವಿಂಗಡಣೆಗೆ ಬಗ್ಗೆ ಆಕ್ಷೇಪಗಳಿದ್ದರೇ ಸಂಬಂಧಿಸಿದ ಕಚೇರಿಯಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲು ಸಾರ್ವಜನಿಕರಿಗೆ 15 ದಿನ ಕಾಲಾವಕಾಶವನ್ನು ನೀಡಲಾಗಿದೆ. ವಾರ್ಡ್ ಮರುವಿಂಗಣೆ ಕುರಿತಾಗಿ ಮೊದಲ ಆಕ್ಷೇಪವನ್ನು ಸಲ್ಲಿಸಲು ಬೈರಸಂಧ್ರ ವಾರ್ಡ್ ನಿವಾಸಿಗಳು ಸನ್ನದ್ದರಾಗಿದ್ದಾರೆ.

BBMP ward delimitation; Byrasandra ward residence ready to file first objection

ವಾಡ್೯ ಮರುವಿಂಗಡಣೆಗೆ ಮೊದಲ ಆಕ್ಷೇಪ ಸಿದ್ದವಾಗಿದೆ. ಸಾರ್ವಜನಿಕರ ಅಭಿಪ್ರಾಯ ಸಂಘ ಸಂಸ್ಥೆಗಳ ಅಭಿಪ್ರಾಯವನ್ನೂ ಕೇಳದ ಬಿಬಿಎಂಪಿ ವಾಡ್೯ ಸರ್ವೆ ನಡೆಸದೆ ಎಸಿ ಕಚೇರಿಯಲ್ಲೇ ಕೂತು ವಾಡ್೯ ವಿಂಗಡಣೆ ಮಾಡಿದ್ದಾರೆ. ಹಳೇಯ ವಾರ್ಡ್ ನಂಬರ್ 169ರಲ್ಲಿದ್ದ ಬೈರಸಂದ್ರ ವಾರ್ಡ್ ಮರು ವಿಂಗಡಣೆ ಬಳಿಕ ಸಂಖ್ಯೆ 196ಕ್ಕೆ ಬದಲಾಗಿದೆ. ಈ ವಾರ್ಡ್‌ನಲ್ಲಿಯೇ ಆಕ್ಷೇಪ ವ್ಯಕ್ತವಾಗುತ್ತಿರುವುದು.

BBMP ward delimitation; Byrasandra ward residence ready to file first objection

ಬೈರಸಂದ್ರ ವಾರ್ಡ್‌ನ ಮಧ್ಯಭಾಗದಲ್ಲಿ ಬರುವ ಎಲ್.ಐ.ಸಿ. ಕಾಲೋನಿಯನ್ನು ಎರಡು ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಕೇವಲ 80 ಅಡಿಯಷ್ಟು ವಿಸ್ತೀರ್ಣ ಹೊಂದಿರುವ ಭಾಗವನ್ನು ತೆಗೆದು ಎರಡು ಕಿಲೋಮೀಟರ್ ದೂರ ಇರುವ ವಾಡ್೯ ಗೆ ಸೇರ್ಪಡೆ ಮಾಡಲಾಗಿದೆ. ಅವೈಜ್ಞಾನಿಕ ವಾಡ್೯ ವಿಂಗಡಣೆಗೆ ಎಲ್.ಐ.ಸಿ ಕಾಲೋನಿ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

BBMP ward delimitation; Byrasandra ward residence ready to file first objection

ಎಲ್.ಐ‌.ಸಿ ಅಸೋಸಿಯೇಷನ್ ಮುಖಾಂತರ ಆಕ್ಷೇಪಣೆ ಸಲ್ಲಿಸಲು ಸಜ್ಜಾಗಿದ್ದಾರೆ. ಬೈರಸಂದ್ರ ವಾರ್ಡ್‌ನಲ್ಲಿರುವ ಎಲ್.ಐ.ಸಿ ಕಾಲೋನಿಯ ಸ್ವಲ್ಪ ಭಾಗವನ್ನು ತಿಲಕ್‌ ನಗರ ವಾರ್ಡ್‌ಗೆ ಸೇರ್ಪಡೆ ಮಾಡಿದ್ದಾರೆ. ಅವೈಜ್ಞಾನಿಕ ವಾಡ್೯ ವಿಂಗಡಣೆಗೆ ಮಾಜಿ ಆಡಳಿತ ಪಕ್ಷದ ನಾಯಕ ಬೈರಸಂದ್ರ ನಾಗರಾಜ್ ರಿಂದ ಆಕ್ರೋಶ ಕೇಳಿಬಂದಿದೆ.

English summary
BBMP ward delimitation;Byrasandra ward residence ready to file first objection, LIC colony residence divided Byrasandra ward and Thilaknagar ward so they are said BBMP ward delimitation is nonscientific know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X