ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಎಲ್ಲಾ ಮಕ್ಕಳಿಗೂ ಫ್ಲೂ ಲಸಿಕೆ ನೀಡಲು ಬಿಬಿಎಂಪಿ ನಿರ್ಧಾರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18: ನಗರದಲ್ಲಿ ಎಲ್ಲಾ ಮಕ್ಕಳಿಗೂ ಫ್ಲೂ ಲಸಿಕೆ ನೀಡುವ ಕುರಿತು ಬಿಬಿಎಂಪಿ ನಿರ್ಧರಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, 2 ದಿನದ ಹಿಂದೆ ಮಕ್ಕಳ ತಜ್ಞರ ಸಮಿತಿಯೊಂದಿಗೆ ನಡೆದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮಕ್ಕಳಿಗೆ ಫ್ಲೂ ಲಸಿಕೆ ನೀಡುವ ಬಗ್ಗೆಯೂ ಸಲಹೆಗಳು ಬಂದಿವೆ. ಹೀಗಾಗಿ ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಆರೋಗ್ಯ ಸಮಸ್ಯೆಗಳುಳ್ಳ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲು ಕೊರೊನಾ ಲಸಿಕೆಆರೋಗ್ಯ ಸಮಸ್ಯೆಗಳುಳ್ಳ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲು ಕೊರೊನಾ ಲಸಿಕೆ

ಫೀವರ್ ಫ್ಲೂ ಹಾಗೂ ಕೋವಿಡ್'ಗೂ ಸಂಬಂಧವಿಲ್ಲ. ಯಾವುದೇ ಸಂದರ್ಭದಲ್ಲಿ ಪರೀಕ್ಷೆ ಮಾಡಿಸಬಹುದು. ಆಸ್ಪತ್ರೆಗಳಲ್ಲಿ ದಾಖಲಾಗುವ ವೇಳೆ ಸಹಜವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಫ್ಲೂ ಲಕ್ಷಣ ಇದ್ದವರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ವೈರಲ್ ಫ್ಲೂ ಹಿಂದಿನಿಂದಲೂ ಇದೆ. ಹೀಗಾಗಿ ಫ್ಲೂ ಲಸಿಕಾ ಆಭಿಯಾನ ನಡೆಸಲು ಚಿಂತನೆ ನಡೆಸುತ್ತಿದ್ದು, ಸರ್ಕಾರದ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

BBMP Wants To Give Flu Vaccine To All Children

ಮಕ್ಕಳ ಸಮಿತಿ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಕಾರ್ಯ ನಿರ್ವಹಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಆರೋಗ್ಯ ಇಲಾಖೆಯು ಶೀಘ್ರದಲ್ಲೇ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಫ್ಲೂ ಲಸಿಕೆ ನೀಡುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದೆ. ದೇಶದಲ್ಲಿ 12 ವರ್ಷ ಮತ್ತು ಮೇಲ್ಪಟ್ಟ ಮಕ್ಕಳು ಕೂಡ ಶೀಘ್ರದಲ್ಲೇ ಕರೋನಾ ಲಸಿಕೆ ಪಡೆಯುವುದು ಸಾಧ್ಯವಾಗುತ್ತದೆ.

ಈ ವಯಸ್ಸಿನ ಮಕ್ಕಳಿಗೆ ಅಕ್ಟೋಬರ್ ಮೊದಲ ವಾರದಿಂದ ಲಸಿಕೆ ಹಾಕಲು ಯೋಜಿಸಲಾಗಿದೆ. ಮೊದಲು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಲಸಿಕೆ ನೀಡಲಾಗುವುದು. ದೇಶದಲ್ಲಿ 12 ರಿಂದ 17 ವರ್ಷ ವಯಸ್ಸಿನ ಸುಮಾರು 120 ಮಿಲಿಯನ್ ಮಕ್ಕಳಿದ್ದಾರೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಾಗಿ ಶಾಲೆಗಳನ್ನು ತೆರೆಯಬೇಕು ಎಂದು ಕೋವಿಡ್ ವರ್ಕಿಂಗ್ ಗ್ರೂಪ್ ಹೇಳಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮಕ್ಕಳಿಗೆ ಲಸಿಕೆ ಹಾಕಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಅಂತಿಮ ಹಂತದಲ್ಲಿ ತಯಾರಿ : ದೇಶದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. 12 ವರ್ಷ ಮತ್ತು ಮೇಲ್ಪಟ್ಟ ಮಕ್ಕಳಿಗೆ ಕರೋನಾ ಲಸಿಕೆಯನ್ನು ಡಿಸಿಜಿಐ (DCGI) ಈಗಾಗಲೇ ಅನುಮೋದಿಸಿದೆ. ಜೈಡಸ್ ಕ್ಯಾಡಿಲಾದ ಲಸಿಕೆ ಜೈ ಕೋವ್-ಡಿ ಅನ್ನು ಈ ವರ್ಷದ ಅಕ್ಟೋಬರ್ ಮೊದಲ ವಾರದಿಂದ ಮಕ್ಕಳಿಗೆ ನೀಡಲು ಯೋಜಿಸಲಾಗಿದೆ.

ಎಲ್ಲಾ ಮಕ್ಕಳಿಗೂ ಅಕ್ಟೋಬರ್‌ನಲ್ಲಿ ಲಸಿಕೆ ಹಾಕಲಾಗುವುದಿಲ್ಲ : ಸರ್ಕಾರದ ಯೋಜನೆಯ ಪ್ರಕಾರ, ಅಕ್ಟೋಬರ್ ನಿಂದ 12 ವರ್ಷ ಮತ್ತು ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಲಸಿಕೆಯನ್ನು ನೀಡಲಾಗುವುದಿಲ್ಲ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಗಂಭೀರ ಕಾಯಿಲೆಗಳಲ್ಲಿ ಯಾವ ರೋಗಗಳನ್ನು ಒಳಪಡಿಸಲಾಗುತ್ತದೆ ಎಂದು, ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಮ್ಯುನೈಸಶನ್ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

ಕುಟುಂಬದ ಸದಸ್ಯರಿಗೆ ಲಸಿಕೆ ಹಾಕುವುದು ಕೂಡ ಮಕ್ಕಳಿಗೆ ಸುರಕ್ಷಾ ಕವಚ : ಕೋವಿಡ್ ವರ್ಕಿಂಗ್ ಗ್ರೂಪ್ ನ ಅಧ್ಯಕ್ಷರಾದ ಡಾ. ಎನ್ ಕೆ ಅರೋರಾ ಪ್ರಕಾರ, ಶಾಲೆಗಳನ್ನು ತೆರೆಯಲು ಮಕ್ಕಳಿಗೆ ಲಸಿಕೆ ಅಗತ್ಯವಿಲ್ಲ

ಮಕ್ಕಳಿರುವ ಮನೆಗಳಲ್ಲಿ, ಎಲ್ಲಾ ಪೋಷಕರು ಮತ್ತು ಮನೆಯ ಇತರ ವಯಸ್ಕರಿಗೆ ಲಸಿಕೆ ಹಾಕಬೇಕು ಮತ್ತು ಅದೇ ಸಮಯದಲ್ಲಿ ಶಾಲೆಯಲ್ಲಿ ಶಿಕ್ಷಕರು ಮತ್ತು ಇತರ ಸಿಬ್ಬಂದಿಗೂ ಲಸಿಕೆ ಹಾಕಿಸಬೇಕು. ಹೀಗಾದಲ್ಲಿ ಮಕ್ಕಳು ಸುರಕ್ಷಿತವಾಗಿರುತ್ತಾರೆ. ಈ ಕಾರಣದಿಂದಾಗಿ, ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಾಗಿ ಶಾಲೆಗಳನ್ನು ತೆರೆಯಲು ತಜ್ಞರು ಸಲಹೆ ನೀಡುತ್ತಿದ್ದಾರೆ.

Recommended Video

ಪೆಟ್ರೋಲ್,ಡೀಸೆಲ್ 70 Rs ಆಗುತ್ತೆ ಅಂದ್ಕೊಂಡೋರಿಗೆ ಭಾರೀ ನಿರಾಸೆ | Oneindia Kannada

English summary
Working on the suggestion of the paediatric committee and Technical Advisory Committee, the Bruhat Bengaluru Mahanagara Palike (BBMP) and health department will soon send a proposal to the government on giving mandatory flu vaccine to all children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X