ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಲಸಿಕಾ ವಾಹನಕ್ಕೆ ಚಾಲನೆ; ವಿಶೇಷತೆಗಳು

|
Google Oneindia Kannada News

ಬೆಂಗಳೂರು, ಜೂನ್ 22; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ 'ಲಸಿಕಾ' ವಾಹನಗಳಿಗೆ ಚಾಲನೆ ನೀಡಿದೆ. ಕೋವಿಡ್ ಪರೀಕ್ಷೆಗೆ ಸ್ವ್ಯಾಬ್‌ಗಳನ್ನು ಸಹ ವಾಹನ ಸಂಗ್ರಹ ಮಾಡಲಿದೆ.

ಮಂಗಳವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಬಿಎಂಪಿಯ ಲಸಿಕಾ ಅಭಿಯಾನದ ಅಂಗವಾಗಿ ಲಸಿಕೆ ವಾಹನಗಳಿಗೆ ಚಾಲನೆ ನೀಡಿದರು. ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಲಸಿಕೆ ನೀಡಿದ ನಂತರ ಶಾಲಾ ಕಾಲೇಜು ಪುನರಾರಂಭ; ಯಡಿಯೂರಪ್ಪ ಲಸಿಕೆ ನೀಡಿದ ನಂತರ ಶಾಲಾ ಕಾಲೇಜು ಪುನರಾರಂಭ; ಯಡಿಯೂರಪ್ಪ

ಷಣ್ಮುಖ ಇನ್ನೋವೇಷನ್ಸ್ ತಯಾರಿಸಿರುವ ವಾಹನಗಳು ಐಸಿಎಂಆರ್ ಅನುಮೋದಿತ ಸಂಚಾರಿ ಪ್ರಯೋಗಾಲಯದ ಮೂಲಕ ಕೋವಿಡ್ ಪರೀಕ್ಷೆಗೆ ಸ್ವ್ಯಾಬ್ ಮಾದರಿಗಳನ್ನೂ ಸಹ ನಗರದ ವಿವಿಧ ಭಾಗಗಳಿಂದ ಸಂಗ್ರಹ ಮಾಡಲಿವೆ.

ಕೊರೊನಾ ಲಸಿಕೆ ಅಥವಾ ಜೈಲು ಆಯ್ಕೆ ನಿಮ್ಮದುಕೊರೊನಾ ಲಸಿಕೆ ಅಥವಾ ಜೈಲು ಆಯ್ಕೆ ನಿಮ್ಮದು

 BBMP Vaccine Vans Flagged Off By Chief Minister Yediyurappa

ಬಿಬಿಎಂಪಿಯ ಕೋವಿಡ್ ಲಸಿಕಾ ಅಭಿಯಾನದ ಅಂಗವಾಗಿ ಈ ವಾಹನಗಳು ಈ ವಾಹನಗಳು ನಗರದಾದ್ಯಂತ ಲಸಿಕೆಗಳನ್ನು ವಿತರಿಸುತ್ತವೆ. ಲಸಿಕಾ ಕೇಂದ್ರಗಳಿಗೆ ಲಸಿಕೆಗಳನ್ನು ವಾಹನದ ಮೂಲಕ ತಲುಪಿಸಲಾಗುತ್ತದೆ.

ಭಾರತ: ಕೊರೊನಾವೈರಸ್ ಸಂಖ್ಯೆಯಲ್ಲಿ ಭಾರಿ ಇಳಿಕೆ, ಲಸಿಕೆ ವಿತರಣೆ ಏರಿಕೆ! ಭಾರತ: ಕೊರೊನಾವೈರಸ್ ಸಂಖ್ಯೆಯಲ್ಲಿ ಭಾರಿ ಇಳಿಕೆ, ಲಸಿಕೆ ವಿತರಣೆ ಏರಿಕೆ!

ಒಂದು ವಾಹನದಲ್ಲಿ 8 ಲಸಿಕೆ ಪೆಟ್ಟಿಗೆಗಳು/ 6 ಸಿರಿಂಜ್ ಪೆಟ್ಟಿಗೆಗಳನ್ನು ಸಾಗಿಸಬಲ್ಲದು. ಒಂದು ಬಾರಿಗೆ ಸುಮಾರು 9000 ಡೋಸ್ ಲಸಿಕೆಗಳನ್ನು ಈ ವಾಹನದಲ್ಲಿ ಸಾಗಿಸಬಹುದು.

ಪ್ಯಾರೆಕ್ಸೆಲ್, ಫ್ಲೋಸರ್ವ್, ಕೀಸೈಟ್ ಮತ್ತು ಯುನೈಟೆಡ್ ವೇ ಬೆಂಗಳೂರಿನ ಸಹಭಾಗಿತ್ವದಲ್ಲಿ ಈ ವಾಹನಗಳನ್ನು ಪರಿಚಯಿಸಲಾಗಿದೆ. ಷಣ್ಮುಖ ಇನ್ನೋವೇಷನ್ಸ್ ಬೆಂಗಳೂರಿನಲ್ಲಿ ಈ ವಾಹನಗಳನ್ನು ತಯಾರಿಸಿವೆ.

Recommended Video

IMRAN KHAN- ಪಾಕಿಸ್ತಾನ್ ಪ್ರಧಾನಿ ಹೇಳಿರೋ ಮಾತು ದೇಶದಲ್ಲಿ ಸಂಚಲನ ಮೂಡಿಸಿದೆ! | Oneindia Kannada

ಕರ್ನಾಟಕದಲ್ಲಿಯೇ ಬೆಂಗಳೂರು ನಗರದಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕಿನಿಂದ ನಡೆಯುತ್ತಿದೆ. ಸೋಮವಾರ ಮಹಾ ಲಸಿಕೆ ಅಭಿಯಾನದ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1,72,713 ಡೋಸ್ ಲಸಿಕೆಯನ್ನು ನೀಡಲಾಗಿದೆ.

English summary
As part of BBMP vaccination drive vaccine vans flagged off by chief minister B. S. Yediyurappa. The vans will not only distribute vaccines across Bengaluru but will also collect swab samples for Covid testing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X