ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದ ದೇವೇಂದ್ರಪ್ಪ ಅಮಾನತು

|
Google Oneindia Kannada News

ಬೆಂಗಳೂರು, ಫೆಬ್ರವರಿ 9: ಬೊಮ್ಮನಹಳ್ಳಿ ಎಡಿಟಿಪಿ ದೇವೇಂದ್ರಪ್ಪ ಅವರ ಮನೆ ಮೇಲೆ ಎಸಿಬಿ ದಾಳಿ ಪ್ರಕರಣದ ವಿಚಾರವಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ದೇವೇಂದ್ರಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದರು.

ಈ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಎಸಿಬಿ ತನಿಖಾ ವರದಿ ಬಂದ ಮೇಲೆ ತೀರ್ಮಾನ ಆಗಲಿದ್ದು, ಮಹಾನಗರ ಪಾಲಿಕೆ ಎಲ್ಲ ತೀರ್ಮಾನ ಕೈಗೊಳ್ಳಲು ಸಜ್ಜಾಗಿದೆ. ನಕಲಿ ಒಸಿ, ನಕಲಿ ಸೀಲ್ ಹಾಕಲು ಮನೆಯಲ್ಲಿ ಇಟ್ಟಿದ್ದು, ಅನುಮತಿ ಇಲ್ಲದೇ ಕಟ್ಟಡ ಕಟ್ಟಿದ್ದವರಿಗೆ ಅನುಮತಿ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದರು.

ಕಾಲಿಲ್ಲದಿದ್ದರೂ ಕಂತು ಕಂತು ಲಂಚ: ಎಸಿಬಿ ಬಲೆಗೆ ಬಿದ್ದ ಭ್ರಷ್ಟೇಂದ್ರಪ್ಪ ! ಕಾಲಿಲ್ಲದಿದ್ದರೂ ಕಂತು ಕಂತು ಲಂಚ: ಎಸಿಬಿ ಬಲೆಗೆ ಬಿದ್ದ ಭ್ರಷ್ಟೇಂದ್ರಪ್ಪ !

ಅಕ್ರಮ ಕಟ್ಟಡ ಮಾಲೀಕರಿಗೂ ಒಸಿ ಪಡೆಯಲು ಇಂತಹ ವ್ಯಕ್ತಿಗಳನ್ನು ಬಳಸುತ್ತಿದ್ದ ಮಾಹಿತಿ ಇದೆ. ಈ ಮಾಲೀಕರ ವಿರುದ್ಧವು ಕ್ರಿಮಿನಲ್ ಕೇಸ್ ಹಾಕಲು ತೀರ್ಮಾನವಾಗಿದೆ ಎಂದು ತಿಳಿಸಿದರು.

BBMP Town Planning Official Devendrappa Suspended After Falling Into ACB Trap

ಸದ್ಯ ಕಟ್ಟಡ ಒಸಿ ಇಲ್ಲದೇ ಜಲಮಂಡಳಿ, ಬೆಸ್ಕಾಂ ಸೇವೆ ಸಿಗಲ್ಲ. ಹೀಗಾಗಿ ನಕಲಿ ಸೀಲ್, ದಾಖಲೆ ಸೃಷ್ಟಿಸಿ ಒಸಿ ನೀಡುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಹೀಗಾಗಿ ಸರ್ಕಾರಿ ಕೆಲಸದಿಂದಲೇ ಅಧಿಕಾರಿ ದೇವೇಂದ್ರಪ್ಪನ ವಜಾದ ಬಗ್ಗೆ ಆಲೋಚನೆ ಮಾಡಿ ತೀರ್ಮಾನ ಮಾಡಲಾಗುವುದು ಎಂದರು.

ಕಟ್ಟಡವೊಂದಕ್ಕೆ ಒಸಿ ನೀಡಲು ದೇವೇಂದ್ರಪ್ಪ ಬರೋಬ್ಬರಿ 40 ಲಕ್ಷ ರೂ. ಹಣ ಕೇಳಿದ್ದರಂತೆ. ಅದರ ಅಡ್ವಾನ್ಸ್ ಹಣವಾಗಿ 20 ಲಕ್ಷ ರೂ. ತೆಗೆದುಕೊಳ್ಳೊವಾಗ ಎಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ನಂತರ ವಿಚಾರಣೆಗೆ ಒಳಪಡಿಸಿದಾಗ ಬಿಬಿಎಂಪಿ ಕಚೇರಿಯಲ್ಲೇ ಒಂದಷ್ಟು ನಗದು, ಕಾರಿನಲ್ಲಿ ಏಳುವರೇ ಲಕ್ಷ ಹಣ ಎಲ್ಲವೂ ಸಿಕ್ಕಿತ್ತು.

ಕಾಲಿಲ್ಲದ ಅಧಿಕಾರಿ ಎಂದು ಭಾವಿಸಿದ್ದ ಎಸಿಬಿ ಪೊಲೀಸರೇ ಈಗ ಸುಸ್ತು! ಕಾಲಿಲ್ಲದ ಅಧಿಕಾರಿ ಎಂದು ಭಾವಿಸಿದ್ದ ಎಸಿಬಿ ಪೊಲೀಸರೇ ಈಗ ಸುಸ್ತು!

Recommended Video

ಶಿಕ್ಷಣ ಸಚಿವರಿಂದ ಮಹತ್ವದ ನಿರ್ಧಾರ! | Oneindia Kannada

ನಂತರ ಮನೆಯಲ್ಲಿ ಹುಡುಕಾಡಿದಾಗ ಎಸಿಬಿ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಮನೆಯಲ್ಲಿ ಮಿನಿ ಬಾರ್ ಒಂದು ತೆರೆದುಕೊಂಡಿತ್ತು. ಇಲ್ಲಿ ವಿದೇಶಿ ಸೇರಿದಂತೆ 120 ಲೀಟರ್ ವಿವಿಧ ಬ್ರ್ಯಾಂಡ್ ನ ಮದ್ಯದ ಬಾಟಲ್‍ಗಳು ಪತ್ತೆಯಾಗಿವೆ. ಜೊತೆಗೆ ಬಿಬಿಎಂಪಿ ಕಚೇರಿಯಲ್ಲಿ ಇರಬೇಕಾದ ಬರೋಬ್ಬರಿ 480 ಫೈಲ್ ಗಳು, ಹಿರಿಯ ಅಧಿಕಾರಿಗಳ ಹೆಸರಿನ ನಕಲಿ ಸೀಲು, ಸೈನ್ ಗಳು, ವಿವಿಧ ಬ್ಯಾಂಕ್ ಗಳ ಬೇನಾಮಿ ಅಕೌಂಟ್‍ಗಳು, ಆಸ್ತಿ ಪತ್ರಗಳು ದೊರೆತಿದ್ದವು.

English summary
BBMP Commissioner Manjunath Prasad issued an order suspending Devendrappa in connection with the ACB raid on Bommanahalli ADTP Devendrappa's residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X