ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ 50-60 ಬೆಡ್ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 07; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಗುಂಪು ಸೇರುವುದನ್ನು ತಡೆಯಲು ಬುಧವಾರದಿಂದ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮಂಗಳವಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 4,266 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಕೋವಿಡ್ ಕೇರ್ ಸೆಂಟರ್‌ಗಳ ಸ್ಥಾಪನೆ ಕುರಿತು ಚರ್ಚೆ ಆರಂಭವಾಗಿದೆ.

ರಾಜ್ಯಕ್ಕೆ 15 ಲಕ್ಷಕ್ಕೂ ಹೆಚ್ಚು ಕೋವಿಡ್ ಡೋಸ್: ಡಾ.ಕೆ.ಸುಧಾಕರ್ ರಾಜ್ಯಕ್ಕೆ 15 ಲಕ್ಷಕ್ಕೂ ಹೆಚ್ಚು ಕೋವಿಡ್ ಡೋಸ್: ಡಾ.ಕೆ.ಸುಧಾಕರ್

ಬಿಬಿಎಂಪಿ ಆಯುಕ್ತರು ವಲಯ ಮಟ್ಟದ ಅಧಿಕಾರಿಗಳಿಗೆ ಚಿಕ್ಕ-ಚಿಕ್ಕ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಾಪನೆ ಮಾಡಲು ಜಾಗ ಗುರುತಿಸಬೇಕು ಎಂದು ಸೂಚನೆ ನೀಡಿದ್ದಾರೆ. 50-60 ಹಾಸಿಗೆಗಳ ಕೇರ್ ಸೆಂಟರ್ ಸ್ಥಾಪನೆಯಾಗಲಿದೆ.

ದೇಶದಲ್ಲಿ ಕೋವಿಡ್ ಲಸಿಕೆಗೆ ಕೊರತೆ ಉಂಟಾಗಿಲ್ಲ: ಕೇಂದ್ರ ಸರ್ಕಾರದೇಶದಲ್ಲಿ ಕೋವಿಡ್ ಲಸಿಕೆಗೆ ಕೊರತೆ ಉಂಟಾಗಿಲ್ಲ: ಕೇಂದ್ರ ಸರ್ಕಾರ

BBMP To Set Up 50 To 60 Bed COVID Care Centre

ಬೆಂಗಳೂರು ನಗರದಲ್ಲಿ 32605 ಸಕ್ರಿಯ ಪ್ರಕರಣಗಳಿವೆ. ಸೋಂಕಿನ ಲಕ್ಷಣಗಳು ಇಲ್ಲದವರಿಗೆ ಚಿಕಿತ್ಸೆ ನೀಡಲು ಚಿಕ್ಕ ಕೋವಿಡ್ ಕೇರ್ ಸೆಂಟರ್ ಸಿದ್ಧಪಡಿಸಲಾಗುತ್ತದೆ. ಬಿಬಿಎಂಪಿ ಪ್ರತಿ ವಲಯದಲ್ಲಿ ಈ ಮಾದರಿಯ 2 ಅಥವ 3 ಕೇರ್ ಸೆಂಟರ್ ಆರಂಭವಾಗಲಿದೆ.

ಲಸಿಕೆ ಪಡೆದಿದ್ದ ಚಾಮರಾಜನಗರ ಡಿಸಿಗೆ ಕೋವಿಡ್ ಲಸಿಕೆ ಪಡೆದಿದ್ದ ಚಾಮರಾಜನಗರ ಡಿಸಿಗೆ ಕೋವಿಡ್

ರೋಗ ಲಕ್ಷಣಗಳು ಇಲ್ಲದ ಜನರು ಹೋಂ ಐಸೋಲೇಷನ್‌ನಲ್ಲಿ ಇರಲು ಇಷ್ಟ ಪಡುತ್ತಾರೆ. ಆದರೆ ಕೆಲವು ಮನೆಯಲ್ಲಿ ಪ್ರತ್ಯೇಕ ಶೌಚಾಲಯ ಸೇರಿದಂತೆ ಅಗತ್ಯ ವ್ಯವಸ್ಥೆಗಳು ಇಲ್ಲ. ಅವರನ್ನು ಈ ಕೇರ್ ಸೆಂಟರ್‌ಗೆ ದಾಖಲು ಮಾಡಲಾಗುತ್ತದೆ.

Recommended Video

ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕು , ಕೇಂದ್ರದಿಂದ ಅಧ್ಯಯನ | Oneindia Kannada

2020ರಲ್ಲಿ ಬಿಬಿಎಂಪಿ ಬಿಐಇಸಿಯಲ್ಲಿ ದೇಶದಲ್ಲಿಯೇ ದೊಡ್ಡ ಕೋವಿಡ್ ಕೇರ್ ಸೆಂಟರ್ ಆರಂಭಿಸಿತ್ತು. ಈಗ ಬಿಬಿಎಂಪಿ ವಯಲಗಳ ಹೋಟೆಲ್, ಮಾರಾಟವಾಗದ ಅಪಾರ್ಟ್‌ಮೆಂಟ್‌ಗಳಲ್ಲಿ ಚಿಕ್ಕ-ಚಿಕ್ಕ ಕೇರ್ ಸೆಂಟರ್ ಆರಂಭಿಸಲಿದೆ.

English summary
BBMP will set up at least two or three covid care centres in a zonal level with 50 to 60 bed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X