ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಶಾಲಾ-ಕಾಲೇಜುಗಳ ಹೆಸರು ಬದಲಾವಣೆಗೆ ನಿರ್ಧಾರ

|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಬಿಬಿಎಂಪಿ ಅಡಿಯಲ್ಲಿ ಬರುವ ಶಾಲಾ-ಕಾಲೇಜುಗಳ ಹೆಸರು ಬದಲಾವಣೆಗೆ ಬಿಬಿಎಂಪಿ ನಿರ್ಧರಿಸಿದೆ.

ಪಾಲಿಕೆ ನಿರ್ವಹಿಸುತ್ತಿರುವ ಶಾಲೆಗಳ ಹೆಸರುಗಳನ್ನು ಬದಲಾಯಿಸಿ 'ಕೆಂಪೆಗೌಡ ಸರ್ಕಾರಿ ಶಾಲೆ' ಎಂದು ಬದಲಾವಣೆ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ ಹೇಳಿದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಅವರಿಗೆ ಜೊತೆಯಾದರು.

ಬಿಬಿಎಂಪಿ, ಟೆಲಿಕಾಂ ಸಂಸ್ಥೆಗಳ ಮೇಲಾಟ: ಇಂಟರ್ನೆಟ್ ನಂಬಿಕೊಂಡ ಉದ್ಯಮಗಳು ಹೈರಾಣಬಿಬಿಎಂಪಿ, ಟೆಲಿಕಾಂ ಸಂಸ್ಥೆಗಳ ಮೇಲಾಟ: ಇಂಟರ್ನೆಟ್ ನಂಬಿಕೊಂಡ ಉದ್ಯಮಗಳು ಹೈರಾಣ

ಬಿಬಿಎಂಪಿ ಶಾಲಾ ಕಾಲೇಜುಗಳೆಂದರೆ ಪೋಷಕರಲ್ಲಿ ಅಸಡ್ಡೆ ಮನೆಮಾಡಿಬಿಟ್ಟಿದೆ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೂ ಸಹ ಖಾಸಗಿ ಶಾಲೆಗಳಿಗೆ ಮೊರೆ ಹೋಗುವವರು ಹೆಚ್ಚು. ಹಾಗಾಗಿ ಇನ್ನು ಮಂದೆ ಕೆಂಪೇಗೌಡ ಶಾಲಾ ಕಾಲೇಜೆಂದು ನಾಮಕರಣ ಮಾಡಲು ನಿರ್ಧರಿಸಿದ್ದೇವೆ. ಸಮಿತಿಯ ತೀರ್ಮಾನವನ್ನು ಪಾಲಿಕೆ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುತ್ತೇವೆ ಎಂದು ಹೇಳಿದರು.

BBMP Schools And Colleges Will Have New Name

ಮುಂಬರುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಬರುವಂತೆ ಮಾಡಲು ನಮ್ಮ ಸಮಿತಿ ಪ್ರಯತ್ನಿಸುತ್ತಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಭಾನುವಾರ ಸಹ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಜೆ ವೇಳೆ ವಿದ್ಯಾರ್ಥಿಗಳಿಗೆ ಇಸ್ಕಾನ್‌ ನ ಲಘು ಉಪಹಾರ ಕೊಟ್ಟು ಓದಲು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.

ಬಿಬಿಎಂಪಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಹೊಸ ತಂತ್ರಬಿಬಿಎಂಪಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಹೊಸ ತಂತ್ರ

ಪಾಲಿಕೆ ಶಾಲೆ-ಕಾಲೇಜಿನಲ್ಲಿ ಕಡು ಬಡುವರು ಓದುತ್ತಾರೆ. ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಹೆಚ್ಚು ಅನುದಾನ ನೀಡುವಂತೆ ಸಿಎಂಗೆ ಮನವಿ ಸಲ್ಲಿಸುತ್ತೇವೆ. ಶಾಲೆಗಳನ್ನು ಆಧುನೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು.

English summary
BBMP planing to change its schools and colleges name. Planing to call as Kempegowda schools and colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X