ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 6 ಸಾವಿರ ಸ್ಥಳಗಳಲ್ಲಿ ಬಿಬಿಎಂಪಿಯಿಂದ ಉಚಿತ ವೈಫೈ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನ ಆರು ಸಾವಿರ ಸ್ಥಳಗಳಲ್ಲಿ ಬಿಬಿಎಂಪಿ ಉಚಿತ ವೈ-ಫೈ ವ್ಯವಸ್ಥೆ ಮಾಡುತ್ತಿದೆ. ಇನ್ನು ಕೇವಲ ಒಂದು ತಿಂಗಳಲ್ಲಿ ವೈ-ಫೈ ಅಳವಡಿಸಲಾಗುತ್ತದೆ.

ಮೈಸೂರು ದಸರಾ - ವಿಶೇಷ ಪುರವಣಿ

ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ. ಜನರು ಹೆಚ್ಚು ಹೊತ್ತು ನಿಲಲ್ಉವ ಸ್ಥಳಗಳಲ್ಲಿ ವೈ-ಫೈ ಸೇವೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಮೊದಲು ನಾಲಕ್ಉ ಕಂಪನಿಗಳ ಜತೆ ಮಾತುಕತೆ ನಡೆದಿದೆ. ನಿರಂತರ ವೈ-ಫೈ ಸೇವೆ ನೀಡುವುದಾಗಿ ಕಂಪನಿಗಳು ಸಮ್ಮತಿ ಸೂಚಿಸಿವೆ.

6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ 6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ

ಇನ್ನು ಒಂದೇ ತಿಂಗಳಲ್ಲಿ ನಗರದ 5938 ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈ-ಫೈ ದೊರೆಯಲಿದೆ. ಜನರು ನಿಂತಲ್ಲಿಯೇ ಮೊಬೈಲ್‌ಗಳಲ್ಲಿ ಯಾವ ಖರ್ಚೂ ಇಲ್ಲದೆ ಅಂತರ್ಜಾಲದ ವೇಗವಾದ ಸಂಪರ್ಕ ಪಡೆಯಬಹುದು. ಇಂಡಸ್ ಟವರ್, ಎಸಿಟಿ, ಡಿವಿಒಐಎಸ್ ಹಾಗೂ ಹನಿಕೋಂಬ್ ಕಂಪನಿಗಳ ಜತೆಗೆ ಚರ್ಚೆ ನಡೆಸಿದೆ.

30 ನಿಮಿಷ ಮಾತ್ರ ಉಚಿತ

30 ನಿಮಿಷ ಮಾತ್ರ ಉಚಿತ

ವೈಫೈ ಸೇವೆ ಉಚಿತವಾದರೂ ಮೊದಲ 30 ನಿಮಿಷಗಳು ಮಾತ್ರ ಉಚಿತವಾಗಿರುತ್ತದೆ. ಬಳಿಕ ಶುಲ್ಕ ಪಾವತಿಸಿ ಬಳಕೆ ಮಾಡಬೇಕಾಗುತ್ತದೆ.

ನಗರದ 60 ಕಡೆ ವೈ-ಫೈ ಬಾಕ್ಸ್

ನಗರದ 60 ಕಡೆ ವೈ-ಫೈ ಬಾಕ್ಸ್

ನಗರದಲ್ಲಿ 60 ಕಡೆಗಳಲ್ಲಿ ವೈ-ಫೈ ಬಾಕ್ಸ್ ಅಳವಡಿಸಲಾಗುತ್ತದೆ. ವೈಫೈ ಸೇವೆ ನೀಡಲು 2 ಚದರಡಿ ಜಾಗದಲ್ಲಿ ವೈಫೈ ಬಾಕ್ಸ್ ಅಳವಡಿಸಲಾಗುತ್ತದೆ. ಇದಕ್ಕಾಗಿ 62 ಸಾವಿರ ರೂ. ಸಾಧನ ಅಳವಡಿಕೆ ಶುಲ್ಕ ಹಾಗೂ ಶೇ.18ರಷ್ಟು ಜಿಎಸ್‌ಟಿ ದರವನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಕಂಪನಿಗಳು ತಮಗೆ ವಿಧಿಸುವ ಶುಲ್ಕದ ಕುರಿತು ತಕರಾರು ಎತ್ತಿವೆ.

ದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆ ದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆ

ತಿಂಗಳಿಗೆ 500 ರೂ ಶುಲ್ಕ ವಿಧಿಸಿ

ತಿಂಗಳಿಗೆ 500 ರೂ ಶುಲ್ಕ ವಿಧಿಸಿ

ಡಿವಿಒಐಎಸ್, ಹನಿಕೋಂಬ್ ಹಾಗೂ ಎಸಿಟಿ ಕಂಪನಿಗಳು ಶುಲ್ಕದ ಬಗ್ಗೆ ತಕರಾರು ಎತ್ತಿವೆ. ಈ ಶುಲ್ಕದ ಬದಲು ತಿಂಗಳಿಗೆ 500 ರೂ ಶುಲ್ಕವನ್ನು ವಿಧಿಸಬೇಕು ಎಂದು ಬಿಬಿಎಂಪಿಗೆ ಒತ್ತಾಯಿಸಿದೆ.

ಸಾರ್ವಜನಿಕರ ವಿರೋಧ

ಸಾರ್ವಜನಿಕರ ವಿರೋಧ

ಬಿಬಿಎಂಪಿ ಗುರುತಿಸಿರುವ ಸ್ಥಳಗಳ 60 ಕಡೆಗಳಲ್ಲಿ ಇಂಡಸ್ ಕಂಪನಿಯು ವೈಫೈ ಬಾಕ್ಸ್ ಅಳವಡಿಸಿದೆ. ಆದರೆ ಅನೇಕ ಪ್ರದೇಶಗಳಲ್ಲಿ ಬಾಕ್ಸ್ ಅಳವಡಿಸುವಾಗ ನಿವಾಸಿಗಳ ವಿರೋಧ ಎದುರಾಗಿದೆ. ಹಾಗಾಗಿ ಸರಿಯಾದ ಸ್ಥಳವನ್ನು ಬಿಬಿಎಂಪಿಯೇ ಸೂಚಿಸಬೇಕಾಗಿದೆ.

ಬೆಂಗಳೂರು ನಗರದಲ್ಲಿ 2 ಸಾವಿರ ವೈ-ಫೈ ಸ್ಟಾಟ್ ಸ್ಥಾಪನೆ ಬೆಂಗಳೂರು ನಗರದಲ್ಲಿ 2 ಸಾವಿರ ವೈ-ಫೈ ಸ್ಟಾಟ್ ಸ್ಥಾಪನೆ

English summary
BBMP is all set to provide free WiFi facility at 5,939 public places in different area from November. Last minute negotiations with providers will be completed soon, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X