ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ; ಬಿಬಿಎಂಪಿಯಿಂದ 27 'ಮಿಸ್ಟ್ ಕೆನಾನ್' ಯಂತ್ರ ಖರೀದಿ

|
Google Oneindia Kannada News

ಬೆಂಗಳೂರು, ಜುಲೈ 07 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಬಿಬಿಎಂಪಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪಾಲಿಕೆ ಈಗ 27 'ಮಿಸ್ಟ್ ಕೆನಾನ್' ಯಂತ್ರಗಳನ್ನು ಖರೀದಿ ಮಾಡಲು ಮುಂದಾಗಿದೆ.

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ 'ಮಿಸ್ಟ್ ಕೆನಾನ್'ಯಂತ್ರದ ಮೂಲಕ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಲಾಗುತ್ತದೆ. ಒಂದು ಯಂತ್ರಕ್ಕೆ 53 ಲಕ್ಷ ರೂ. ವೆಚ್ಚವಾಗಲಿದೆ.

ಬೆಂಗಳೂರು; ಕೊರೊನಾ ಸೋಂಕಿತರಿಗಾಗಿಯೇ 50 ಅಂಬ್ಯುಲೆನ್ಸ್ ಮೀಸಲು ಬೆಂಗಳೂರು; ಕೊರೊನಾ ಸೋಂಕಿತರಿಗಾಗಿಯೇ 50 ಅಂಬ್ಯುಲೆನ್ಸ್ ಮೀಸಲು

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,561ಕ್ಕೆ ಏರಿಕೆಯಾಗಿದೆ. ಸೋಮವಾರ ನಗರದಲ್ಲಿ 981 ಹೊಸ ಪ್ರಕರಣ ದಾಖಲಾಗಿವೆ.

ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ 'ಮಿಸ್ಟ್ ಕೆನಾನ್'ಯಂತ್ರದ ಮೂಲಕ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತದೆ. ಬಿಬಿಎಂಪಿ ಈಗ ಯಂತ್ರಗಳ ಖರೀದಿ ಮಾಡಲು ಪ್ರಕ್ರಿಯೆ ನಡೆಸುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ಕೋವಿಡ್ ಭೀತಿ; ಬೆಂಗಳೂರಲ್ಲಿ ಶೇ 78ರಷ್ಟು ಹಾಸಿಗೆ ಲಭ್ಯವಿದೆ ಕೋವಿಡ್ ಭೀತಿ; ಬೆಂಗಳೂರಲ್ಲಿ ಶೇ 78ರಷ್ಟು ಹಾಸಿಗೆ ಲಭ್ಯವಿದೆ

ಇನ್ನೂ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ

ಇನ್ನೂ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ

ಬಿಬಿಎಂಪಿ ಕಳೆದ ವಾರ ಎರಡು 'ಮಿಸ್ಟ್ ಕೆನಾನ್' ಯಂತ್ರಗಳನ್ನು ತಂದಿದೆ. ಆದರೆ, 27 ಯಂತ್ರಗಳನ್ನು ಖರೀದಿ ಮಾಡಲು ಇನ್ನೂ ನಗರಾಭಿವೃದ್ಧಿ ಇಲಾಖೆಯ ಒಪ್ಪಿಗೆ ಸಿಕ್ಕಿಲ್ಲ. ಹಲವಾರು ಬಿಬಿಎಂಪಿ ಸದಸ್ಯರು ಮತ್ತು ಶಾಸಕರು ತಮ್ಮ ಕ್ಷೇತ್ರಕ್ಕೆ ಯಂತ್ರ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ವಿಧಾನಸಭಾ ಕ್ಷೇತ್ರಕ್ಕೆ ಒಂದು

ವಿಧಾನಸಭಾ ಕ್ಷೇತ್ರಕ್ಕೆ ಒಂದು

ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಒಂದು ಕ್ಷೇತ್ರಕ್ಕೆ ಒಂದು ಯಂತ್ರದಂತೆ ಒಟ್ಟು 27 ಯಂತ್ರ ಖರೀದಿಗೆ ಚಿಂತನೆ ನಡೆದಿದೆ. ಒಟ್ಟು ಯಂತ್ರದ ಖರೀದಿಗೆ 14 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

50 ಮೀಟರ್ ದೂರ

50 ಮೀಟರ್ ದೂರ

ಬಿಬಿಎಂಪಿ ಕೊರೊನಾ ಸೋಂಕು ಇರುವ ಕಂಟೈನ್ಮೆಂಟ್ ಝೋನ್ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಈ ಮಿಸ್ಟ್ ಕೆನಾನ್ ಯಂತ್ರದ ಮೂಲಕ ಸೋಂಕು ನಿವಾರಕ ಸಿಂಪಡಿಸಲಿದೆ. 320° ಡಿಗ್ರಿ ಸುತ್ತುತ್ತಾ 50 ಮೀಟರ್ ದೂರದವರೆಗೆ ಸೋಂಕು ನಿವಾರಕವನ್ನು ಸಿಂಪಡಿಸುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದೆ.

ಎಲ್ಲಾ ವಾರ್ಡ್‌ಗಳಲ್ಲಿ ಸಿಂಪರಣೆ

ಎಲ್ಲಾ ವಾರ್ಡ್‌ಗಳಲ್ಲಿ ಸಿಂಪರಣೆ

ಬಿಬಿಎಂಪಿ ಈಗಾಗಲೇ 40 ವಾರ್ಡ್‌ಗಳಿಗೆ ಸೋಂಕು ನಿವಾರಣೆ ಮಾಡುವ ಔಷಧಿ ಸಿಂಪಡಣೆ ಮಾಡಲು ಮಾನವ ಚಾಲಿತ ಯಂತ್ರಗಳನ್ನು ನೀಡಿದೆ. ಆದರೆ ಎಲ್ಲಾ ವಾರ್ಡ್‌ಗಳಿಗೆ ನೀಡಲಾಗಿತ್ತು. ಈಗ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಯಂತ್ರದಂತೆ ಖರೀದಿ ಮಾಡಲಾಗುತ್ತದೆ.

English summary
Bruhat Bengaluru Mahanagara Palike (BBMP) will procure as many as 27 mist cannon machines. Each machines costing about Rs 53 lakh. This will used for disinfect public place and containment zone which reported Coronavirus case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X