ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಎಲ್‌ಐಸಿಗೆ 35 ಕೋಟಿ ಕಟ್ಟಬೇಕು

|
Google Oneindia Kannada News

ಬೆಂಗಳೂರು, ನ.12 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಂಬಳದಿಂದ ಕಡಿತ ಮಾಡಿದ ವಿಮಾ ಕಂತಿನ ಹಣವನ್ನು ಆರು ತಿಂಗಳಿನಿಂದ ಭಾರತೀಯ ಜೀವ­ವಿಮಾ ನಿಗಮಕ್ಕೆ ಪಾವತಿ ಮಾಡಿಲ್ಲ. ಸುಮಾರು 35 ಕೋಟಿ­ಯಷ್ಟು ಹಣವನ್ನು ಕಟ್ಟಿ ಎಂದು ಎಲ್‌ಐಸಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದೆ.

ನಾಲ್ಕು ದಿನಗಳ ಹಿಂದೆ ಎಲ್‌ಐಸಿ ಬಾಕಿ ಉಳಿಸಿಕೊಂಡ ಕಂತಿನ ಮೊತ್ತ­ವನ್ನು ಬಡ್ಡಿಸಹಿತ ಪಾವತಿ ಮಾಡ­ಬೇಕು ಎಂದು ಆಯುಕ್ತರಿಗೆ ಪತ್ರ ಬರೆದಿದ್ದು, ತಡ­ವಾಗಿ ಹಣ ಪಾವತಿ ಮಾಡಿದರೆ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದೆ. ಆರು ತಿಂಗಳಿನಿಂದ ನೌಕರರ ವಿಮಾ ಹಣವನ್ನು ಸಂಬಳದಲ್ಲಿ ಕಡಿತ ಮಾಡಿದ್ದರೂ ಅದನ್ನು ಎಲ್‌ಐಸಿಗೆ ಪಾವತಿ ಮಾಡಿಲ್ಲ. [ಜನಧನ ಯೋಜನೆಯಡಿ ಜೀವ ವಿಮಾ ಸೌಲಭ್ಯ]

bbmp

ಕಾಚರಕ­ನಹಳ್ಳಿ ವಾರ್ಡ್‌ನ ಸದಸ್ಯರಾದ ಪದ್ಮನಾಭ ರೆಡ್ಡಿ ಅವರು ಎಲ್‌ಐಸಿ ಅಧಿಕಾರಿಗಳು ಬರೆದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಸಂಬಳದಿಂದ ಕಡಿತ ಮಾಡಲಾದ ವಿಮಾ ಕಂತಿನ ಮೊತ್ತವೂ ನೌಕರರಿಗೆ ಸೇರಿದ್ದು. ಅದನ್ನು ತನ್ನ ಬಳಿ ಇಟ್ಟು­ಕೊ­ಳ್ಳಲು ಬಿಬಿಎಂಪಿಗೆ ಯಾವುದೇ ಅಧಿ­ಕಾರ ಇಲ್ಲ. ಆಯಾ ತಿಂಗಳಿನಲ್ಲಿ ಪಾವತಿ ಮಾಡಲು ಹಣ­ಕಾಸು ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ರೆಡ್ಡಿ ದೂರಿದರು.

ಬಿಬಿಎಂಪಿಯಲ್ಲಿ 9,500 ನೌಕರ­ರಿದ್ದು, ಅವರ 6 ತಿಂಗಳ ವಿಮಾ ಕಂತು ಸುಮಾರು 35 ಕೋಟಿಗೂ ಹೆಚ್ಚಾಗುತ್ತದೆ. ಇಷ್ಟು ಹಣವನ್ನು ಎಲ್‌ಐಸಿಗೆ ಪಾವತಿ ಮಾಡಬೇಕಾಗಿದೆ. ಈ ವಿಷಯ­ವನ್ನು ಈಗಾಗಲೇ ಆಯುಕ್ತರ ಗಮ­ನಕ್ಕೂ ತರಲಾಗಿದೆ ಎಂದು ತಿಳಿಸಿದರು. [ಸರ್ಕಾರದಿಂದ ಬಿಬಿಎಂಪಿಗೆ ಅನುದಾನ ಬೇಕು]

ಮೂರು ದಿನದಲ್ಲಿ ಪಾವತಿ ಮಾಡುತ್ತೇವೆ : ಎಲ್‌ಐಸಿಗೆ ವಿಮಾ ಕಂತು ಪಾವತಿ ಮಾಡಬೇಕಾಗಿರುವುದು ನಿಜ, ಮೂರು ದಿನದಲ್ಲಿ ಈ ಹಣವನ್ನು ಪಾವತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪಾವತಿ ಮಾಡದಿರುವುದಕ್ಕೆ ಕಾರಣ ತಿಳಿಸುವಂತೆಯೂ ನಿರ್ದೇಶನ ನೀಡಿದ್ದೇನೆ ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀ­ನಾರಾಯಣ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

English summary
The Bruhat Bangalore Mahanagara Palike(BBMP) failed to remit to Life Insurance Corporation (LIC) of India the premium it deducted from the salaries of its 9,500 staff in the last six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X