ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಟೈನ್ಮೆಂಟ್ ಝೋನ್‌ನಲ್ಲಿನ ಜನರು ಕೆಲಸಕ್ಕೆ ಹೋಗಬಹುದೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 02: ಕಂಟೈನ್ಮೆಂಟ್ ಝೋನ್‌ಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು ಕೆಲಸಕ್ಕಾಗಿ ಹೊರಗೆ ಹೋಗಬಹುದೇ?. ಬಿಬಿಎಂಪಿ ಉದ್ಯೋಗಿಗಳು ರಜೆ ಪಡೆಯಲು ಅನುಕೂಲವಾಗುವಂತೆ ಪ್ರಮಾಣ ಪತ್ರವನ್ನು ನೀಡಲಿದೆ.

Recommended Video

How to prepare mask at home and stay safe | Oneindia Kannada

ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 57,396. ನಗರದ ಹಲವು ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್‌ ಎಂದು ಗುರುತಿಸಲಾಗಿದೆ. ಈ ಪ್ರದೇಶದ ಜನರು ಮನೆಬಿಟ್ಟು ಹೊರ ಬರುವಂತಿಲ್ಲ.

ಬೆಂಗಳೂರಿನ 1267 ಅಪಾರ್ಟ್ಮೆಂಟ್ಸ್ ಕಂಟೈನ್ಮೆಂಟ್ ಜೋನ್ಸ್ ಬೆಂಗಳೂರಿನ 1267 ಅಪಾರ್ಟ್ಮೆಂಟ್ಸ್ ಕಂಟೈನ್ಮೆಂಟ್ ಜೋನ್ಸ್

"ಕಂಟೈನ್ಮೆಂಟ್ ಝೋನ್‌ಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಉದ್ಯೋಗಿಗಳು ರಜೆ ಪಡೆಯಲು ಅವರಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗುತ್ತದೆ" ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ 11,638 ಕಂಟೈನ್ಮೆಂಟ್ ಝೋನ್ ಬೆಂಗಳೂರು ನಗರದಲ್ಲಿ 11,638 ಕಂಟೈನ್ಮೆಂಟ್ ಝೋನ್

BBMP To Issue Certificates Of Containment Zones Employees

ಬೂತ್ ಮಟ್ಟದ ತಂಡಗಳು ಉದ್ಯೋಗಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಿವೆ. ಇದೇ ತಂಡ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಅಗತ್ಯ ವಸ್ತುಗಳು ಸರಿಯಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಲಿವೆ.

ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಮಾರ್ಗಸೂಚಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಮಾರ್ಗಸೂಚಿ

ಕಂಟೈನ್ಮೆಂಟ್ ಝೋನ್‌ಗಳಲ್ಲಿನ ಪ್ರತಿ ಮನೆಗಳ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಉಸಿರಾಟದ ತೊಂದರೆ, ಜ್ವರ, ನೆಗಡಿ ಇರುವ ಜನರು ಮತ್ತು ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.

ಹೋಂ ಕ್ವಾರಂಟೈನ್ ಮತ್ತು ಹೋಂ ಐಸೊಲೇಷನ್‌ಗಳಲ್ಲಿರುವ ಜನರ ಮೇಲೆ ಇದೇ ತಂಡ ನಿಗಾವಹಿಸಲಿದೆ. ಹೋಂ ಐಸೊಲೇಷನ್‌ಗಳಲ್ಲಿನ ಜನರ ನಿರಂತರ ತಸಾಸಣೆ ನಡೆಸಲಾಗುತ್ತದೆ ಅಗತ್ಯವಿದ್ದರೆ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ.

ಕಂಟೈನ್ಮೆಂಟ್ ಝೋನ್‌ಗಳಲ್ಲಿರುವ ಆರೋಗ್ಯ ಕಾರ್ಯಕರ್ತರು, ಪೊಲೀಸ್ ಅಧಿಕಾರಿಗಳು ಕೆಲಸಕ್ಕೆ ಹೋಗಲು ಯಾವುದೇ ತೊಂದರೆ ಇಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಬೆಂಗಳೂರು ನಗರದಲ್ಲಿ ಶನಿವಾರ 1852 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 57,396ಕ್ಕೆ ಏರಿಕೆಯಾಗಿದೆ.

English summary
BBMP commissioner N.Manjunatha Prasad said that booth-level teams would issue the certificates to containment zones employees of government and private companies to take leave from work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X