ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ಭೂಸಾರಿಗೆ ಸೆಸ್ ವಿಧಿಸಲು ಬಿಬಿಎಂಪಿ ನಿರ್ಧಾರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 26: ಬೆಂಗಳೂರು ಜನತೆಗೆ ಮತ್ತೊಂದು ಸೆಸ್ ಸಂಕಷ್ಟ ಬಂದೊದಗಿದೆ. ಬೆಂಗಳೂರಿಗರಿಗೆ ಭೂಸಾರಿಗೆ ಸೆಸ್ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ಇಂದಿನ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.

ಆಸ್ತಿ ತೆರಿಗೆ ಜೊತೆ ಶೇ.2ರಷ್ಟು ಭೂ ಸಾರಿಗೆ ಸೆಸ್ ಹೇರಲಾಗುತ್ತಿದೆ. ಕಾಂಗ್ರೆಸ್ ಈ ಟ್ರಾನ್ಸ್‌ಪೋರ್ಟ್ ಸೆಸ್ ಮಂಡಿಸಲಿದೆ. 40ಕೋಟಿ ರೂ ಸಾರಿಗೆ ಸೆಸ್ ಸಂಗ್ರಹಿಸಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ. ಭೂ ಸಾರಿಗೆ ಕರ ಸಂಗ್ರಹಿಸಲು ಲೆಕ್ಕ ಪರಿಶೋಧಕರಿಂದಲೇ ಸರ್ಕಾರಕ್ಕೆ ಮಾಹಿತಿ ರವಾನಿಸಲಾಗಿದೆ.

ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ

ಬೆಂಗಳೂರಿನ ರಸ್ತೆಗಳ ಪರಿಸ್ಥಿತಿಯಿಂದ ಬಿಎಂಟಿಸಿ ಬಸ್‌ಗಳು ಹಾಳಾಗುತ್ತಿದ್ದು, ನಗರ ಭೂಸಾರಿಗೆ ವ್ಯವಸ್ಥೆ ಉತ್ತಮ ಪಡಿಸಲು ಬಿಬಿಎಂಪಿ ಹಣ ನೀಡಬೇಕೆಂದು ಕೆಲವು ದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

BBMP to impose Transport cess on Bengalureans

ಅದನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆಸ್ತಿ ತೆರಿಗೆ ಮೊತ್ತದ ಶೇ.2ರಷ್ಟು ಹಣವನ್ನು ನಗರ ಭೂಸಾರಿಗೆ ಉಪಕರ ಎಂದು ವಸೂಲಿ ಮಾಡಲು ಅನುಮತಿ ನೀಡಿದೆ.

ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ಆಸ್ತಿ ಮಾಲೀಕರಿಗೆ ಹೊರೆಯಾಗುವ ದೃಷ್ಟಿಯಿಂದ ಆದೇಶ ಹಿಂಪಡೆಯುವಂತೆ 2014ರಲ್ಲಿಯೇ ಕೌನ್ಸಿಲ್ ನಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಬಿಬಿಎಂಪಿ ನಿರ್ಣಯವನ್ನು ಪರಿಗಣಿಸಲು ಬರುವುದಿಲ್ಲ ಎಂದು ತಿಳಿಸಿರುವ ಸರ್ಕಾರ ಉಪಕರ ವಸೂಲಿಗೆ ಚಿಂತನೆ ನಡೆಸಿದೆ.

English summary
As BMTC has sought better roads in the city for smooth and safe transportation, BBMP is imposing 2 percent of transport cess on tax payers of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X