ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್‌ಗಳಿಗೆ 1 ಸಾವಿರ ರೂ. ದಂಡ

|
Google Oneindia Kannada News

ಬೆಂಗಳೂರು, ಆಗಸ್ಟ್ 21 : ಬೆಂಗಳೂರಿನಲ್ಲಿ ಕಳೆದ ವಾರದಿಂದ ಪ್ರತಿದಿನ ಮಳೆಯಾಗುತ್ತಿದೆ. ಸರಿಯಾಗಿ ಮುಚ್ಚದ ರಸ್ತೆಗುಂಡಿಗಳು ಬಾಯಿ ತರೆದು ನಿಂತಿವೆ. ಯಾವುದೇ ವಾರ್ಡ್‌ನಲ್ಲಿ ರಸ್ತೆಗುಂಡಿಗಳಿದ್ದರೆ ಇಂಜಿನಿಯರ್‌ಗೆ 1000 ರೂ. ದಂಡ ಹಾಕಲಾಗುತ್ತದೆ.

ಎಲ್ಲಾ ವಾರ್ಡ್‌ಗಳು ರಸ್ತೆಗುಂಡಿ ಮುಕ್ತವಾಗಿರಬೇಕು ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಸೂಚನೆ ಕೊಟ್ಟಿದ್ದಾರೆ. ಅವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿ, ಅವು ಮಳೆಗೆ ಬಾಯಿ ತೆರೆದು ಕೂತಿದ್ದರೆ ಎಇಇಗಳನ್ನು ಹೊಣೆ ಮಾಡಲು ತೀರ್ಮಾನಿಸಲಾಗಿದೆ.

ಬೆಂಗಳೂರಿನ ರಸ್ತೆಗಳು ಬೆಣ್ಣೆಯಂತಾಗಬೇಕು: ಹೈಕೋರ್ಟ್ಬೆಂಗಳೂರಿನ ರಸ್ತೆಗಳು ಬೆಣ್ಣೆಯಂತಾಗಬೇಕು: ಹೈಕೋರ್ಟ್

ಬಿಬಿಎಂಪಿ ಮೇಯರ್ ಗಂಗಾಬಿಕೆ ಅವರು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಗುಂಡಿಗಳಿದ್ದರೆ ಅದನ್ನು ಮುಚ್ಚಿಸಲು ಖಡಕ್ ಸೂಚನೆ ನೀಡುತ್ತಿದ್ದಾರೆ. ಮುಖ್ಯ ಇಂಜಿನಿಯರ್‌ಗಳು ಎಲ್ಲಾ ವಾರ್ಡ್‌ಗಳಲ್ಲಿಯೂ ರಸ್ತೆ ಗುಂಡಿಯ ಬಗ್ಗೆ ಗಮನ ಹರಿಸಿ ಎಂದು ಎಇಇಗಳಿಗೆ ತಿಳಿಸಿದ್ದಾರೆ.

ರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶ

BBMP To Fine AEE IF Fail To Fill pothole

ವಾರ್ಡ್‌ಗಳಲ್ಲಿರುವ ಸಮಸ್ಯೆಗಳ ಪಟ್ಟಿಯನ್ನುಎಇಇಗಳು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು. ಸೇವೆಯಲ್ಲಿ ಲೋಪಗಳು ಕಂಡು ಬಂದರೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು ರಸ್ತೆಗಳು ಬಾಯಿ ತೆರೆದಿವೆ: ಸಾವಿರಾರು ರಸ್ತೆಗುಂಡಿ ಬಾಕಿ ಇವೆಬೆಂಗಳೂರು ರಸ್ತೆಗಳು ಬಾಯಿ ತೆರೆದಿವೆ: ಸಾವಿರಾರು ರಸ್ತೆಗುಂಡಿ ಬಾಕಿ ಇವೆ

English summary
BBMP chief engineer warned the assistant executive engineer to take care to fill pothole. AEE will be fined Rs 1,000 if found the pothole.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X