ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೊರೊನಾ ತಡೆಯಲು ಬಿಬಿಎಂಪಿ ಹೊಸ ಯೋಜನೆ

|
Google Oneindia Kannada News

ಬೆಂಗಳೂರು, ಮೇ 13: ಸಿಲಿಕಾನ್‌ ಸಿಟಿಯಲ್ಲಿ ಕೊರೊನಾ ಹರಡುವಿಕೆಯನ್ನು ತಡೆಯಲು ಬಿಬಿಎಂಪಿ ಮತ್ತೊಂದು ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಈಗಾಗಲೇ ಕಂಟೈನ್‌ಮೆಂಟ್ ಜೋನ್‌ಗಳ ಮೇಲೆ ತೀವ್ರ ನಿಗಾವಹಿಸಿರುವ ಬಿಬಿಎಂಪಿ ಮುನ್ನೆಚ್ಚರಿಕೆಯಾಗಿ ಡೋರ್ ಟು ಡೋರ್ ತಪಾಸಣೆಗೆ ಮುಂದಾಗುತ್ತಿದೆ.

ಇಂದಿನಿಂದ ಕಂಟೈನ್‌ಮೆಂಟ್‌ ಜೋನ್‌ನಲ್ಲಿರುವ ಪ್ರತಿ ಮನೆಗಳಿಗೂ ಬಿಬಿಎಂಪಿಯ ಹೆಚ್.ಎಸ್.ಟಿ. ತಂಡ ಭೇಟಿ ನೀಡಲಿದೆ. ಓಟರ್ ಲೀಸ್ಟ್ ಪ್ರಕಾರ ಕೊರೊನಾ ಟೆಸ್ಟ್ ನಡೆಸಲು ತೀರ್ಮಾನಿಸಿದ್ದು, ಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನ ಸಂಗ್ರಹಣೆ ಮಾಡಲು ಮುಂದಾಗಿದೆ.

ತಬ್ಲಿಘಿ ಸಮಾವೇಶದಿಂದ ಸೋಂಕು ಹರಡಿದ್ದು?: ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯತಬ್ಲಿಘಿ ಸಮಾವೇಶದಿಂದ ಸೋಂಕು ಹರಡಿದ್ದು?: ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರಿನ ಪ್ರಸ್ತುತ 6 ವಲಯದಲ್ಲಿ 20 ವಾರ್ಡ್‌ಗಳು ಕಂಟೋನ್ಮೆಂಟ್ ಝೋನ್‌ ನಲ್ಲಿವೆ. ಈ 20 ವಾರ್ಡ್‌ಗಳಲ್ಲಿ ಯಾವುದೇ ಕೊರೊನಾ ಕೇಸ್ ಡಿ-ಆಕ್ಟೀವ್ ಆಗಿಲ್ಲ. ನಿನ್ನೆವರೆಗೂ 19 ವಾರ್ಡ್ ಗಳು ಕಂಟೈನ್ಮೆಂಟ್ ಝೋನ್ ನಲ್ಲಿತ್ತು. ಈಗ ಹೇರೋಹಳ್ಳಿ ವಾರ್ಡ್ ನಲ್ಲಿ ಮತ್ತೊಂದು ಆಕ್ಟೀವ್ ಕೇಸ್ ಪತ್ತೆಯಾಗಿದ್ದು 20ಕ್ಕೆ ಏರಿದೆ.

BBMP Start Door To Door Corona Test From Today

ಬೆಂಗಳೂರಿನ ಪೈಕಿ ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರುವ ಕಂಟೈನ್ಮೆಂಟ್ ಝೋನ್ ಆಗಿದೆ. ಕಂಟೈನ್ಮೆಂಟ್ ಝೋನ್‌ಗಳಲ್ಲಿ ಆಕ್ಟೀವ್ ಕೇಸ್‌ಗಳು ವಿವರ ಇಲ್ಲಿವೆ.

* ಪಾದರಾಯನಪುರ 49 ಕೇಸ್

* ಹೊಂಗಸಂದ್ರ 38 ಕೇಸ್

* ಹಗದೂರು, ಕೆ.ಆರ್ ಮಾರ್ಕೆಟ್ 6 ಕೇಸ್

* ಹಂಪಿ ನಗರ 4 ಕೇಸ್

* ಜಗಜೀವನ ರಾಮನಗರ್ 3 ಕೇಸ್

* ವಸಂತನಗರ 2 ಕೇಸ್

* ಸುಧಾಮನಗರ, ಬೈರಸಂದ್ರ, ಯಶವಂತಪುರ, ಚಲವಾಧಿ ಪಾಳ್ಯ, ದೀಪಾಂಜಲಿನಗರ, ಬಿಳೆಕಹಳ್ಳಿ, ಬೇಗೂರು, ಬಿಟಿಎಂ ಲೇಔಟ್, ಶಿವಾಜಿನಗರ, ಮಲ್ಲೇಶ್ವರಂ, ಹೆಚ್.ಬಿ.ಆರ್ ಲೇಔಟ್, ಹೇರೋಹಳ್ಳಿ ವಾರ್ಡ್ ಗಳಲ್ಲಿ ತಲಾ 1 ಕೇಸ್ ಸಕ್ರಿಯವಾಗಿದೆ.

English summary
BBMP's HTC team will go to door to door and testing COVID 19 in containment zones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X