ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2012ರ ಬಳಿಕ ಮತ್ತೊಮ್ಮೆ ಬಿಬಿಎಂಪಿಯಿಂದ ಬೀದಿ ನಾಯಿ ಗಣತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೀದಿ ನಾಯಿಗಳ ಗಣತಿ ನಡೆಸುತ್ತಿದೆ. 2012ರ ಬಳಿಕ ಮತ್ತೊಮ್ಮೆ ಪಾಲಿಕೆ ಬೆಂಗಳೂರು ನಗರದಲ್ಲಿ ನಾಯಿ ಗಣತಿಗೆ ಆರಂಭಿಸಿದೆ.

ಬಿಬಿಎಂಪಿ ಮೊಬೈಲ್ ಅಪ್ಲಿಕೇಶನ್ ಆಧಾರಿತ ವೈಜ್ಞಾನಿಕ ಸಮೀಕ್ಷೆಯ ಮೂಲಕ ಶ್ವಾನ ಗಣತಿ ನಡೆಸಲಿದೆ. ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮದ ಪ್ರಭಾವ ಅಳೆಯಲು ಈ ಅಧ್ಯಯನವನ್ನು 2007ರಿಂದ ಪಾಲಿಕೆ ನಡೆಸುತ್ತಿದೆ.

ವಿಶ್ವ ಶ್ವಾನ ದಿನ: ಮನುಷ್ಯನ ಅತ್ಯಾಪ್ತ ಸ್ನೇಹಿತನೆಂದರೆ ನಾಯಿವಿಶ್ವ ಶ್ವಾನ ದಿನ: ಮನುಷ್ಯನ ಅತ್ಯಾಪ್ತ ಸ್ನೇಹಿತನೆಂದರೆ ನಾಯಿ

ಬೆಂಗಳೂರು ನಗರದಲ್ಲಿ ಜನರು ಮನೆಗಳಲ್ಲಿ ಸಾಕಿರುವ ನಾಯಿಗಳ ಗಣತಿಯನ್ನು ಮಾಡುವುದಿಲ್ಲ. ಕೇವಲ ಬೀದಿ ನಾಯಿಗಳ ಗಣತಿ ಮಾಡುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 2012ರಲ್ಲಿ ಬೀದಿ ನಾಯಿಗಳ ಗಣತಿಯನ್ನು ಪಾಲಿಕೆ ಮಾಡಿತ್ತು.

ಪಕ್ಕದ ಮನೆ ನಾಯಿ ಬೊಗಳೋದಕ್ಕೆ ಪೊಲೀಸ್ ಠಾಣೆಯಲ್ಲಿ ದೂರುಪಕ್ಕದ ಮನೆ ನಾಯಿ ಬೊಗಳೋದಕ್ಕೆ ಪೊಲೀಸ್ ಠಾಣೆಯಲ್ಲಿ ದೂರು

BBMP To Conduct Census Of Stray Dogs

ವಿಶ್ವ ಪಶು ವೈದ್ಯಕೀಯ ಸೇವೆಗಳು ಅನುಮೋದಿಸಿದ, ಭಾರತದ ಪ್ರಾಣಿ ಕಲ್ಯಾಣ ಮಂಡಳಿಯ ಮಾನ್ಯತೆ ಪಡೆದ ಮೊಬೈಲ್ ಅಪ್ಲಿಕೇಶನ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, 20 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ.

ಎಲ್ಲೆಂದರಲ್ಲಿ ಕಸ ಬಿಸಾಡಿ ಬೆಂಗಳೂರಿಗರು ಕಟ್ಟಿದ್ದು 3 ಲಕ್ಷ ದಂಡಎಲ್ಲೆಂದರಲ್ಲಿ ಕಸ ಬಿಸಾಡಿ ಬೆಂಗಳೂರಿಗರು ಕಟ್ಟಿದ್ದು 3 ಲಕ್ಷ ದಂಡ

ಸಮೀಕ್ಷೆಯ ಸಂದರ್ಭದಲ್ಲಿ ಬೀದಿ ನಾಯಿಗಳ ಸಂಖ್ಯೆಯ ಜೊತೆಗೆ ಶ್ವಾನಗಳ ಲಿಂಗ, ವಯಸ್ಸು ಮತ್ತು ಮರಿಗಳ ಸರಾಸರಿ ವಯಸ್ಸು, ರೋಗ ನಿರೋಧಕ ಸ್ಥಿತಿ ಸೇರಿದಂತೆ ಇತರ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತದೆ.

ವಾರ್ಡ್ ವಾರು ಸಮೀಕ್ಷೆಯನ್ನು ಗೋವಾದ ಡಬ್ಲ್ಯೂವಿಎಸ್ ನಡೆಸಲಿದೆ. 28 ಪ್ಯಾರಾ ಪಶುವೈದ್ಯಕೀಯ ಸಿಬ್ಬಂದಿ ಮತ್ತು ಬಿಬಿಎಂಪಿಯ ಪಶುಸಂಗೋಪನಾ ವಿಭಾಗದ ಅಧಿಕಾರಿಗಳ ತಂಡ ಶ್ವಾನ ಗಣತಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.

English summary
Bruhat Bengaluru Mahanagara Palike (BBMP) has undertaken an app-based scientific survey to estimate the population of stray dogs in the city. The last census of stray dogs was conducted in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X