ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಸಂಗ್ರಹಣೆಗೂ ಹಣ ಸಂಗ್ರಹ ಮಾಡಲಿದೆ ಬಿಬಿಎಂಪಿ!

|
Google Oneindia Kannada News

ಬೆಂಗಳೂರು, ನವೆಂಬರ್ 30 : 2021ರಿಂದ ಬೆಂಗಳೂರು ನಗರದಲ್ಲಿ ಜನರು ಕಸದ ಜೊತೆ ಬಿಬಿಎಂಪಿಗೆ ಹಣವನ್ನು ಸಹ ನೀಡಬೇಕಿದೆ. ಮನೆ, ವಾಣಿಜ್ಯ ಸಂಕೀರ್ಣಗಳಿಂದ ಕಸ ಸಂಗ್ರಹ ಮಾಡುವುದಕ್ಕೂ ಶುಲ್ಕ ವಿಧಿಸಲು ಪಾಲಿಕೆ ಚಿಂತನೆ ನಡೆಸಿದೆ.

ಜನವರಿ 1ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸ ಸಂಗ್ರಹಣೆ ಮಾಡಲು ಸಹ ಶುಲ್ಕ ವಿಧಿಸಲಿದೆ. ಮನೆಗಳಿಂದ 200 ರೂ., ವಾಣಿಜ್ಯ ಸಂಕೀರ್ಣಗಳಿಂದ 500 ರೂ. ಶುಲ್ಕವನ್ನು ಸಂಗ್ರಹ ಮಾಡಲು ತೀರ್ಮಾನಿಸಲಾಗಿದೆ.

ಕೊಡಗಿನಲ್ಲೊಂದು ಪ್ರಸಂಗ; ರಸ್ತೆ ಬದಿ ಕಸ ಎಸೆದ ಪ್ರವಾಸಿಗರಿಗೆ ತಕ್ಕ ಪಾಠಕೊಡಗಿನಲ್ಲೊಂದು ಪ್ರಸಂಗ; ರಸ್ತೆ ಬದಿ ಕಸ ಎಸೆದ ಪ್ರವಾಸಿಗರಿಗೆ ತಕ್ಕ ಪಾಠ

ಬೆಸ್ಕಾಂ ಜೊತೆ ಬಿಬಿಎಂಪಿ ಈ ಕುರಿತು ಮಾತುಕತೆ ನಡೆಸುತ್ತಿದೆ. ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡುವಾಗ ಕಟ್ಟಡದ ಮಾಲೀಕರು ಕಸ ಸಂಗ್ರಹ ಶುಲ್ಕವನ್ನು ಸಹ ಕಟ್ಟಬೇಕಿದೆ. ಈ ಕುರಿತ ಮಾತುಕತೆ ಆರಂಭಿಕ ಹಂತದಲ್ಲಿದೆ.

ಬಿಬಿಎಂಪಿ ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌ ಬಿಬಿಎಂಪಿ ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

BBMP To Collect User Fee For Collection Of Garbage

ಸಂಗ್ರಹ ಮಾಡಿದ ಕಸವನ್ನು ವಿಲೇವಾರಿ ಮಾಡಲು ಶುಲ್ಕವನ್ನು ಸಂಗ್ರಹ ಮಾಡಲಾಗುತ್ತದೆ. ಮನೆಯ ಮುಂದ ಬರುವ ಆಟೋಗಳಿಗೆ ಕಸವನ್ನು ನೀಡುವ ಮಾಲೀಕರು ಶುಲ್ಕವನ್ನು ಕಟ್ಟಬೇಕು. ಖಾಲ ಇರುವ ಮನೆ, ವಾಣಿಜ್ಯ ಸಂಕೀರ್ಣದಿಂದ ಶುಲ್ಕ ಸಂಗ್ರಹ ಇಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಬೆಂಗಳೂರು; ಕಸ ಸಂಗ್ರಹಣೆ ಟಿಪ್ಪರ್ ಮಾಹಿತಿ ಬೆರಳ ತುದಿಯಲ್ಲಿ ಬೆಂಗಳೂರು; ಕಸ ಸಂಗ್ರಹಣೆ ಟಿಪ್ಪರ್ ಮಾಹಿತಿ ಬೆರಳ ತುದಿಯಲ್ಲಿ

ಬೆಸ್ಕಾಂ ಕಟ್ಟಡದ ಮಾಲೀಕರು ಕಸದ ಶುಲ್ಕವನ್ನು ಪಾವತಿ ಮಾಡಲು ಅನುಕೂವಾಗುವಂತೆ ತಂತ್ರಾಶದಲ್ಲಿ ಬದಲಾವಣೆ ತರುತ್ತಿದೆ. ಯಾವ ಮಾಲೀಕರು ಶುಲ್ಕ ಕಟ್ಟುವುದಿಲ್ಲವೋ ಆ ಬಗ್ಗೆ ಬಿಬಿಎಂಪಿಗೆ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ.

46 ಲಕ್ಷ ಮನೆಗಳು, 6.5 ಲಕ್ಷ ವಾಣಿಜ್ಯ ಸಂಕೀರ್ಣಗಳು ಬೆಸ್ಕಾಂ ವ್ಯಾಪ್ತಿಯಲ್ಲಿವೆ ಎಂದು ಅಂದಾಜಿಸಲಾಗಿದೆ. ವಿದ್ಯುತ್ ಬಿಲ್ ಪಾವತಿ ಮಾಡುವಾಗಲೇ ಜನರು ಕಸ ಸಂಗ್ರಹ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ. ಇದಕ್ಕಾಗಿ ಅಗತ್ಯ ಬದಲಾವಣೆಯನ್ನು ತರಲಾಗುತ್ತದೆ.

ಕಸ ಸಂಗ್ರಹಣ ಶುಲ್ಕವನ್ನು ಸಂಗ್ರಹ ಮಾಡುವ ಪ್ರಸ್ತಾಪಕ್ಕೆ ವಿರೋಧವೂ ವ್ಯಕ್ತವಾಗಿದೆ. ಈಗಾಗಲೇ ಪಾಲಿಕೆ ಸದಸ್ಯರ ಅವಧಿ ಅಂತ್ಯಗೊಂಡಿದ್ದು, ಬಿಬಿಎಂಪಿ ಆಡಳಿತ ಅಧಿಕಾರಿಗಳ ಕೈಯಲ್ಲಿ ಇದೆ. ಅವರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ? ಎಂದು ಕಾದು ನೋಡಬೇಕು.

English summary
Bruhat Bengaluru Mahanagara Palike (BBMP) is gearing up to collect a user fee for the collection of garbage from residents. Rs 200 for property owners and Rs 500 from commercial establishments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X