ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಸತಿ ಪ್ರದೇಶದಲ್ಲಿರುವ 7,700 ಅನಧಿಕೃತ ವಾಣಿಜ್ಯ ಕಟ್ಟಡಗಳಿಗೆ ಬೀಗ

|
Google Oneindia Kannada News

ಬೆಂಗಳೂರು, ಜನವರಿ 22: ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ವಾಣಿಜ್ಯ ಕಟ್ಟಡಗಳನ್ನು ಫೆಬ್ರವರಿಯೊಳಗೆ ಬಂದ್ ಮಾಡುವಂತೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

23 ಸಾವಿರ ಹೊಸ ಕಟ್ಟಡಗಳ ತೆರಿಗೆ ಬಾಕಿ: ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು 23 ಸಾವಿರ ಹೊಸ ಕಟ್ಟಡಗಳ ತೆರಿಗೆ ಬಾಕಿ: ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು

ಫೆಬ್ರವರಿ ಒಳಗೆ ನಗರದ ವಸತಿಪ್ರದೇಶದಲ್ಲಿರುವ 7,700 ವಾಣಿಜ್ಯ ಕಟ್ಟಡಗಳನ್ನು ಮುಚ್ಚಲಾಗುತ್ತದೆ. ಜನವರಿ 9ರಿಂದಲೇ ಕಾರ್ಯವನ್ನು ಅರಂಭಿಸಿದ್ದಾರೆ. ಇಲ್ಲಿಯವರೆಗೆ 716 ವಾಣಿಜ್ಯ ಕಟ್ಟಡಗಳನ್ನು ಮುಚ್ಚಲಾಗಿದೆ.

BBMP to close 7,700 commercial setups by Feb

ವೈಟ್‌ಫೀಲ್ಡ್, ವರ್ತೂರು, ಕಾಡುಗೋಡಿಯಲ್ಲಿ ಇರುವ 82 ವಾಣಿಜ್ಯ ಕಟ್ಟಡಗಳ ಪೈಕಿ 32, ಪುಲಕೇಶಿನಗರ, ಸರ್ವಜ್ಞನಗರ ಪ್ರದೇಶದಲ್ಲಿರುವ 716 ಕಟ್ಟಡಗಳ ಪೈಕಿ 147 ಕಟ್ಟಡಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಒಟ್ಟು 8,439 ಕಟ್ಟಡಗಳಿಗೆ ನೋಟಿಸ್ ನೀಡಿದ್ದು ಅದರಲ್ಲಿ 7700 ಕಟ್ಟಡಗಳನ್ನು ಫೆಬ್ರವರಿ ಒಳಗೆ ಮುಚ್ಚಲಾಗುತ್ತಿದೆ.

ಎನ್‌ಜಿಟಿ ಆದೇಶ ಜಾರಿಯಾದರೆ ಬೆಂಗಳೂರಿನ ಶೇ.95 ರಷ್ಟು ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಇನ್ನುಮುಂದೆ ಕೆರೆಯ ಜಾಗದಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಕೂಡ ಬೀಗ ಹಾಕಲಾಗುತ್ತದೆ.
2016ರ ಎನ್‌ಜಿಟಿ ಆದೇಶ ಪಾಲನೆ ಮಾಡಿದರೆ ಬೆಂಗಳೂರಿನ ಬಹುತೇಕ ಕಟ್ಟಡಗಳು ನಾಶವಾಗುತ್ತದೆ.

ಅಷ್ಟೇ ಅಲ್ಲದೆ ಸಂತ್ರಸ್ತರಿಗೆ 3 ಲಕ್ಷ ಕೋಟಿ ಪರಿಹಾರ ನೀಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಮೂರನೇ ಹಂತದ ರಾಜಕಾಲುವೆ ಪ್ರತಿ ಮನೆ ಕಟ್ಟಡದ ಮುಂದೆ ಇದೆ. ಎನ್‌ಜಿಟಿ ಆದೇಶ ಪಾಲಿಸಿದರೆ ಕೆಲವು ನಿವೇಶನ ಹಾಗೂ ಮನೆಗಳನ್ನು ಬಿಟ್ಟು ಉಳಿದವುಗಳನ್ನು ಕೆಡವಬೇಕಾಗುತ್ತದೆ ಎಂದು ತಿಳಿಸಿದೆ.ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

English summary
The local civic body which has received strict orders by Deputy Chief Minister Dr G Parameshwara, on the closure of all commercial establishments in residential areas and basement spaces in the city, has a long way to go, to complete the task.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X