ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಕ್ಲಿನಿಕ್‌ಗಳಲ್ಲಿ SARI ಹಾಗೂ ILI ಲಕ್ಷಣಗಳಿರುವವರಿಗೆ ಕೋವಿಡ್ ಪರೀಕ್ಷೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗದಂತೆ ಬಿಬಿಎಂಪಿ ಕ್ರಮ ಕೈಗೊಂಡಿದೆ. ಇದರಂತೆ ಖಾಸಗಿ ಕ್ಲಿನಿಕ್ ಗಳಿಗೆ ಬರುವ SARI ಹಾಗೂ ಐಎಲ್ಐ ಲಕ್ಷಣಗಳುಳ್ಳ ವ್ಯಕ್ತಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ನಗರದ ಒಟ್ಟು ಎಂಟು ವಲಯಗಳಲ್ಲಿ 57 ಸಕ್ರಿಯ ಕಂಟೈನ್‌ಮೆಂಟ್ ವಲಯಗಳಿದ್ದು, ಬಿಬಿಎಂಪಿ ಈ ವರೆಗೂ 2.12 ಕೋಟಿ (2,12,80,217) ಕೋವಿಡ್ -19 ಪರೀಕ್ಷೆಗಳನ್ನು ನಡೆಸಿದೆ ಎಂದು ತಿಳಿದುಬಂದಿದೆ. ದೈನಂದಿನ ಪರೀಕ್ಷೆಗಳು 36,000 ಮತ್ತು 52,000 ನಡುವೆ ಇರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ರಿಟನ್‌ನಲ್ಲಿ ಕಾಣಿಸಿಕೊಂಡಿದ್ದ AY 4.2 ವೈರಸ್ ತಳಿ ಕರ್ನಾಟಕದಲ್ಲೂ ಪತ್ತೆಬ್ರಿಟನ್‌ನಲ್ಲಿ ಕಾಣಿಸಿಕೊಂಡಿದ್ದ AY 4.2 ವೈರಸ್ ತಳಿ ಕರ್ನಾಟಕದಲ್ಲೂ ಪತ್ತೆ

ಖಾಸಗಿ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಅಲ್ಲಿಗೆ ಬರುವ ಸಾರಿ ಹಾಗೂ ಐಎಲ್ಐ ಲಕ್ಷಣಗಳಿರುವ ಜನರಿಗೆ ಕೋವಿಡ್ ಪರೀಕ್ಷೆ ನಡೆಸುವಂತೆ ನಮ್ಮ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.

BBMP Tests ILI,SARI Cases In Private Clinics For COVID-19

SARI ಹಾಗೂ ಐಎಲ್ಐ ಲಕ್ಷಣಗಳಿರುವ ಜನರು ಮೊದಲು ಸ್ಥಳೀಯ ಕ್ಲಿನಿಕ್ ಗಳಿಗೆ ಹೋಗುತ್ತಾರೆ. ಅಲ್ಲಿಯೇ ಅವರಿಗೆ ಪರೀಕ್ಷೆಗಳನ್ನು ಮಾಡುವ ಕೆಲಸ ಮಾಡಿದರೆ, ಕೋವಿಡ್‌ನ್ನು ನಿಯಂತ್ರಿಸಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರು ಹೇಳಿದ್ದಾರೆ.

ಈ ಹಿಂದೆ ಹೆಚ್ಚು ಸೋಂಕಿರುವ ಪ್ರದೇಶದಲ್ಲಿ ಕೊಳಚೆ ನೀರು ಸಂಗ್ರಹಿಸಿ, ಪರೀಕ್ಷೆ ನಡೆಸಲು ಬಿಬಿಎಂಪಿ ಸೂಚನೆ ನೀಡಿತ್ತು. ಕೊಳಚೆ ನೀರು ಎಲ್ಲಾ ಮಿಶ್ರಣವಾಗಿದೆ. ಹೀಗಾಗಿ ವೈರಲ್ ಲೋಡ್‌ ಕುರಿತು ಸ್ಪಷ್ಟ ಮಾಹಿತಿಗಾಗಿ ವಾರ್ಡ್ ಮಟ್ಟದಲ್ಲಿನ ಒಳಚರಂಡಿ ಮಾದರಿಗಳನ್ನು ಪರೀಕ್ಷಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.

ರೋಗಲಕ್ಷಣವಿಲ್ಲದ ರೋಗಿಗಳು ಕೂಡ ವೈರಸ್ ನ್ನು ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಕ್ರಮ ಕೈಗೊಳ್ಳಲು ಇದು ನಮಗೆ ಸಹಾಯ ಮಾಡಲಿದೆ ಎಂದು ತ್ರಿಲೋಕ್ ಚಂದ್ರ ಅವರು ತಿಳಿಸಿದ್ದಾರೆ.

ಬಿಬಿಎಂಪಿ ವಾರ್ ರೂಮ್ ಅಂಕಿಅಂಶಗಳ ಪ್ರಕಾರ, ದೊಡ್ಡನೆಕ್ಕುಂದಿ, ಬೆಳ್ಳಂದೂರು, ಬೇಗೂರು, ಹೂಡಿ, ರಾಜರಾಜೇಶ್ವರಿ ನಗರ, ವರ್ತೂರು, ಹೊಸ ತಿಪ್ಪಸಂದ್ರ, ಹೊರಮಾವು, ಎಚ್‌ಎಸ್‌ಆರ್ ಲೇಔಟ್ ಮತ್ತು ವಸಂತಪುರದಲ್ಲಿ ಕಳೆದ 10 ದಿನಗಳಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

English summary
With Covid-19 cases at a low in the capital, BBMP has instructed its staff to take up focused testing of patients suspected to have caught the virus, to keep a tab on any possible surge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X