ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಭಿವೃದ್ಧಿ ಶುಲ್ಕು ಸಂಗ್ರಹ ಆರಂಭಿಸಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜು. 8 : ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ­ಯಲ್ಲಿ ಜಿಲ್ಲಾಧಿಕಾರಿ­ಗಳಿಂದ ಭೂ ಬಳಕೆ ಪರಿವರ್ತನೆಯಾದ ಬಿಡಿ ನಿವೇಶನಗಳಿಂದ ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ಸುತ್ತೋಲೆ ಹೊರಡಿಸಲಾಗಿದೆ. ಆಯುಕ್ತರು ಹೊರಡಿಸಿದ ಸುತ್ತೋಲೆ­ಯಂತೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಿ, ನಿವೇಶನಗಳಿಗೆ ಅಧಿಕೃತ ಖಾತೆ ನೀಡುವ ಪ್ರಕ್ರಿಯೆಯನ್ನು ಕಂದಾಯ ಅಧಿಕಾರಿಗಳು ಆರಂಭಿಸಿದ್ದಾರೆ.

ಸೋಮವಾರ ಈ ಕುರಿತು ಸುತ್ತೋಲೆ ಹೊರಡಿಸಿರುವ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ಅವರು, ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಪ್ರದೇಶಗಳಲ್ಲಿ ವ್ಯವಸಾಯೇತರ ಉಪಯೋಗಕ್ಕಾಗಿ ಭೂ ಪರಿವರ್ತನೆಯಾದ ಜಾಗದಲ್ಲಿರುವ ನಿವೇಶನಗಳಿಂದ ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ಒಪ್ಪಿಗೆ ನೀಡಿದ್ದಾರೆ.

bbmp

ಬಿಬಿಎಂಪಿಯ ಹಳೆಯ ವಾರ್ಡ್‌ ಗಳಲ್ಲಿ ಪ್ರತಿ ಚದರ ಮೀಟರ್‌ ಗೆ ರೂ. 200 ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 98 ವಾರ್ಡ್ ಗಳಲ್ಲಿ ಪ್ರತಿ ಚದರ ಮೀಟರ್ ಗೆ 250 ರೂ. ಅಭಿವೃದ್ಧಿ ಶುಲ್ಕ ನಿಗದಿಗೊಳಿಸಲಾಗಿದೆ. ಹೊಸ ವಾರ್ಡ್‌ ಗಳಲ್ಲಿ ಮೂಲ­ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಾಗಿರುವ ಕಾರಣ, ಹೆಚ್ಚಿನ ಶುಲ್ಕ ನಿಗದಿ ಮಾಡಲಾಗಿದೆ. [ಕೆ.ಆರ್.ಮಾರುಕಟ್ಟೆ ಬೆಳಗಿದ ಹಸಿ ತ್ಯಾಜ್ಯ]

ಶುಲ್ಕ ಹೆಚ್ಚಾಗಿತ್ತು : 2010ರಲ್ಲಿ ಪ್ರತಿ ಚದರ ಮೀಟರ್‌ ಗೆ ರೂ. 560ರಂತೆ ಅಭಿವೃದ್ಧಿ ಶುಲ್ಕ ನಿಗದಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈ­ಕೋರ್ಟ್‌ ಮೆಟ್ಟಿಲೇರಿದ್ದರು. ಆದ್ದರಿಂದ, ಹೊಸ ದರ ನಿಗದಿಪಡಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಆ ಬಳಿಕ ರಚನೆಯಾದ ಸಮಿತಿ ಶಿಫಾ­ರಸಿನ ಆಧಾ­ರ­ದಲ್ಲಿ ಹೊಸ ದರ ನಿಗದಿ ಪಡಿಸಲಾಯಿತು.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಭಿವೃದ್ಧಿ ಶುಲ್ಕ ಸಂಗ್ರಹಣೆ ಮಾಡಲು ಬಿಬಿಎಂಪಿಯ ಕೌನ್ಸಿಲ್ ಸಭೆಯಲ್ಲಿ ಕೆಲವು ದಿನಗಳ ಹಿಂದೆ ತೀರ್ಮಾನ ಕೈಗೊಳ್ಳಲಾಗಿತ್ತು. ಸದ್ಯ, ಆಯುಕ್ತರು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.

English summary
The Bruhat Bangalore Mahanagara Palike (BBMP) has set in motion the process of collection of betterment charges towards regularization of sites formed under converted lands. A circular was issued on Monday directing BBMP’s Revenue officials to start collecting the fee. BBMP fixed the betterment charges at Rs. 200 per sq m for converted land in 100 wards in core areas and Rs. 250 per sq m for the same in 98 wards in newly added areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X