ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆ ಮನೆಗೆ ಬರಲಿದೆ ಮಾಂಟೆಸ್ಸರಿ ಮಕ್ಕಳಿಗಾಗಿ 'ಸ್ಕೂಲ್ ಆನ್ ವೀಲ್ಸ್'!

|
Google Oneindia Kannada News

ಬೆಂಗಳೂರು, ಮೇ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯ ವ್ಯಾಪ್ತಿಯ ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಫ್ರೀಥಿಂಕಿಂಗ್ ಫೌಂಡೇಶನ್ ಸಂಸ್ಥೆಯು ಪಾಲಿಕೆಯ ಸಹಭಾಗಿತ್ವದಲ್ಲಿ "ಮಾಂಟೆಸ್ಸರಿ ಸ್ಕೂಲ್ ಆನ್ ವೀಲ್'(ಮನೆ ಬಾಗಿಲಿಗೆ ಶಾಲೆ) ಒಂದು ವಾಹನಕ್ಕೆ ಸಹಾಯಕ ಆಯುಕ್ತರು(ಶಿಕ್ಷಣ) ಉಮೇಶ್ ರವರು ಚಾಲನೆ ನೀಡಿದರು.

ಫ್ರೀ ಥಿಂಕಿಂಗ್ ಫೌಂಡೇಷನ್ ಸಂಸ್ಥೆ ಮತ್ತು ಬಿಬಿಎಂಪಿಯ ಸಹಭಾಗಿತ್ವದಲ್ಲಿ ವಿಶ್ವದ ಮೊದಲ ಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ಸ್ ಅನ್ನು ಸ್ಥಾಪಿಸುತ್ತಿದೆ. ಇದರ ಉದ್ದೇಶ ಬೆಂಗಳೂರಿನ ಕೊಳೆಗೇರಿಗಳಲ್ಲಿ ವಾಸಿಸುವ 2.5 ರಿಂದ 6 ವರ್ಷ ವಯಸ್ಸಿನ ಅಂಚಿನಲ್ಲಿರುವ ಮಕ್ಕಳ ಆರಂಭಿಕ ಕಲಿಕೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮವಾಗಿದೆ. ಮನೆ ಬಾಗಿಲಿನಲ್ಲಿ ಅಂದರೆ ಒಂದು ಕಡೆಯಲ್ಲಿ ವಾಹನವನ್ನು ನಿಲ್ಲಿಸಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವುದಾಗಿದೆ.

ಈಗಾಗಲೇ ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲೂ ಸ್ಕೂಲ್ ಆನ್ ವೀಲ್(ಮನೆ ಬಾಗಿಲಿಗೆ ಶಾಲೆ) ವಾಹನಗಳ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ದಕ್ಷಿಣ ವಲಯದಲ್ಲಿ ಫ್ರೀಥಿಂಕಿಂಗ್ ಫೌಂಡೇಷನ್ ಸಂಸ್ಥೆ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮವು ಮೂಲಭೂತವಾಗಿ ವಿಭಿನ್ನವಾಗಿದೆ.

ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪಾಠ ಪ್ರವಚನ

ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪಾಠ ಪ್ರವಚನ

ಶಾಲಾ ಶಿಕ್ಷಣವು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯದೆ, ಮಕ್ಕಳು ಹತ್ತಿರದ ಉದ್ಯಾನವನದಲ್ಲಿ ಪ್ರಕೃತಿಯನ್ನು ಅನ್ವೇಷಿಸುವಂತೆ ಬಸ್ಸಿನಲ್ಲಿ ವಿದ್ಯಾಭ್ಯಾಸ ಮಾಡಲು ಆಯ್ಕೆಮಾಡಿಕೊಳ್ಳಲಾಗಿರುತ್ತದೆ. ಸದರಿ ಆಯ್ಕೆಯಿಂದ ಮಕ್ಕಳಲ್ಲಿ ಸ್ವಾತಂ‍ತ್ರ್ಯದ ಮನೋಭಾವ ವಿನ್ಯಾಸಗೊಳಿಸಿದಂತಾಗುತ್ತದೆ. ಈ ಕಾರ್ಯಕ್ರಮಕ್ಕೆ ಪಾಲಿಕೆ ವತಿಯಿಂದ ಬಸ್ಸುಗಳನ್ನು ಒದಗಿಸಿದ್ದು, ಪ್ರತೀ ಒಂದು ಬಸ್ಸಿನಲ್ಲಿ 50 ವಿದ್ಯಾರ್ಥಿಗಳು ಕುಳಿತು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪಾಠ ಪ್ರವಚನಗಳನ್ನು ಕಲಿಯಲು ಆಸನದ ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲದೆ ಇದರೊಂದಿಗೆ ಎಲ್ಲಾ ಮಾಂಟೆಸ್ಸರಿ ಕಲಿಕಾ ಸಾಮಾಗ್ರಿಗಳನ್ನು ಸಹ ಬಸ್ಸಿನಲ್ಲಿ ಇರಿಸಲಾಗಿರುತ್ತದೆ.

ಮಕ್ಕಳಿಗೆ ಊಟದ ವ್ಯವಸ್ಥೆ ಮತ್ತು ಆರೋಗ್ಯ ತಪಾಸಣೆ

ಮಕ್ಕಳಿಗೆ ಊಟದ ವ್ಯವಸ್ಥೆ ಮತ್ತು ಆರೋಗ್ಯ ತಪಾಸಣೆ

ಮಕ್ಕಳಿಗೆ ಮಾಂಟೆಸ್ಸರಿ ವಿಧಾನದಲ್ಲಿ ಬೋಧನೆ ಮಾಡಲು ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿರುತ್ತದೆ. ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮೊದಲ ಮಾಂಟೆಸ್ಸರಿ ವೀಲ್ಸ್ ಶಾಲೆಯನ್ನು ಮೇ 25ರಂದು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದ ಭಾಗವಾಗಿ ಫ್ರೀಥಿಂಕಿಂಗ್ ಫೌಂಡೇಷನ್ ಸಂಸ್ಥೆ ವತಿಯಿಂದ ಮಕ್ಕಳಿಗೆ ಊಟದ ವ್ಯವಸ್ಥೆ ಮತ್ತು ಆರೋಗ್ಯ ತಪಾಸಣೆಗಳನ್ನು ಸಹ ನೀಡಲಾಗುತ್ತದೆ.

ವಾಹನದಲ್ಲಿರುವ ಸೌಲಭ್ಯಗಳು:

ವಾಹನದಲ್ಲಿರುವ ಸೌಲಭ್ಯಗಳು:

* ಇಬ್ಬರು ಶಿಕ್ಷಕಿಯರು

* ಓರ್ವ ಗ್ರೂಪ್ ಡಿ ನೌಕರ

* ಮಾಂಟೆಸ್ಸರಿ ಕಲಿಕಾ ಸಾಮಗ್ರಿಗಳು

* ಆಡಿಯೋ ದೃಶ್ಯವಾಳಿ-ಲ್ಯಾಪ್‌ಟಾಪ್

* ಗ್ರಂಥಾಲಯ ಪುಸ್ತಕಗಳು

* ಲೇಖನಾ ಸಾಮಗ್ರಿಗಳು

* ಕಪ್ಪು ಹಲಗೆ(ಬ್ಲಾಕ್ ಬೋರ್ಡ್)

* ಮಕ್ಕಳ ಸ್ನೇಹಿ ಚಿತ್ರಗಳ ಅಳವಡಿಕೆ

* ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಸೌಲಭ್ಯಗಳು ಇರಲಿವೆ.

ಸ್ಕೂಲ್ ಆನ್ ವೀಲ್‌ನಲ್ಲಿ ಇಬ್ಬರು ಶಿಕ್ಷಕಿಯರು , ಡಿಗ್ರೂಪ್ ನೌಕರ , ಮಾಂಟೆಸ್ಸರಿ ಕಲಿಕಾ ಸಾಮಗ್ರಿಗಳು, ಆಡಿಯೋದೃಶ್ಯಾವಳಿ ಲ್ಯಾಪ್‌ಟಾಪ್, ಗ್ರಂಥಾಲಯ ಪುಸ್ತಕಗಳು, ಕಪ್ಪು ಹಲಗೆ, ಮಕ್ಕಳ ಸ್ನೇಹಿ ಚಿತ್ರಗಳ ಅಳವಡಿಕೆ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಸೌಲಭ್ಯಗಳನ್ನು ಒದಗಿಸುತ್ತಿದ್ದು. ಮಕ್ಕಳು ಪ್ರಕೃತಿಯ ಮಡಿಲಲ್ಲಿ ಶಿಕ್ಷಣವನ್ನು ಕಲಿಯುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು

""ಬಿಬಿಎಂಪಿ ವತಿಯಿಂದ ಸ್ಕೂಲ್ ಆನ್ ವೀಲ್ ಗೆ ಚಾಲನೆಯನ್ನು ನೀಡಲಾಗಿದೆ. ಕೋಳಗೇರಿಯ ಮಕ್ಕಳು ಶಾಲೆಗೆ ಹೋಗದಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಚಾರಿ ಶಾಲೆಯನ್ನು ಪ್ರಾರಂಭಿಸಲಾಗಿದೆ. ಈ ಮಾಂಟೆಸೆರಿ ಶಾಲೆಯಲ್ಲಿ 2.5 ರಿಂದ 6 ವರ್ಷದವರೆಗಿನ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ. ಆರು ವರ್ಷಕ್ಕಿಂತ ದೊಡ್ಡ ಮಕ್ಕಳು ಬಂದರೆ ಸಮೀಪದ ಬಿಬಿಎಂಪಿ ಅಥವಾ ಸರ್ಕಾರಿ ಶಾಲೆಗೆ ಸೇರಿಸಲಾಗುತ್ತದೆ. ಈ ವರ್ಷ ಸ್ಕೂಲ್ ಆನ್ ವೀಲ್‌ನಲ್ಲಿ ಕಲಿತ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ದಾಖಲು ಮಾಡಿಸುತ್ತೇವೆ. ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿಯಿಂದ ಸ್ಕೂಲ್ ಆಫ್ ವೀಲ್ ಅನ್ನು ಪ್ರಾರಂಭಿಸಿದ್ದೇವೆ'' ಎಂದು ಬಿಬಿಎಂಪಿ ಸಹಾಯಕ ಆಯುಕ್ತರು(ಶಿಕ್ಷಣ) ಉಮೇಶ್ ತಿಳಿಸಿದ್ದಾರೆ.

English summary
BBMP has opened an innovative Montessori school called the "School on Wheels' for the education of poor slum children. The children will be educated in the bus with all facilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X