ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2 ಲಕ್ಷ ಖರ್ಚು ಮಾಡಿ ಬಿಬಿಎಂಪಿ ಹಿಡಿದದ್ದು 20 ಇಲಿ!

By Super
|
Google Oneindia Kannada News

ಬೆಂಗಳೂರು,ಜು.10: ಅಕ್ರಮಗಳಿಗೆ ಹೆಸರಾಗಿರುವ ಬಿಬಿಎಂಪಿ ಅಧಿಕಾರಿಗಳು ಈಗ ಇಲಿ ಹಿಡಿಯುದರಲ್ಲೂ ಅಕ್ರಮ ಮಾಡಿದ್ದಾರೆ. ಬಿಬಿಎಂಪಿ ಕಚೇರಿಯ ಅಧಿಕಾರಿಗಳು 2 ಲಕ್ಷ ಖರ್ಚು‌ ಮಾಡಿ ಅತಿ ಹೆಚ್ಚು 20 ಇಲಿಗಳನ್ನು ಹಿಡಿದಿದ್ದಾರೆ.!

ಪಾಲಿಕೆ ಅಧಿಕಾರಿಗಳು ನಡೆಸಿರುವ ಇಂತಹ ದುಂದು ವೆಚ್ಚದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಬುಧವಾರ ನಡೆದ ಕೌನ್ಸಿಲ್‌ ಸಭೆಯಲ್ಲೂ 2 ಲಕ್ಷದಲ್ಲಿ 20 ಇಲಿ ಹಿಡಿದ ಪ್ರಕರಣ ಪ್ರಸ್ತಾಪವಾಗಿ ಭಾರೀ ಚರ್ಚೆಗೆ ಗ್ರಾಸವಾಯಿತು.

ಈ ಅಕ್ರಮವನ್ನು ಬಯಲು ಮಾಡಿದ ಯಡಿಯೂರು ಕಾರ್ಪೋರೇಟರ್‌ ಎನ್‌.ಆರ್‌. ರಮೇಶ್‌ ಮಾತನಾಡಿ ಅಧಿಕಾರಿಗಳು ಎಷ್ಟು ಭ್ರಷ್ಟರಾಗಾಗಿದ್ದಾರೆಂದರೆ ಇಲಿ ಹಿಡಿಯುವ ಹೆಸರಿನಲ್ಲೂ ಅಕ್ರಮ ಮಾಡುತ್ತಿದ್ದಾರೆ. ಎಷ್ಟು ಇಲಿಗಳನ್ನು ಹಿಡಿದಿದ್ದೀರಿ ಎಂದು ಆರ್‌ಟಿಐ ಅಡಿಯಲ್ಲಿ ಪ್ರಶ್ನಿಸಿ ಅಧಿಕಾರಿಗಳಿಂದ ಲಿಖಿತ ಉತ್ತರ ಬಯಸಿ ಪತ್ರ ಬರೆದಿದ್ದೆವು. ಈ ವೇಳೆ ಅಧಿಕಾರಿಗಳು 2 ಲಕ್ಷ ರೂ. ವೆಚ್ಚ ಮಾಡಿ , 20 ಇಲಿ ಹಿಡಿಯಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದಾರೆ ಎಂದು ಅವರು ತಿಳಿಸಿದರು.

bbmp
ಕಚೇರಿ ನವೀಕರಣಕ್ಕಾಗಿ ನೀಡಿದ ಹಣವನ್ನು ಅಧಿಕಾರಿಗಳು ಇಲಿಗಳನ್ನು ಕೊಲ್ಲಲು ಬೃಹತ್ ಮೊತ್ತದ ಹಣ ಖರ್ಚು ಮಾಡಿದ್ದಾರೆ. ಅಲ್ಮೆರಾ, ಮೇಜುಗಳನ್ನು ಖರೀದಿಸಿ ಕಚೇರಿ ನವೀಕರಣ ಮಾಡುವಲ್ಲೂ ಅವ್ಯವಹಾರ ನಡೆದಿದೆ ಎಂದು ರಮೇಶ್ ಆರೋಪಿಸಿದರು.

ಅಲ್ಮೆರಾ, ಮೇಜುಗಳನ್ನು ಖರೀದಿಯಲ್ಲೂ ಅಧಿಕಾರಿಗಳು ಅವ್ಯವಹಾರ ನಡೆದಿದ್ದು, 6-7 ಅಡಿ ಉದ್ದದ ತೆಳುವಾದ ಅಲ್ಮೆರಾಗಳನ್ನು ಖರೀದಿಸಿ 16-17 ಸಾವಿರ ಬಿಲ್ ಮಾಡುತ್ತಾರೆ ಎಂದು ರಮೇಶ್ ಆರೋಪಿಸಿದರು.

ಬಿಬಿಎಂಪಿ ಇಲಿಗಳ ನಿಯಂತ್ರಣಕ್ಕೆ 08-10-12 ರಿಂದ 08-01-2013 ರವರೆಗೆ 99,000 ರೂ., 01-08-13 ರಿಂದ 31-10-13ರವರೆಗೆ 99,000 ವೆಚ್ಚ ಮಾಡಿರುವ ದಾಖಲೆಯನ್ನು ಎನ್.ಆರ್. ರಮೇಶ್ ಸಭೆಯಲ್ಲಿ ಪ್ರದರ್ಶಿಸಿದರು.

English summary
At almost Rs 10,000 per rat, the BBMP has probably paid the steepest price to its 'Piper' (companies chosen through e-procurement) to get rid of pesky rodents. Armed with an RTI reply, Yediyur corporator N R Ramesh stunned the BBMP Council when he said the Palike had spent Rs 2 lakh in six months to catch rats at the Palike head office in NR square and IPP building in Malleswaram. And in six months, they managed to trap only 20 rats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X