ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಗೆ ಮತ್ತೆ ಇಲಿಗಳ ಕಾಟವಂತೆ, ಒಂದು ಇಲಿ ಹಿಡಿದರೆ 10 ಸಾವಿರ

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಬಿಬಿಎಂಪಿಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆಯಂತೆ, ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇಲಿಗಳು ಕಡತಗಳನ್ನು ಹಾಳು ಮಾಡುತ್ತಿವೆ. ಜೆರಾಕ್ಸ್ ಯಂತ್ರದ ತಂತಿಗಳನ್ನು ಕಚ್ಚಿ ತುಂಡು ಮಾಡುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಕಟ್ಟಡ ಕುಸಿತ, ಪ್ರವಾಹ ಸಮಸ್ಯೆ ಏನೇ ಇದ್ದರೂ ತಲೆ ಕೆಡಿಸಿಕೊಳ್ಳದ ಬಿಬಿಎಂಪಿ ಇದೀಗ ಇಲಿಗಳಿಗೆ ತಲೆ ಕೆಡಿಸಿಕೊಳ್ಳುವಂತಾಗಿದೆ. 2012 ರಿಂದ 2013ರವರೆಗೆ ಇಲಿ ಹಿಡಿಯುವ ಕೆಲಸ ಮಾಡಲಾಗಿತ್ತು.

2012ರ ಅಕ್ಟೋಬರ್ ನಿಂದ 2013ರ ಜನವರಿ ಹಾಗೂ 2013ರ ಆಗಸ್ಟ್‌ನಿಂದ ಅಕ್ಟೋಬರ್ ವರೆಗೆ ಆರು ತಿಂಗಳಲ್ಲಿ ಒಟ್ಟು 2 ಲಕ್ಷ ರೂ ಖರ್ಚು ಮಾಡಿ 20 ಇಲಿಗಳನ್ನು ಹಿಡಿಯಲಾಗಿತ್ತು. ಒಂದು ಇಲಿಗೆ 10 ಸಾವಿರದಂತೆ ಖರ್ಚು ಮಾಡಲಾಗಿದೆ.

BBMP spends Rs 2 lakh to trap just 20 rats in six months

ಇಲಿಗಳ ಕಾಟದಿಂದ ಮುಕ್ತವಾಗಲು ಖಾಸಗಿ ಸಂಸ್ಥೆಯೊಂದನ್ನು ನೇಮಿಸಿ 4,97 ಲಕ್ಷ ರೂಗಳನ್ನು ನೀಡಲಾಗಿತ್ತು. ಆ ಸಂಸ್ಥೆ ಬಿಬಿಎಂಪಿ ಕೇಂದ್ರ ಕಚೇರಿ, ಪುರಭವನ, ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಇಲಿಗಳನ್ನು ಹಿಡಿಯಬೇಕಿತ್ತು, ಆದರೆ ಸಂಸ್ಥೆ ಸರಿಯಾಗಿ ಕೆಲಸ ಮಾಡದಿರುವ ಕಾರಣ ಇಲಿಗಳ ಕಾಟ ಹೆಚ್ಚಾಗಿದೆ.

English summary
At almost Rs 10,000 per rat, the BBMP has probably paid the steepest price to its piper to get rid of pesky rodents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X