ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಸಂಖ್ಯೆ ಕುಸಿತ; ಕೇರ್ ಸೆಂಟರ್‌ ಮುಚ್ಚಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜುಲೈ 19; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 11,751.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಲವು ಕೋವಿಡ್ ಕೇರ್ ಸೆಂಟರ್‌ಗಳನ್ನು ಮುಚ್ಚುತ್ತಿದೆ. ಈಗ ಪ್ರತಿದಿನ ಸುಮಾರು 30 ಜನರು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಾಗುತ್ತಿದ್ದಾರೆ.

 ಕೊರೊನಾ ಲಸಿಕೆ ಲಭ್ಯತೆ ಆಧಾರದ ಮೇಲೆ ಶಿಬಿರ ನಡೆಸಲು ನಿರ್ಧಾರ: ಬಿಬಿಎಂಪಿ ಕೊರೊನಾ ಲಸಿಕೆ ಲಭ್ಯತೆ ಆಧಾರದ ಮೇಲೆ ಶಿಬಿರ ನಡೆಸಲು ನಿರ್ಧಾರ: ಬಿಬಿಎಂಪಿ

ಬಿಬಿಎಂಪಿ ನಗರದ 50 ಕೋವಿಡ್ ಕೇರ್ ಸೆಂಟರ್‌, ಟ್ರಯಾಜ್ ಸೆಂಟರ್‌ಗಳನ್ನು ಮುಚ್ಚಿದೆ. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ನಗರದಲ್ಲಿ 60 ಸಿಸಿಸಿ ಮತ್ತು ಟ್ರಯಾಜ್ ಸೆಂಟರ್ ಆರಂಭಿಸಲಾಗಿತ್ತು. ಇವುಗಳಲ್ಲಿ 30ಕ್ಕೂ ಹೆಚ್ಚು 10 ಹಾಸಿಗೆಗಿಂತ ಹೆಚ್ಚು ಸಾಮರ್ಥ್ಯ ಹೊಂದಿದ್ದವು.

ವಿಶೇಷ ವರದಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಮತ್ತಷ್ಟು ದುಬಾರಿ! ವಿಶೇಷ ವರದಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಮತ್ತಷ್ಟು ದುಬಾರಿ!

BBMP Shut Down Over 50 Covid Care Center

ಪ್ರಸ್ತುತ ಬಿಬಿಎಂಪಿ 8 ಕೋವಿಡ್ ಕೇರ್ ಸೆಂಟರ್‌ಗಳನ್ನು ಇಟ್ಟುಕೊಂಡಿದ್ದು, 300 ಹಾಸಿಗೆಗಳನ್ನು ಹೊಂದಿದೆ. ಮುಂದಿನ ಮೂರು ತಿಂಗಳ ಮುನ್ಸೂಚನೆಗಳನ್ನು ಬಿಬಿಎಂಪಿ ಗಮನದಲ್ಲಿಟ್ಟುಕೊಂಡಿದೆ. ಅಗತ್ಯವಿದ್ದರೆ ತಕ್ಷಣ ಅವುಗಳನ್ನು ಆರಂಭಿಸಲು ಸಹ ತಯಾರಾಗಿರಲಿದೆ.

ಬಿಬಿಎಂಪಿ ಲಸಿಕಾ ವಾಹನಕ್ಕೆ ಚಾಲನೆ; ವಿಶೇಷತೆಗಳು ಬಿಬಿಎಂಪಿ ಲಸಿಕಾ ವಾಹನಕ್ಕೆ ಚಾಲನೆ; ವಿಶೇಷತೆಗಳು

ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ ಖಾಸಗಿ ಆಸ್ಪತ್ರೆಗಳ ಬೆಡ್‌ಗಳಿಗೂ ಬೇಡಿಕೆ ತಗ್ಗಿದೆ. 13 ಸಾವಿರ ಬೆಡ್‌ಗಳ ಬೇಡಿಕೆ ಇತ್ತು, ಪ್ರಸ್ತುತ 5 ಸಾವಿರಕ್ಕೆ ಇಳಿಕೆಯಾಗಿದ್ದು, ಜುಲೈ ಅಂತ್ಯದಲ್ಲಿ ಇದು 1,800ಕ್ಕೆ ಕುಸಿಯುವ ನಿರೀಕ್ಷೆ ಇದೆ.

Recommended Video

Prithvi Shaw ಆಟ ಹೀಗೆ ಇದ್ದರೆ ಸಾಕು ಎಂದ ಮಾಜಿ ಕ್ರಿಕೆಟಿಗ | Oneindia Kannada

ಜುಲೈ 15ರ ಮಾಹಿತಿಯಂತೆ ಸರ್ಕಾರಿ ಕೋಟಾದ 6,446 ಹಾಸಿಗೆಗಳು ನಗರದಲ್ಲಿ ಲಭ್ಯವಿದೆ. ಇವುಗಳಲ್ಲಿ 350 ಮಾತ್ರ ಭರ್ತಿಯಾಗಿದೆ. ಇವುಗಳಲ್ಲಿ 92 ರೋಗಿಗಳು ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ.

English summary
Covid case numbers come down in Bengaluru city. BBMP has shut down over 50 Covid care center and triage centres. Now only 30 people admitted to CCC's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X