ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಲಸಿಕಾ ವಿತರಣೆ ಚುರುಕುಗೊಳಿಸಲು ಬಿಬಿಎಂಪಿಯಿಂದ ಮೆಗಾ ಲಸಿಕಾ ಕೇಂದ್ರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರು ನಗರದಲ್ಲಿ ಕೊರೊನಾ ಲಸಿಕೆ ವಿತರಣೆಯನ್ನು ಚುರುಕುಗೊಳಿಸಲು ಉದ್ದೇಶಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೆಗಾ ಲಸಿಕಾ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಸದ್ಯಕ್ಕೆ ಯಲಹಂಕದ ಡಾ. ಅಂಬೇಡ್ಕರ್ ಭವನದಲ್ಲಿ ಮೆಗಾ ಲಸಿಕಾ ಕೇಂದ್ರವನ್ನು ಆರಂಭಿಸಿದೆ.

ಬೇರೆ ಬೇರೆ ಪಾಳಿಗಳಲ್ಲಿ ಕೆಲಸ ನಿರ್ವಹಿಸುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಮೆಗಾ ಲಸಿಕಾ ಕೇಂದ್ರಗಳನ್ನು ತೆರೆಯುತ್ತಿರುವುದಾಗಿ ಬಿಬಿಎಂಪಿ ಹೇಳಿಕೊಂಡಿದೆ.

ಬೆಂಗಳೂರಿನಲ್ಲಿ ಡೆಲ್ಟಾ ರೂಪಾಂತರಿಯ 2 ಪ್ರಭೇದಗಳು ಪತ್ತೆ, ಆತಂಕಬೆಂಗಳೂರಿನಲ್ಲಿ ಡೆಲ್ಟಾ ರೂಪಾಂತರಿಯ 2 ಪ್ರಭೇದಗಳು ಪತ್ತೆ, ಆತಂಕ

ಬೆಳಿಗ್ಗೆ ಆರರಿಂದ ಆರಂಭವಾಗಿ ರಾತ್ರಿ 9 ಗಂಟೆವರೆಗೂ ಈ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

BBMP Set Up Mega Vaccination Centre To Cover Maximum People

'ಇಂಥ ಲಸಿಕಾ ಕೇಂದ್ರಗಳನ್ನು ದೀರ್ಘಾವಧಿ ಸ್ಥಾಪಿಸುವ ಆಲೋಚನೆ ಮಾಡಿದ್ದೇವೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಇಂಥ ಇನ್ನೂ ಎರಡು ಮೆಗಾ ಲಸಿಕೆ ಕೇಂದ್ರಗಳನ್ನು ಶೀಘ್ರದಲ್ಲಿಯೇ ತೆರೆಯಲಾಗುವುದು ಎಂದು ಹೇಳಿದ್ದಾರೆ.

ಲಸಿಕೆಗಳ ಕೊರತೆ ಹಾಗೂ ಸರಬರಾಜು ಸಮಸ್ಯೆ ಸರಿಯಾಗುವವರೆಗೆ ಕಾಯಬೇಕಿದೆ. ನಗರದಲ್ಲಿ ಹೆಚ್ಚು ಮಂದಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಈ ಕೇಂದ್ರಗಳು ಸಹಾಯ ಮಾಡಲಿವೆ. ನಗರದಲ್ಲಿ ಎಷ್ಟೋ ಮಂದಿ ಕೆಲಸಕ್ಕೆ ಹೋಗುವುದರಿಂದ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂಥವರಿಗಾಗಿ ಈ ಮೆಗಾ ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳಿದರು.

7 ಲಕ್ಷದಲ್ಲಿ 21% ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ; ಬಿಬಿಎಂಪಿ7 ಲಕ್ಷದಲ್ಲಿ 21% ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ; ಬಿಬಿಎಂಪಿ

ಯಲಹಂಕ ಹೊರತಾಗಿ ಎಪಿಡೆಮಿಕ್ ಡಿಸೀಸಸ್ ಆಸ್ಪತ್ರೆ (ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹಿಂಭಾಗ) ಹಾಗೂ ಯಂಗ್‌ಸ್ಟರ್ಸ್‌ ಕಬಡ್ಡಿ ಕ್ಲಬ್ ಗ್ರೌಂಡ್‌ (ಮಲ್ಲೇಶ್ವರ)ನಲ್ಲಿ ಇತರೆ ಎರಡು ಮೆಗಾ ಲಸಿಕಾ ಕೇಂದ್ರಗಳನ್ನು ತೆರೆಯುವುದಾಗಿ ಮಾಹಿತಿ ನೀಡಿದೆ.

BBMP Set Up Mega Vaccination Centre To Cover Maximum People

ಲಸಿಕಾ ಕೇಂದ್ರಗಳ ಸಮಯ ವಿಸ್ತರಣೆಯೊಂದಿಗೆ, ಮೆಗಾ ಲಸಿಕೆ ಕೇಂದ್ರಗಳಲ್ಲಿ ಅಂಗವಿಕಲರಿಗಾಗಿ ವ್ಹೀಲ್‌ಚೇರ್ ಸೌಲಭ್ಯ ಒದಗಿಸಲಾಗಿದೆ. ಅಂಗವಿಕಲರಿಗೆ ಹಾಗೂ ಹಿರಿಯ ಮಹಿಳೆಯರಿಗೆ ವಿಶೇಷ ಕೌಂಟರ್ ವ್ಯವಸ್ಥೆಯನ್ನು ಮಾಡಲಾಗಿದೆ.

ಡ್ರೈವ್ ಇನ್ ಲಸಿಕಾ ಸೇವೆಯನ್ನು ಈ ಕೇಂದ್ರಗಳು ಹೊಂದಿರಲಿವೆ. ಲಸಿಕೆಗಾಗಿ ನೋಂದಣಿ ಮಾಡಿಕೊಂಡು, ತಮ್ಮ ವಾಹನದಲ್ಲೇ ಕುಳಿತು ಲಸಿಕೆಯನ್ನು ಪಡೆದುಕೊಳ್ಳಬಹುದಾದ ಸೌಲಭ್ಯ ಇದಾಗಿದೆ. ಲಸಿಕೆ ಪಡೆದ ನಂತರ ಅಬ್ಸರ್ವೇಷನ್ ಕೋಣೆಯಲ್ಲಿ ಕಾಯಬೇಕಾಗುತ್ತದೆ.

BBMP Set Up Mega Vaccination Centre To Cover Maximum People

80% ಮಂದಿಗೆ ಒಂದು ಡೋಸ್ ಲಸಿಕೆ
ನಗರದಲ್ಲಿ ಅರ್ಹ ಜನಸಂಖ್ಯೆಯ 80% ಮಂದಿ ಒಂದು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ನಗರದಲ್ಲಿ ಸುಮಾರು 30% ಮಂದಿ ಎರಡು ಡೋಸ್‌ಗಳ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಗುಪ್ತಾ ತಿಳಿಸಿದ್ದಾರೆ.

ನಗರದ ಬಹುಪಾಲು ಮಂದಿಗೆ ಲಸಿಕೆ ನೀಡಲಾಗಿದೆ. ಯಾರು ಉಳಿಕೆಯಾಗಿದ್ದಾರೋ ಅವರಿಗೆ ಲಸಿಕೆ ನೀಡಲು ಲಸಿಕಾ ಅಭಿಯಾನವನ್ನು ಚುರುಕುಗೊಳಿಸಿದ್ದೇವೆ. ಕೊಳೆಗೇರಿ ಹಾಗೂ ಲಸಿಕೆ ತಲುಪದ ಇನ್ನಿತರ ಕಡೆಗಳಲ್ಲಿ ಲಸಿಕೆ ನೀಡಿ ಪೂರೈಸಲು ಲಸಿಕಾ ಶಿಬಿರಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

BBMP Set Up Mega Vaccination Centre To Cover Maximum People

100% ಜನರಿಗೆ ಕೊರೊನಾ ಲಸಿಕೆ ಮೊದಲ ಡೋಸ್ ನೀಡಲು ಯೋಜನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 100% ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡುವ ಯೋಜನೆಯನ್ನು ಬಿಬಿಎಂಪಿ ಹಮ್ಮಿಕೊಂಡಿದೆ. ಮುಂದಿನ 45 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಹಾಗೂ 100% ಮೊದಲ ಡೋಸ್ ಲಸಿಕೆ ಗುರಿಯನ್ನು ಸಾಧಿಸಲು ಕ್ರಿಯಾಯೋಜನೆ ಹೊರತಂದಿದೆ. ತನ್ನ ವ್ಯಾಪ್ತಿಯ ಶೇ 100ರಷ್ಟು ಮಂದಿಗೆ ಕೊರೊನಾ ಮೊದಲ ಡೋಸ್ ಲಸಿಕೆ ನೀಡಲು ಬಿಬಿಎಂಪಿ ಗುರಿ ಹೊಂದಿರುವುದಾಗಿ ತಿಳಿಸಿದೆ.

Recommended Video

ನೀವು ಧರ್ಮಸ್ಥಳಕ್ಕೆ ಹೋಗಬೇಕಾ ? ಹಾಗಾದ್ರೆ ಈ ಸ್ಟೋರಿ ನೋಡಿ | Oneindia Kannada

'ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ' ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಮಾಹಿತಿ ನೀಡಿದ್ದಾರೆ.

English summary
BBMP has set up a mega vaccination centre at Dr Ambedkar Bhavan in Yelahanka to help people working in different shifts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X