ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ರಸ್ತೆಗಳ ನಿರ್ವಹಣೆಗಾಗಿ 75 ಕಸ ಸ್ವಚ್ಚ ಯಂತ್ರ ಖರೀದಿಗೆ ಮುಂದಾದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜುಲೈ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಮುಖ್ಯರಸ್ತೆಗಳು ಹಾಗೂ ಒಳರಸ್ತೆಗಳಲ್ಲಿನ ಕಸ ಶುಚಿತ್ವಕ್ಕಾಗಿ 75 ಮೆಕ್ಯಾನಿಕಲ್ ಸ್ವೀಪರ್ (ಕಸ ಗುಡಿಸುವ ಸ್ವಯಂ ಚಾಲಿತ) ಯಂತ್ರಗಳ ಖರೀದಿಸುವ ಚಿಂತನೆಯಲ್ಲಿದೆ.

ಸೋಮವಾರ ಈ ಯಂತ್ರಗಳ ಖರೀದಿ ಪ್ರಸ್ತಾವ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಜತೆ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ಸೆಲ್‌ನ ಹಿರಿಯ ಅಧಿಕಾರಿಗಳು ಅಧಿಕಾರಿಗಳು ಚರ್ಚಿಸಿದ್ದಾರೆ.

ಬೆಂಗಳೂರು: ಹಬ್ಬಗಳು ಸಮೀಪಿಸುತ್ತಿದಂತೆ ತರಕಾರಿಗಳ ಬೆಲೆಗಳಲ್ಲಿ ಹಚ್ಚಳ!ಬೆಂಗಳೂರು: ಹಬ್ಬಗಳು ಸಮೀಪಿಸುತ್ತಿದಂತೆ ತರಕಾರಿಗಳ ಬೆಲೆಗಳಲ್ಲಿ ಹಚ್ಚಳ!

ಮುಖ್ಯ ರಸ್ತೆ ಮತ್ತು ಒಳ ರಸ್ತೆಗಳನ್ನು ಶುಚಿಗೊಳಿಸುವ ಸ್ವಯಂ ಚಾಲಿತ 26 ಯಂತ್ರಗಳು ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಬಿಬಿಎಂಪಿ ಮತ್ತೆ 75 ಹೊಸ ಯಂತ್ರಗಳ ಖರೀದಿಸಲು ಮುಂದಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಆದರೆ ಇಷ್ಟು ಪ್ರಮಾಣದ ಹೊಸ ಯಂತ್ರಗಳ ಖರೀದಿಗೆ ಅಧಿಕ ವೆಚ್ಚ ತಗುಲಲಿದೆ. ಅವುಗಳ ಖರೀದಿ ಹೆಚ್ಚಿನ ವೆಚ್ಚ ತಗುಲುವುದರಿಂದ ಹಾಲಿ ವಾಹನಗಳನ್ನು ನಿರ್ವಹಿಸುತ್ತಿರುವ ಸ್ಥಳೀಯ ನಾಗರಿಕ ಸಂಸ್ಥೆಯು ಒಮ್ಮತಕ್ಕೆ ಬರಬೇಕಿದೆ.

ಉದ್ದೇಶಿತ ಪೈಕಿ ಅರ್ಧದಷ್ಟು ಯಂತ್ರ ಖರೀದಿ

ಉದ್ದೇಶಿತ ಪೈಕಿ ಅರ್ಧದಷ್ಟು ಯಂತ್ರ ಖರೀದಿ

ಸದ್ಯ ಸಭೆಯಲ್ಲಿ ಬಿಬಿಎಂಪಿ ಖರೀದಿ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಉದ್ದೇಶಿತ ಯಂತ್ರಗಳ ಪೈಕಿ ಅರ್ಧದಷ್ಟು ಯಂತ್ರ ಖರೀದಿಸಲು ಮತ್ತು ಬಾಕಿ ಅರ್ಧ ಯಂತ್ರಗಳನ್ನು ಒಪ್ಪಂದದಡಿ ಖರೀದಿಗೆ ಬೆಂಗಳೂರು ನಾಗರಿಕ ಸಂಸ್ಥೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಯಂತ್ರಗಳ ಕಾರ್ಯ ನಿರ್ವಹಣೆ ಮೇಲೆ ನಾಗರಿಕ ಸಂಸ್ಥೆಯೇ ಯಂತ್ರ ಸರಬರಾಜು ಮಾಡಿದವರಿಗೆ ಮಾಸಿಕವಾಗಿ ಇಂತಿಷ್ಟು ಹಣ ಎಂದು ಪಾವತಿಸಲಿದೆ.

90ಕೋಟಿ ಖರ್ಚು ಆಗಲಿದೆ

90ಕೋಟಿ ಖರ್ಚು ಆಗಲಿದೆ

ಬಿಬಿಎಂಪಿ ಉದ್ದೇಶಿತ 75 ಯಂತ್ರಗಳ ಖರೀದಿಗೆ ಅಂದಾಜು 90 ಕೋಟಿ ರೂ. ಹಣ ಖರ್ಚಾಗುತ್ತದೆ. 15ನೇ ಹಣಕಾಸು ಆಯೋಗದಡಿ ಒಟ್ಟು 50 ಕೋಟಿ ಅನುದಾನ ಬಿಡುಗಡೆ ಆಗಿದೆ. ಅಲ್ಲದೇ 15 ಕೋಟಿ ರೂ. ಹಣ ಬೆಂಗಳೂರು ಕಾರ್ಯಕ್ರಮ ಒಂದರ ಅಡಿಯಲ್ಲಿ ಲಭ್ಯವಾಗಲಿದೆ. ಉಳಿದಂತೆ ಹೆಚ್ಚುವರಿ ಬೇಕಾಗುವ 25 ಕೋಟಿ ರೂ.ಹಣ ಪಡೆಯಬೇಕಾಗುತ್ತದೆ.

ಯಂತ್ರ ತಯಾರಿಕೆ ಆಧಾರದಲ್ಲಿ ಪ್ರತಿ ಯಂತ್ರದ ಬೆಲೆ ಸುಮಾರು ಒಂದರಿಂದ ಮೂರು ರೂ. ಇರಬಹುದು ಎಂಬ ಮಾಹಿತಿ ಇದೆ. ವಾಹನಗಳ ನಿರ್ವಹಣೆಗೆ ಸಹ ಅಧಿಕ ಖರ್ಚಿನಿಂದ ಕೂಡಿದೆ. ಈ ಯಂತ್ರಗಳನ್ನ ಖರೀದಿಸಿದರೆ ಅವು ಎಂಟು ಗಂಟೆ ಅವಧಿಯಲ್ಲಿ ನಗರದ 40 ಕಿ.ಮೀ. ರಸ್ತೆ ಸ್ವಚ್ಛಗೊಳ್ಳಲಿವೆ.

26ಯಂತ್ರ ಟ್ರಕ್ ಮೌಂಟೆಡ್ ವಾಹನ

26ಯಂತ್ರ ಟ್ರಕ್ ಮೌಂಟೆಡ್ ವಾಹನ

ಈ ಕುರಿತು ಪ್ರತಿಕ್ರಿಯಸಿರುವ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು, ಈಗಾಗಲೇ ಬಿಬಿಎಂಪಿ ಕೆಲವು ಸಿಬಿಡಿ ಪ್ರದೇಶಗಳಲ್ಲಿ ಹಾಗೂ ಪ್ರಮುಖ ರಸ್ತೆ ಸೇರಿದಂತ ಒಳ ರಸ್ತೆಗಳಲ್ಲೂ ಕಸ ಗುಡಿಸಲು ಸ್ವಯಂ ಚಾಲಿತ ಯಂತ್ರಗಳನ್ನು ಬಳಸಲಾಗುತ್ತಿದೆ. ಸುಮಾರು 35 ಯಂತ್ರಗಳನ್ನು ಲಾರಿಗೆ ಅಳವಡಿಕೆ ಮಾಡಲಾಗಿದೆ. ಈ ಲಾರಿಗಳು ಹೊರವಲಯದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹಾಲಿ 26 ವಾಹನಗಳಲ್ಲಿ 17 ಸ್ವಯಂ ಚಾಲಿತ ಮತ್ತು ಎಂಟು ಟ್ರಕ್ ಮೌಂಟೆಡ್ ವಾಹನಗಳಾಗಿವೆ. ರೈಡ್ ಆನ್ ಸ್ವೀಪರ್ ಎಂಬ ಮತ್ತೊಂದು ಯಂತ್ರವನ್ನು ಸಹ ಕಾರ್ಯ ನಿರ್ವಹಿಸುತ್ತಿದೆ. ಇವೆಲ್ಲ ಯಂತ್ರಗಳು ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಕೆಲಸ ಮಾಡುತ್ತಿವೆ ಎಂದು ವಿವರಿಸಿದರು.

ವೆಬ್‌ಸೈಟ್‌ನಲ್ಲಿ ಕಸದ ಯಂತ್ರದ ಮಾರ್ಗಗಳ ಮಾಹಿತಿ

ವೆಬ್‌ಸೈಟ್‌ನಲ್ಲಿ ಕಸದ ಯಂತ್ರದ ಮಾರ್ಗಗಳ ಮಾಹಿತಿ

ತುಷಾರ್ ಗಿರಿನಾಥ್ ಅವರು ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ಬಂದಾಗ ಕಸ ಸ್ವಚ್ಛ ಗುಡಿಸುವ ಯಂತ್ರಗಳ ನಿತ್ಯ ಮಾರ್ಗಗಳ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ಭರವಸೆ ನೀಡಿದ್ದರು. ಇದನ್ನು ಸಾರ್ವಜನಿಕ ಗೊಳಿಸುವಲ್ಲಿ ನಾಗರಿಕ ಸಂಸ್ಥೆಯು ಕೈ ಜೋಡಿಸಬೇಕಿದೆ.

Recommended Video

Neeraj Chopra ಕಾಮನ್ ವೆಲ್ತ್ ಗೇಮ್ಸ್ ಕನಸು ಭಗ್ನ!! ಯಾಕೆ?ಏನಾಯ್ತು? | *India | OneIndia Kannada

English summary
Bruhat Bengaluru Mahanagara Palike (BBMP) thinking of buying the 75 garbage cleaning machines for maintenance of Bengaluru roads,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X