• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾನ್ಯತಾ ಟೆಕ್ ಪಾರ್ಕ್ ಕಚೇರಿ ಜಪ್ತಿ ಮಾಡಿದ ಬಿಬಿಎಂಪಿ

By Mahesh
|

ಬೆಂಗಳೂರು, ಜೂನ್ 20: ಕೋಟ್ಯಂತರ ರುಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್ ಮುಖ್ಯ ಕಚೇರಿಯನ್ನು ಬಿಬಿಎಂಪಿ ಅಧಿಕಾರಿಗಳು ಸೋಮವಾರ ಬೆಳಗ್ಗೆ ಜಪ್ತಿ ಮಾಡಿದ್ದಾರೆ. 273 ಕೋಟಿ ರು ತೆರಿಗೆ ಬಾಕಿ ಮೊತ್ತ ಪಾವತಿಸುವಂತೆ ನೋಟಿಸ್, ವಾರೆಂಟ್ ಜಾರಿಗೊಳಿಸಲಾಗಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯೆ ಬಂದಿರಲಿಲ್ಲ.

ಹೀಗಾಗಿ ಕೋರ್ಟ್ ಆದೇಶದಂತೆ ಕಾರ್ಯಾಚರಣೆಗಿಳಿದ ಜಂಟಿ ಆಯುಕ್ತ(ಯಲಹಂಕ ವಲಯ) ಸರ್ಫರಾಜ್ ಖಾನ್ ನೇತೃತ್ವದ ತಂಡ, ಹೆಬ್ಬಾಳದ ಬಳಿ ಇರುವ ಮಾನ್ಯತಾ ಟೆಕ್ ಪಾರ್ಕ್ ಕಚೇರಿಯನ್ನು ಬಂದ್ ಮಾಡಿದ್ದಾರೆ. [ಬಿಬಿಎಂಪಿ ಆಸ್ತಿ ತೆರಿಗೆ(ವಿನಾಯಿತಿ ಸಹಿತ) ಪಾವತಿ ಅವಧಿ ವಿಸ್ತರಣೆ]

ಪ್ರತಿ ಚದರಡಿಗೆ 10 ರು ಪಾವತಿಸಬೇಕಿದ್ದ ಟೆಕ್ ಪಾರ್ಕ್ 8 ರು ಮಾತ್ರ ಪಾವತಿಸಿ ತೆರಿಗೆ ವಂಚಿಸಿದ ಆರೋಪ ಹೊತ್ತಿದೆ. ಮೂರು ದಿನದೊಳಗೆ 273.95 ಕೋಟಿ ರು ತೆರಿಗೆ ಬಾಕಿ ಪಾವತಿಸುವಂತೆ ಜೂನ್ 9ರಂದು ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಮಾನ್ಯತಾ ಟೆಕ್ ಪಾರ್ಕ್ ನ ಪ್ರವರ್ತಕರಾದ ರೆಡ್ಡಿ ವೀರಣ್ಣ ಅವರು, ಆಸ್ತಿ ತೆರಿಗೆಯನ್ನು ಕಾನೂನು ಪ್ರಕಾರವಾಗಿ ಪಾವತಿಸಲಾಗುವುದು ಎಂದು ಹೇಳಿದ್ದಾರೆ.[ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?]

ಸರ್ಫರಾಜ್ ಖಾನ್ ಪ್ರತಿಕ್ರಿಯೆ: ಕೋರ್ಟ್ ಆದೇಶದಂತೆ ಕಚೇರಿಯ ಪೀಠೋಪಕರಣ, ಕಂಪ್ಯೂಟರ್, ಕಡತಗಳನ್ನು ಜಪ್ತಿ ಮಾಡಲಾಗಿದೆ. ಕಚೇರಿಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದಿದ್ದಾರೆ [ಮಾನ್ಯತಾ ಟೆಕ್ ಪಾರ್ಕ್ ವಿರುದ್ಧ ಕ್ರಿಮಿನಲ್ ಪ್ರಕರಣ?]

* ಒಟ್ಟು 83.45 ಕೋಟಿ ರು ತೆರಿಗೆ ಮೊತ್ತ ಅದಕ್ಕೆ ಶೇ 24ರಷ್ಟು ಬಡ್ಡಿ ಸೇರಿ 273.95 ಕೋಟಿ ರು ಬಾಕಿ.

* 2008-09 ರಿಂದ 2015-16 ರ ಅವಧಿಗೆ ವಾರ್ಷಿಕ ಶೇ 24ರಂತೆ ಬಡ್ಡಿ ಲೆಕ್ಕಾಚಾರ.

* ಸುಮಾರು 125 ಎಕರೆ ವಿಸ್ತೀರ್ಣದ ಟೆಕ್ ಪಾರ್ಕಿನಲ್ಲಿರುವ ಒಟ್ಟು 17 ಕಟ್ಟಡಗಳಿಂದ ತೆರಿಗೆ ಬಾಕಿ.

* ಸ್ವಯಂ ಘೋಷಿತಾ ಅಸ್ತಿ(SAS) ಅಡಿಯಲ್ಲಿ ಮಾನ್ಯತಾ ಟೆಕ್ ಪಾರ್ಕ್ ನೀಡಿರುವ ದಾಖಲೆ ಪ್ರಕಾರ ಪ್ರತಿ ಚದರಡಿಗೆ 8 ರು ಮಾತ್ರ ಪಾವತಿಸುತ್ತಾ ಬಂದಿದೆ. ಇದು ನಿಯಮ ಉಲ್ಲಂಘನೆಯಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

* ಬಿಬಿಎಂಪಿ ಆಸ್ತಿ ತೆರಿಗೆ ವಲಯ ಬದಲಾಗಿದ್ದು, ಮಾನ್ಯತಾ ಟೆಕ್ ಪಾರ್ಕ್ ಹೆಬ್ಬಾಳ ವಿಭಾಗದ ಯಲಹಂಕ ವಲಯ ಡಿ ಜೋನ್ ನಲ್ಲಿದೆ.[ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ಸಿದ್ಧ]

ಮಾನ್ಯತಾ ಟೆಕ್ ಪಾರ್ಕಿನಲ್ಲಿ ಐಬಿಎಂ, ಆಕ್ಸಾ, ಮೈಕ್ರೋಸಾಫ್ಟ್ ,ಅಟ್ಲಾಸ್, ಅದಿತಿ ಟೆಕ್ನಾಲಜೀಸ್,ಎಎನ್ ಜಡ್, ಕಾಂಗ್ನಿಜೆಂಟ್, ಕೋಲ್ಟ್, ಡಾಟಾ ಕ್ರಾಫ್ಟ್, ಜಸ್ಟ್ ಡಯಲ್, ಎಲ್ ಅಂಡ್ ಟಿ, ನೋಕಿಯಾ, ಫಿಲಿಫ್ಸ್, ಎಸ್ಎಲ್ ಕೆ ಗ್ರೂಪ್, ಟಾರ್ಗೆಟ್, ಟಿಸಿಎಸ್ ಸೇರಿದಂತೆ ಅನೇಕ ಕಂಪನಿಗಳಿದ್ದು , 95,000ಕ್ಕೂ ಅಧಿಕ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBMP Seize Manyata Tech Park Office for not paying property tax. The BBMP has slapped Manyata Tech Park with a demand note of Rs 273 crore; the highest ever issued over the past eight years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more