ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ಹಾಕಿದ್ದ ಮೆಟಲ್ ಶೀಟ್ ತೆಗೆದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜುಲೈ 23: ಕೊರೊನಾ ಪಾಸಿಟಿವ್ ಇದ್ದವರ ಮನೆಯ ಬಾಗಿಲಿಗೆ ಮೆಟಲ್ ಶೀಟ್ ಹಾಕಿ ಸೀಲ್‌ಡೌನ್ ಮಾಡಿದ್ದ ಫೋಟೊ ವೈರಲ್ ಆದ ಬಳಿಕ ಬಿಬಿಎಂಪಿ ಅದನ್ನು ತೆಗೆದು ಹಾಕಿದೆ.

Recommended Video

Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

ಬದಲಾಗಿ ಆ ಎರಡು ಮನೆಗೆ ಹೋಗುವ ಮಾರ್ಗದಲ್ಲಿ ಆ ಶೀಟನ್ನು ಹಾಕಿ ಸೀಲ್ ಮಾಡಿದೆ.

ಚೀನಾ ಮಾದರಿಯಲ್ಲಿ ಬೆಂಗಳೂರಿನಲ್ಲೂ ಮನೆಗೆ ಅಮಾನುಷ ಸೀಲ್‌ಡೌನ್ಚೀನಾ ಮಾದರಿಯಲ್ಲಿ ಬೆಂಗಳೂರಿನಲ್ಲೂ ಮನೆಗೆ ಅಮಾನುಷ ಸೀಲ್‌ಡೌನ್

ಕೊರೊನಾ ಸೋಂಕಿತರ ಮನೆಯ ಬಾಗಿಲಿಗೆ ಮೆಟಲ್ ಶೀಟ್ ಹಾಕಿ ಸೀಲ್‌ಡೌನ್ ಮಾಡಲಾಗಿತ್ತು. ಮನೆಯವರಿಗೆ ಎಂಥಾ ತುರ್ತು ಪರಿಸ್ಥಿತಿ ಎದುರಾದರೂ ಮನೆಯಿಂದ ಹೊರಗೆ ಬರುವಂತಿರಲಿಲ್ಲ.

BBMP Seals Apartment Door, Removes Sheet After Picture Goes Viral

ಹೀಗಾಗಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತಮ್ಮ ತಪ್ಪು ಅರಿತ ಬಿಬಿಎಂಪಿ ಅಧಿಕಾರಿಗಳು ಮೆಟಲ್ ಶೀಟ್ ತೆಗೆದು ಹಾಕಿದ್ದಾರೆ.

ಒಂದು ಮನೆಯಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳಿದ್ದಾರೆ, ಮತ್ತೊಂದು ಮನೆಯಲ್ಲಿ ವೃದ್ಧ ದಂಪತಿ ಇದ್ದಾರೆ.

ಚೀನಾದಲ್ಲಿಯೂ ಕೂಡ ಇದೇ ರೀತಿ ಸೀಲ್‌ಡೌನ್ ಮಾಡಿ ಆಕ್ರೋಶಕ್ಕೆ ಕಾರಣವಾಗಿತ್ತು ಆದರೆ ಅಲ್ಲಿ ಸರ್ವಾಧಿಕಾರ, ಆದರೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಾತಂತ್ರ್ಯ ಮತ್ತು ಹಕ್ಕಿರುತ್ತದೆ.

ಸಾಮಾನ್ಯವಾಗಿ ಕೊರೊನಾ ಸೋಂಕಿತರಿರುವ ಪ್ರದೇಶ, ಅವರಿರುವ ಅಪಾರ್ಟ್‌ಮೆಂಟ್‌ನ ಬ್ಲಾಕ್ ಅಥವಾ ಅಪಾರ್ಟ್‌ಮೆಂಟ್ ಗೇಟ್‌ ಸೀಲ್‌ಡೌನ್ ಮಾಡುತ್ತಾರೆ. ಆದರೆ ಮನೆಯ ಬಾಗಿಲನ್ನೇ ಸೀಲ್‌ಡೌನ್ ಮಾಡಲಾಗಿತ್ತು.

English summary
The Bruhat Bengaluru Mahanagara Palike (BBMP) came under a spot Thursday after it had to remove a temporary sealing at an apartment complex in the city following outrage on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X