ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಉಚಿತ ವೈ-ಫೈ ಸೌಲಭ್ಯ

By Nayana
|
Google Oneindia Kannada News

ಬೆಂಗಳೂರು, ಜು.5: ಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಉಚಿತ ವೈ-ಫೈ ಸೌಲಭ್ಯ ನೀಡಲು ಪಾಲಿಕೆಯ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಬಿಬಿಎಂಪಿ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆತರಲು ಬಿಬಿಎಂಪಿ ಶಿಕ್ಷಣ ಇಲಾಖೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲದ ಕಾರಣ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರಲು ಹಿಂದೇಟು ಹಾಕುತ್ತಿದ್ದರು. ವಿದ್ಯಾರ್ಥಿಘಳನ್ನು ಶಾಲಾ, ಕಾಲೇಜುಗಳೆಡೆಗೆ ಸೆಳೆಯಲು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ.

ಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯ ಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯ

ಜತೆಗೆ ಬಸ್‌ ನಿಲ್ದಾಣಗಳಲ್ಲಿ ಪಾಸ್‌ ಪಡೆಯಲು ಕ್ಯೂನಲ್ಲಿ ನಿಲ್ಲಬೇಕಾಗಿತ್ತು ಅದನ್ನು ತಪ್ಪಿಸಲು ಶಾಲಾ, ಕಾಲೇಜುಗಳ ಮೂಲಕವೇ ಪಾಸ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಿದೆ.ಆದರೆ, ಪಾಲಿಕೆ ಒಡೆತನದ ಶಾಲಾ ಕಾಲೇಜುಗಳಲ್ಲಿ ಪಾಸ್‌ಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಅಂತರ್ಜಾಲ ಸವಲತ್ತು ಲಭ್ಯವಿಲ್ಲ ಹೀಗಾಗಿ, ಮಕ್ಕಳು ಪಾಸ್‌ಗಳನ್ನು ಪಡೆಯಲಾಗದೆ ತೊಂದರೆ ಅನುಭವಿಸುವಂತಾಗಿದೆ.

BBMP schools,colleges to get free Wi-Fi facility

ಖಾಸಗಿ ಸೈಬರ್‌ ಸೆಂಟರ್‌ಗಳಲ್ಲಿ ಪ್ರತಿ ಅರ್ಜಿ ಸಲ್ಲಿಕೆಗೆ 50 ರೂ. ಶುಲ್ಕ ತೆರಬೇಕಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಪಾಲಿಕೆ ಶಿಕ್ಷಣ ಇಲಾಖೆ ಅಧಿಕಾರಿಗಳು 61 ಶಾಲಾ-ಕಾಲೇಜುಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಿದ್ದಾರೆ. ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್‌ಗಳಿವೆ. ಆದರೆ ಅಂತರ್ಜಾಲ ಸಂಪರ್ಕವಿಲ್ಲ. ವೈಫೈ ಸೇವೆ ಕಲ್ಪಿಸಿದರೆ ಸುಲಭವಾಗಿ ಪಾಸ್‌ಗಳಿಗೆ ಸರ್ಜಿ ಸಲ್ಲಿಸಬಹುದಾಗಿದೆ.

ಇನ್ನಿತರೆ ಅನುಕೂಲಗಳು ಇದರಿಂದಾಗಲಿದೆ. ಬಿಬಿಎಂಪಿ ವ್ಯಾಪ್ತಿಯ 15 ಪ್ರಾಥಮಿಕ, 32 ಪ್ರೌಢಶಾಲೆ, 14 ಪದವಿಪೂರ್ವ ಮತ್ತು 4 ಪದವಿ ಕಾಲೇಜುಗಳಿದ್ದು, ಸುಮಾರು 16 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

English summary
The BBMP education department decided provide free wifi facility for BBMP schools and colleges, after this facility students will get bus passess through online only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X