ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಕ್ರೀದ್ ವೇಳೆ ಬೆಂಗಳೂರಿನ ರಸ್ತೆ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ: ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಜುಲೈ 06: ಜುಲೈ 10ರಂದು ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಹತ್ವದ ಆದೇಶ ಹೊರಡಿಸಿದ್ದು, ರಸ್ತೆಗಳಲ್ಲಿ, ಮಸೀದಿಯ ಹೊರಗಡೆ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಮಾಜ್ ಸಲ್ಲಿಸಲು ಅವಕಾಶವಿಲ್ಲ ಎಂದು ಹೇಳಿದೆ.

ಬಕ್ರೀದ್ ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಚಂದ್ರವರ್ಷದ ಕೊನೆಯ ತಿಂಗಳಾಗಿರುವ ದಹು ಅಲ್ ಹಿಜ್ಜಾಹದ ಹತ್ತನೇ ದಿನದಂದು ಬಕ್ರೀದ್ ಆಚರಣೆ ಮಾಡಲಾಗುತ್ತದೆ. ಈ ಸಮಸಯದಲ್ಲಿ ಹಜ್‌ಗೆ ಮುಸ್ಲಿಮರು ಯಾತ್ರೆ ಕೈಗೊಳ್ಳುವರು. ಪವಿತ್ರ ಹಜ್‌ಗೆ ಜೀವಮಾನದಲ್ಲಿ ಒಂದು ಸಲವಾದರೂ ಭೇಟಿ ನೀಡಬೇಕು ಎನ್ನುವ ನಂಬಿಕೆ ಮುಸ್ಲಿಮ್ ಸಮುದಾಯದವರಲ್ಲಿದೆ.

ಬಕ್ರೀದ್ 2022: ದಿನಾಂಕ, ಇತಿಹಾಸ, ಹಬ್ಬದ ಮಹತ್ವ ತಿಳಿಯಿರಿಬಕ್ರೀದ್ 2022: ದಿನಾಂಕ, ಇತಿಹಾಸ, ಹಬ್ಬದ ಮಹತ್ವ ತಿಳಿಯಿರಿ

ಬಕ್ರೀದ್ ಹಬ್ಬವು ತ್ಯಾಗದ ಸಂದೇಶವನ್ನು ನೀಡುತ್ತದೆ. ಅಂದರೆ ದೇವರು ತೋರಿಸಿದ ದಾರಿಯಲ್ಲಿ ನಡೆಯಬೇಕು. ಬಕ್ರೀದ್ ಆಚರಣೆ ದಿನಾಂಕವನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ. ಪವಿತ್ರ ರಂಜಾನ್ ತಿಂಗಳ ಸುಮಾರು 70 ದಿನಗಳ ನಂತರ ಬಕ್ರೀದ್ ಹಬ್ಬ ಆಚರಣೆ ಮಾಡಲಾಗುತ್ತದೆ.

BBMP Said There No Permission To Offer Namaz On Road During Bakrid

ಕಳೆದ ಬಾರಿ ಶೇಕಡ 50 ಜನರಿಗಷ್ಟೇ ಮೀಸಲಾಗಿದ್ದ ಪ್ರಾರ್ಥನೆ

2021ರ ಬಕ್ರೀದ್ ಆಚರಣೆ ವೇಳೆ ಕೊರೊನಾ ಸೋಂಕು ಹರಡುವಿಕೆ ಕಾರಣ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಶೇಕಡಾ 50 ಜನರಿಗಷ್ಟೆ ಅವಕಾಶ ನೀಡಲಾಗಿತ್ತು. ಮಸೀದಿಯ ಸಾಮರ್ಥ್ಯದ ಅರ್ಧದಷ್ಟು ಮಂದಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿದ್ದರು.

ಶಿವಮೊಗ್ಗದಲ್ಲಿ ರೌಡಿ ಪರೇಡ್, ಚಟುವಟಿಕೆ ಬಿಡಲು ಲಾಸ್ಟ್‌ ವಾರ್ನಿಂಗ್ ಕೊಟ್ಟ ಎಸ್‌ಪಿಶಿವಮೊಗ್ಗದಲ್ಲಿ ರೌಡಿ ಪರೇಡ್, ಚಟುವಟಿಕೆ ಬಿಡಲು ಲಾಸ್ಟ್‌ ವಾರ್ನಿಂಗ್ ಕೊಟ್ಟ ಎಸ್‌ಪಿ

ಆದರೆ ಈ ಬಾರಿ ಆ ರೀತಿಯ ಯಾವುದೇ ನಿರ್ಬಂಧ ವಿಧಿಸಿಲ್ಲ, ಆದರೂ ಕೋವಿಡ್-19 ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ. ಆದರೆ ಪ್ರತಿ ಬಾರಿ ಹಬ್ಬದ ಸಂದರ್ಭದಲ್ಲಿ ಮಸೀದಿ, ಪ್ರಾರ್ಥನಾ ಮಂದಿರಗಳಲ್ಲಿ ಜಾಗದ ಕೊರತೆಯಿಂದ ರಸ್ತೆಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ರಸ್ತೆಗಳಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದರಿಂದ ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಬಾರಿ ಅದೇ ರೀತಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಈ ಆದೇಶ ಹೊರಡಿಸಿದೆ. ರಸ್ತೆಗಳಲ್ಲಿ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪ್ರಾರ್ಥನೆ ಮಾಡಿ, ಸಾಮಾನ್ಯ ಜನರಿಗೆ ತೊಂದರೆ ಉಂಟು ಮಾಡದಂತೆ ಸೂಚನೆ ನೀಡಿದೆ.

ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಜುಲೈ 10ರಂದು ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲು ಚಿಂತನೆ ನಡೆಸಲಾಗಿದೆ. ಪ್ರಾರ್ಥನೆಯಿಂದ ವಾಹನ ಸವಾರರಿಗೆ ತೊಂದರೆಯಾಗದಂತೆ ತಡೆಯಲು ಈಗಲೆ ಆದೇಶ ಹೊರಡಿಸಿದೆ.

English summary
On July 10, the Muslims is preparing for the celebration of Bakrid. Following this, the Bruhath Bengaluru Metropolitan Corporation (BBMP) issued an important order saying that offering namaz on roads, outside mosques and at traffic signals is not allowed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X