ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐದು ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ: ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದೆ ಇದ್ದರೆ ದಂಡ ವಿಧಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ ಎಂದು ಬಿಬಿಎಂಪಿ ಹೇಳಿದೆ.

ಮಾಸ್ಕ್ ಧರಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿದ್ದ ತಾಂತ್ರಿಕ ಸಲಹಾ ಸಮಿತಿಯಿಂದ ಬಿಬಿಎಂಪಿ ಕೆಲವು ಅನುಮಾನಗಳಿಗೆ ಸ್ಪಷ್ಟೀಕರಣ ಕೇಳಿತ್ತು. ಸಮಿತಿ ನೀಡಿರುವ ಸಲಹೆಗಳಂತೆ ಮಾಸ್ಕ್ ಧರಿಸುವ ಸಂಬಂಧ ಬಿಬಿಎಂಪಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ಕೊವಿಡ್ ನಿಯಮ ಪಾಲನೆ: ಬೆಂಗಳೂರಲ್ಲಿ ಮಾರ್ಷಲ್‌ಗಳಿಗೆ ಪೊಲೀಸ್ ಅಧಿಕಾರ ಕೊವಿಡ್ ನಿಯಮ ಪಾಲನೆ: ಬೆಂಗಳೂರಲ್ಲಿ ಮಾರ್ಷಲ್‌ಗಳಿಗೆ ಪೊಲೀಸ್ ಅಧಿಕಾರ

ಮಾಸ್ಕ್‌ಗಳನ್ನು ಸಮರ್ಪಕವಾಗಿ ಧರಿಸುವ ತಿಳಿವಳಿಕೆಯ ಅಗತ್ಯ ಇದೆ. ಮಕ್ಕಳ ಬೆಳವಣಿಗೆ ಮತ್ತು ಈ ನಿಯಮ ಪಾಲನೆಗೆ ಇರುವ ಸವಾಲುಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಆದರೆ ಐದು ವರ್ಷ ಮೇಲಿನ ಮಕ್ಕಳಿಗೆ ಈ ವಿನಾಯಿತಿ ಅನ್ವಯವಾಗುವುದಿಲ್ಲ. ಮುಚ್ಚಿದ ಸ್ಥಳ ಅಥವಾ ಸಾಕಷ್ಟು ಗಾಳಿಯಾಡದ ಪ್ರದೇಶಗಳಲ್ಲಿ, ಜನಜಮಗುಳಿ ಇರುವ ಜಾಗಗಳಲ್ಲಿ ಹಾಗೂ ಜನರು ಸಮೀಪದಲ್ಲಿ ಕುಳಿತು ಮಾತುಕತೆ ನಡೆಸುವ ವೇಳೆ ಮಾಸ್ಕ್ ಧರಿಸುವುದು ಅತ್ಯಗತ್ಯ ಎಂದು ಅದು ಸೂಚಿಸಿದೆ. ಮುಂದೆ ಓದಿ.

ಕಾರ್‌ನಲ್ಲಿ ಒಬ್ಬರೇ ಇದ್ದಾಗಲೂ ಮಾಸ್ಕ್

ಕಾರ್‌ನಲ್ಲಿ ಒಬ್ಬರೇ ಇದ್ದಾಗಲೂ ಮಾಸ್ಕ್

ವಾಹನದಲ್ಲಿ ಗಾಜು ಮುಚ್ಚಿಕೊಂಡು ಪ್ರಯಾಣಿಸುವಾಗ, ಚಾಲಕರು ಮಾತ್ರವೇ ಇದ್ದಾಗ ಕೂಡ ಮಾಸ್ಕ್ ಧರಿಸುವುದು ಕಡ್ಡಾಯ. ವಾಹನವನ್ನು ಸಿಗ್ನಲ್ ಬಳಿ ನಿಲ್ಲಿಸಿ ಗಾಜುಗಳನ್ನು ಇಳಿಸಿದರೆ ಅಥವಾ ವಾಹನ ನಿಲ್ಲಿಸಿದಾಗ ಇತರರ ಜತೆ ಮಾತನಾಡುತ್ತಿದ್ದರೆ ಆಗಲೂ ಮಾಸ್ಕ್ ಧರಿಸಿರಬೇಕು.

ದ್ವಿಚಕ್ರ ವಾಹನದಲ್ಲಿ ಒಬ್ಬರು ಅಥವಾ ಇಬ್ಬರು ಸಂಚರಿಸುವಾಗಲೂ ಮಾಸ್ಕ್ ಧರಿಸಬೇಕು. ದ್ವಿಚಕ್ರ ವಾಹನ ನಿಲ್ಲಿಸಿದ್ದಾಗ ಕೂಡ ಸವಾರ ಮಾಸ್ಕ್ ತೊಟ್ಟಿರಬೇಕು.

ಮಾಸ್ಕ್ ಹಾಕ್ಕೊಳ್ಳಿ: ಬಿಬಿಎಂಪಿ ಮಾರ್ಷಲ್ ಮೇಲೆ ಹಲ್ಲೆ, ಮೂವರ ಬಂಧನಮಾಸ್ಕ್ ಹಾಕ್ಕೊಳ್ಳಿ: ಬಿಬಿಎಂಪಿ ಮಾರ್ಷಲ್ ಮೇಲೆ ಹಲ್ಲೆ, ಮೂವರ ಬಂಧನ

ಮನೆಯಲ್ಲಿಯೂ ಮಾಸ್ಕ್, ಯಾರಿಗೆ?

ಮನೆಯಲ್ಲಿಯೂ ಮಾಸ್ಕ್, ಯಾರಿಗೆ?

ಆರೋಗ್ಯವಂತರು ಇರುವ ಮನೆಯಲ್ಲಿ ಮಾಸ್ಕ್ ಅಗತ್ಯವಿಲ್ಲ. ಮನೆಯಲ್ಲಿಯೇ ಪ್ರತ್ಯೇಕವಾಸ ಇರುವವರು, ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಮೂರು ಪದರಗಳ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮನೆಯಲ್ಲಿ ಸೋಂಕಿತರು ಇದ್ದಾಗ ಅವರ ಆರೈಕೆ ಮಾಡುವವರು ಹಾಗೂ ಕುಟುಂಬದ ಸದಸ್ಯರು ಸಾಮಾನ್ಯ ಮಾಸ್ಕ್ ಧರಿಸಬೇಕು.

ಕ್ವಾರೆಂಟೈನ್ ಆಗಿರುವವರು ಇರುವ ಮನೆಯಲ್ಲಿ, ಕಚೇರಿ ಹಾಗೂ ಕೆಲಸದ ಸ್ಥಳಗಳಲ್ಲಿ, ಪೂಜಾ ಸ್ಥಳಗಳಲ್ಲಿ, ಸಾಮಾಜಿಕ ಸಮಾರಂಭಗಳಲ್ಲಿ (ಮದುವೆ, ಅಂತ್ಯಸಂಸ್ಕಾರ ಮುಂತಾದ ಕಾರ್ಯಕ್ರಮ) ಮಾಸ್ಕ್ ಧರಿಸುವುದು ಅಗತ್ಯ.

ಸಾರ್ವಜನಿಕ, ಖಾಸಗಿ ವಾಹನಗಳಲ್ಲಿ

ಸಾರ್ವಜನಿಕ, ಖಾಸಗಿ ವಾಹನಗಳಲ್ಲಿ

ದೀರ್ಘಾವಧಿ ಆರೈಕೆ ನೀಡುವ ಸ್ಥಳಗಳಾದ ವೃದ್ಧಾಶ್ರಮ, ಅನಾಥಾಶ್ರಮಗಳಲ್ಲಿ ವೈದ್ಯರ ಸಲಹೆ ಆಧರಿಸಿ ಮಾಸ್ಕ್ ಧರಿಸುವುದು ಅಗತ್ಯ. ಜೈಲುಗಳಲ್ಲಿ ಕೂಡ ಮಾಸ್ಕ್ ಧರಿಸುವುದು ಅಗತ್ಯ. ಬಸ್, ಮೆಟ್ರೋ, ವಿಮಾನ ಮುಂತಾದ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಕಡ್ಡಾಯವಾಗಿದೆ. ಖಾಸಗಿ ವಾಹನದಲ್ಲಿಯೂ ಮಾಸ್ಕ್ ತೊಡಬೇಕು.

ಜನಜಂಗುಳಿ ಇರುವ ಸಾರ್ವಜನಿಕ ಪ್ರದೇಶಗಳು, ರೆಸ್ಟೋರೆಂಟ್, ಬಾರ್, ಆಹಾರ ಮಳಿಗೆ ಮುಂತಾದ ಕಡೆಗಳಲ್ಲಿ ಆಹಾರ ಸೇವನೆ, ಪಾನೀಯ ಸೇವನೆ ವೇಳೆ ಮಾಸ್ಕ್ ತೆಗೆಯಬಹುದು. ಇಲ್ಲಿ ಸೇವೆ ಒದಗಿಸುವವರು ಮಾಸ್ಕ್ ಧರಿಸಬೇಕು.

ಮಾರುಕಟ್ಟೆ, ಸಿನಿಮಾ ಮಂದಿರ...

ಮಾರುಕಟ್ಟೆ, ಸಿನಿಮಾ ಮಂದಿರ...

ಸಲೂನ್, ಸ್ಪಾ, ಕ್ಷೌರಿಕರ ಮಳಿಗೆಗಳಲ್ಲಿ ಮಾಸ್ಕ್ ಕಡ್ಡಾಯ. ಕ್ರೀಡಾಂಗಣ, ಶಾಲೆ, ಕಾಲೇಜು, ಮನರಂಜನಾ ಪಾರ್ಕ್, ಸಿನಿಮಾ ಮಂದಿರ, ಮಾಲ್, ಮಾರುಕಟ್ಟೆ, ಪರಿಹಾರ ಕೇಂದ್ರ, ಸಾರ್ವಜನಿಕ ಶೌಚಾಲಯಗಳಲ್ಲಿ ಮಾಸ್ಕ್ ಕಡ್ಡಾಯ. ಈಜುಕೊಳಕ್ಕೆ ತೆರಳುವಾಗ ಸಹ ಮಾಸ್ಕ್ ಧರಿಸಬೇಕು. ಈಜುವಾಗ ಮಾಸ್ಕ್ ಅಗತ್ಯವಿರುವುದಿಲ್ಲ.

ಯಾವುದಕ್ಕೆಲ್ಲ ವಿನಾಯಿತಿ?

ಯಾವುದಕ್ಕೆಲ್ಲ ವಿನಾಯಿತಿ?

ಆಹಾರ ಸೇವನೆ, ಕುಡಿಯುವಾಗ, ಬಾಯಿಯಿಂದ ಸಂಗೀತ ವಾದ್ಯಗಳನ್ನು ನುಡಿಸುವಾಗ, ಮುಖ ಒದ್ದೆಯಾಗುವಂತಹ ಚಟುವಟಿಕೆಗಳ ವೇಳೆ, ಕಾನೂನು ಪಾಲನೆಗಾಗಿ ಗುರುತು ಪತ್ತೆ ತಪಾಸಣೆ ಮಾಡಬೇಕಾದ, ಶ್ರವಣ ಸಾಧನ ಧರಿಸಿದ ವ್ಯಕ್ತಿ ಜತೆ ಸಂವಹನ ನಡೆಸುವ ವೇಳೆ ಮಾಸ್ಕ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಹಲ್ಲಿನ ಪರೀಕ್ಷೆ ಅಥವಾ ಇನ್ನಿತರೆ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಅಗತ್ಯವಾದಾಗ ಮಾಸ್ಕ್ ವಿನಾಯಿತಿ ಪಡೆಯಬಹುದು.

Recommended Video

ನಿಮ್ ಆಟ ನಡಿಯಲ್ಲಾ!! | NO MORE STUNTS!!! | Oneindia Kannada

English summary
BBMP issues a revised guidelines on mask said, children below 5 years need not to wear face mask.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X