ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಲಸಿಕೆ ವಿತರಣೆ ಕುರಿತು ಸಮೀಕ್ಷೆ ನಡೆಸಲಿರುವ ಬಿಬಿಎಂಪಿ

|
Google Oneindia Kannada News

ಬೆಂಗಳೂರು,ಫೆಬ್ರವರಿ 26: ಬಿಬಿಎಂಪಿಯು ಸ್ವಯಂಸೇವಕರ ನೆರವು ಪಡೆದು ಕೊರೊನಾ ಲಸಿಕೆ ವಿತರಣೆ ಕುರಿತು ಸಮೀಕ್ಷೆ ನಡೆಸಲಿದೆ.

ಕೋವಿಡ್-19 ಲಸಿಕೆ ವಿತರಣಾ ಕಾರ್ಯಕ್ರಮದ ಮೊದಲ ಹಂತ ಬಹುತೇಕ ನಿರ್ಣಾಯಕ ಹಂತ ತಲುಪಿದ್ದು, ಇದೀಗ ಲಸಿಕೆ ವಿತರಣಾ ಕಾರ್ಯಕ್ರಮದ ಮುಂದಿನ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ವಯಸ್ಸಿನ ಅನಾರೋಗ್ಯ ಪೀಡಿತರಿಗೆ ಲಸಿಕೆ ನೀಡಿಕೆ ಆರಂಭಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.

 ಹುಷಾರ್; ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಬಿಬಿಎಂಪಿ ಆಯುಕ್ತ ಹುಷಾರ್; ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಬಿಬಿಎಂಪಿ ಆಯುಕ್ತ

ಹಾಗೆಯೇ ವೈದ್ಯಕೀಯ ಅಧಿಕಾರಿ ಆರೋಗ್ಯ ಮತ್ತು ವಾರ್ಡ್ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದ್ದರೆ ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ನಾವು 30 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಬೇಕಾಗಿದೆ ಮತ್ತು ಪ್ರತಿ ವಾರ್ಡ್‌ಗೆ 15 ರಿಂದ 20 ತಂಡಗಳು ಬೇಕಾಗುತ್ತವೆ ಎಂದು ಅವರು ಮಾಹಿತಿ ನೀಡಿದರು.

ಮನೆ ಬಾಗಿಲಿಗೆ ಪೇಪರ್‌ಲೆಸ್ ಸಮೀಕ್ಷೆಯಲ್ಲಿ ಸಂಗ್ರಹಿಸಿದ ವಿವರಗಳನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದ ನಮ್ಮಸಮುದಾಯ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ಹಿರಿಯ ನಾಗರಿಕರು, ಕೊಮೊರ್ಬಿಡ್ ವ್ಯಕ್ತಿಗಳು, ಗರ್ಭಿಣಿ ಮತ್ತು ಅನಾರೋಗ್ಯ ಪೀಡಿತ ಜನರ ಸಂಖ್ಯೆಯನ್ನು ದಾಖಲಿಸಲು ಈ ಹಿಂದೆ ನಡೆಸಿದ ಆರೋಗ್ಯ ವೀಕ್ಷಣೆ ಸಮೀಕ್ಷೆಯನ್ನು ಸಾಮಾನ್ಯ ಜನರಿಗೆ ಲಸಿಕೆ ನೀಡಲು ಬಳಸಲಾಗುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊಮೊರ್ಬಿಡಿಟಿ ಹೊಂದಿರುವವರಿಗೆ ಲಸಿಕೆ ನೀಡಲು ನೋಂದಣಿ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.

ಆಶಾ ಕಾರ್ಯಕರ್ತರ ಜತೆ ಸ್ವಯಂ ಸೇವಕರು

ಆಶಾ ಕಾರ್ಯಕರ್ತರ ಜತೆ ಸ್ವಯಂ ಸೇವಕರು

ಈ ಯೋಜನೆಗೆ ನೆರವಾಗಲು ಬಿಬಿಎಂಪಿ ಬೆಂಗಳೂರಿನಲ್ಲಿ ನಡೆಸಲಿಚ್ಛಿಸಿರುವ ಸರ್ವೇ ಕಾರ್ಯಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಲಸಿಕೆ ವಿತರಣಾ ಕಾರ್ಯಕ್ರಮದ 3 ನೇ ಹಂತಕ್ಕಾಗಿ ಸಮೀಕ್ಷೆ ಮಾಡಲು ಆಶಾ ಕಾರ್ಯಕರ್ತರ ಜೊತೆಗೇ ಸ್ವಯಂಸೇವಕರನ್ನೂ ಕೂಡ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.

ಆಶಾ ಕಾರ್ಯಕರ್ತೆಯರಿಗೆ ಟ್ಯಾಬ್‌ಗಳನ್ನು ನೀಡಲಾಗಿದೆ

ಆಶಾ ಕಾರ್ಯಕರ್ತೆಯರಿಗೆ ಟ್ಯಾಬ್‌ಗಳನ್ನು ನೀಡಲಾಗಿದೆ

ಈಗಾಗಲೇ ಈ ಸಂಬಂಧ ಆಶಾಕಾರ್ಯಕರ್ತೆಯರಿಗೆ ಟ್ಯಾಬ್ ಗಳನ್ನು ನೀಡಲಾಗಿದ್ದು, ಗೂಗಲ್ ಡಾಕ್ ಫಾರ್ಮ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ನಾಗರಿಕರು ತಮ್ಮ ಇ-ಮೇಲ್ ವಿಳಾಸ, ಪೂರ್ಣ ಹೆಸರು, ಫೋನ್ ಸಂಖ್ಯೆ ಮತ್ತು ವಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಿ ಬಿಬಿಎಂಪಿ ಆರೋಗ್ಯ ಇಲಾಖೆಯೊಂದಿಗೆ ಸಮೀಕ್ಷೆಗೆ ಸೈನ್ ಅಪ್ ಆಗಬೇಕು. ಈ ಸರ್ವೇ ಕಾರ್ಯಕ್ಕಾಗಿ ಆಶಾ ಕಾರ್ಯಕರ್ತರಿಗೆ ಪ್ರತಿ ಮನೆಗೆ ರೂ.10 ಗೌರವ ಧನ ನೀಡಲಾಗುವುದು ಎಂದು ಬಿಬಿಎಂ ಹೇಳಿದೆ.

ಆರೋಗ್ಯ ಮಿಷನ್ ಸಮೀಕ್ಷೆ

ಆರೋಗ್ಯ ಮಿಷನ್ ಸಮೀಕ್ಷೆ

ಈ ಕುರಿತಂತೆ ಮಾತನಾಡಿದ ಬಿಬಿಎಂಪಿಯ ಆರೋಗ್ಯ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಅವರು, 'ಕೋವಿಡ್ ಲಸಿಕೆ ಫಲಾನುಭವಿಗಳ ಸಮೀಕ್ಷೆಗಾಗಿ ಮಾತ್ರವಲ್ಲದೆ ರಾಷ್ಟ್ರೀಯ ನಗರ ಆರೋಗ್ಯ ಮಿಷನ್‌ನಲ್ಲಿ ಬರುವ ನಿಯಮಿತ ಆರೋಗ್ಯ ಸಮೀಕ್ಷೆಗಳಿಗೂ ನಾಗರಿಕರನ್ನು ಒಳಪಡಿಸಲಾಗುತ್ತದೆ.

ಸಮೀಕ್ಷೆ ಪೂರ್ಣಗೊಳಿಸಲು ಗುರಿ ಇಲ್ಲ

ಸಮೀಕ್ಷೆ ಪೂರ್ಣಗೊಳಿಸಲು ಗುರಿ ಇಲ್ಲ

ಸಮೀಕ್ಷೆಯನ್ನು ಪೂರ್ಣಗೊಳಿಸಲು ಯಾವುದೇ ನಿಗದಿತ ಗುರಿ ಇಲ್ಲ.. ಆದರೆ ಇದು 15 ರಿಂದ 20 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಎನ್‌ಜಿಒಗಳು ಬಿಬಿಎಂಪಿಯೊಂದಿಗೆ ಸ್ವಯಂಸೇವಕ ಪಾಲುದಾರರಾಗಿರಬಹುದು. ವಿಶೇಷವಾಗಿ ಸರ್ಕಾರಿ ಆರೋಗ್ಯ ಸಿಬ್ಬಂದಿಗಳ ಕೊರತೆಯಿರುವ ಪ್ರದೇಶಗಳಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

Recommended Video

ರಾಜಧಾನಿಯಲ್ಲಿ ಡೆಡ್ಲಿ ವೈರಸ್ ಅಟ್ಟಹಾಸ-BBMP ವ್ಯಾಪ್ತಿಯ 9 ಕಂಟೇನ್ಮೆಂಟ್ ಝೋನ್ ಘೋಷಣೆ | Oneindia Kannada

English summary
The BBMP is roping in citizen volunteers for its Covid vaccination survey for those above 60 years and those aged above 45 years with comorbidities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X