ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ 4 ವಿದ್ಯುತ್ ಚಿತಾಗಾರ ಮೀಸಲು

|
Google Oneindia Kannada News

ಬೆಂಗಳೂರು, ಜುಲೈ 25: ಕೊರೊನಾದಿಂದ ಮೃತಪಟ್ಟ ಶವಗಳ ಅಂತ್ಯಕ್ರಿಯೆ ಬಹುದೊಡ್ಡ ಸವಾಲಾಗಿದೆ. ಮೃತದೇಹದಿಂದ ಸೋಂಕು ಹರಡಬಹುದು ಎಂಬ ಆತಂಕ ಕಾಡುತ್ತಿದೆ. ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿ ಅಂತ್ಯಕ್ರಿಯೆಯನ್ನು ಸ್ಮಶಾನಗಳಲ್ಲಿ ಮಾಡಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Recommended Video

48 ನಿಮಿಷದಲ್ಲಿ 5 Km ಆಟೋ ಎಳೆದ ಭೂಪ | Oneindia Kannada

ಹೀಗಾಗಿ, ಕೊವಿಡ್ ಶವಗಳನ್ನು ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ಪ್ರತ್ಯೇಕ ಸ್ಥಳವನ್ನು ನಿಗದಿ ಪಡಿಸಿದೆ. ಅಂತ್ಯಕ್ರಿಯೆ ವೇಳೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಾಗಿದೆ.

ಇದೀಗ, ಬೆಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಕ್ರಿಯೆಗಾಗಿ ನಾಲ್ಕು ವಿದ್ಯುತ್ ಚಿತಾಗಾರವನ್ನು ಬಿಬಿಎಂಪಿ ನಿಗದಿ ಮಾಡಿದೆ. ಆರ್ ಆರ್ ನಗರ ವಲಯದಲ್ಲಿ ಕೆಂಗೇರಿ, ಯಲಹಂಕ ವಲಯದಲ್ಲಿ ಮೇಡಿ ಅಗ್ರಹಾರ, ಬೊಮ್ಮನಹಳ್ಳಿ ವಲಯದಲ್ಲಿ ಕೂಡ್ಲು ಹಾಗೂ ಮಹಾದೇವಪುರ ವಲಯದಲ್ಲಿ ಪಣತ್ತೂರು ಚಿತಾಗಾರದಲ್ಲಿ ಕೊವಿಡ್ ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಕೊವಿಡ್ ಸಾವಿನ ಸಂಖ್ಯೆಯಲ್ಲಿ ಫ್ರಾನ್ಸ್ ಹಿಂದಿಕ್ಕಿದ ಭಾರತಕೊವಿಡ್ ಸಾವಿನ ಸಂಖ್ಯೆಯಲ್ಲಿ ಫ್ರಾನ್ಸ್ ಹಿಂದಿಕ್ಕಿದ ಭಾರತ

BBMP reserved 4 electric Crematorium for Covid victims

ಈ ವೇಳೆ ಸಿಬ್ಬಂದಿಗಳು ಬಿಬಿಎಂಪಿ ಸೂಚಿಸಿರುವ ಮಾರ್ಗಸೂಚಿಯನ್ನು ಪಾಲಿಸಬೇಕಾಗಿದೆ.
- ಸಿಬ್ಬಂದಿಗಳು ಕೈಗಳ ಶುಚಿತ್ವವನ್ನು ಸ್ಯಾನಿಟೈಸರ್ ಬಳಸಿ ಕಾಪಾಡಿಕೊಳ್ಳುವುದು
- ಸಿಬ್ಬಂದಿಗಳು ಕಡ್ಡಾಯವಾಗಿ ಪಿಪಿಇ ಕಿಟ್‌ಗಳನ್ನು ಬಳಸುವುದು
- ಶವಗಳನ್ನು ಸಾಗಿಸುವ ಸಮಯದಲ್ಲಿ ಉಪಯೋಗಿಸಲ್ಪಡುವ ಶಾರ್ಪ್‌ಗಳ ಸುರಕ್ಷಿತ ನಿರ್ವಹಣೆ
- ಮೃತ ದೇಹದ ನಿರ್ವಹಣೆ ಸಮಯದಲ್ಲಿ ಉಪಯೋಗಿಸುವ ಚೀಲ ಮತ್ತು ಸಲಕರಣೆಗಳನ್ನು ಸೋಂಕು ನಿವಾಣಾ ದ್ರವದಿಂದ ಸಿಂಪಡಣೆ ಮಾಡುವುದು
- ಶವವನ್ನು ಸಾಗಿಸುವ ವಾಹನವನ್ನು (ಚಿರಶಾಂತಿ ವಾಹನ) ಶವ ಸಂಸ್ಕಾರದ ನಂತರ ತಕ್ಷಣವೇ ಸೋಮಕು ನಿವಾರಣ ದ್ರವದಿಂದ ಸಿಂಪಡಣೆ ಮಾಡಿ ಶುಚಿಗೊಳಿಸುವುದು ಎಂದು ಬಿಬಿಎಂಪಿ ತಿಳಿಸಿದೆ.

English summary
BBMP reserved 4 electric Crematorium for Covid victims. staff have been asked to follow prescribed guidelines while handling such dead bodies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X