ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಗೆ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಬಿಡುಗಡೆ

|
Google Oneindia Kannada News

ಬೆಂಗಳೂರು, ಆಗಸ್ಟ್ 27: ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವ ಸರ್ಕಾರಿ, ಖಾಸಗಿ ಸಂಸ್ಥೆಗಳ ಪಟ್ಟಿಯನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ. ಇಂದು ಬಿಡುಗಡೆ ಮಾಡಿರುವ ಪಟ್ಟಿಯಂತೆ 1717 ಕೋಟಿ ಬಾಕಿ ತೆರಿಗೆ ಬಿಬಿಎಂಪಿಗೆ ಸಂದಾಯವಾಗಬೇಕಿದೆ.

ಬಿಬಿಎಂಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸರ್ಕಾರಿ ಸಂಸ್ಥೆಗಳು, ಖ್ಯಾತ ಖಾಸಗಿ ಸಂಸ್ಥೆಗಳೂ ಸೇರಿವೆ. ಪಟ್ಟಿಯಲ್ಲಿರುವಂತೆ ಐಟಿ ದಿಗ್ಗಜ ವಿಪ್ರೊ ಸಂಸ್ಥೆಯು ಬಿಬಿಎಂಪಿಗೆ 7 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ.

ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ ಬಂದಿದೆ : ಬಿಬಿಎಂಪಿ ಆಯುಕ್ತರು ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ ಬಂದಿದೆ : ಬಿಬಿಎಂಪಿ ಆಯುಕ್ತರು

ಕೆಎಸ್‌ಆರ್‌ಟಿಸಿ 1.60 ಕೋಟಿ, ಬಿಎಂಟಿಸಿ 4.86 ಕೋಟಿ, ಕೆ.ಎಸ್‌.ಆರ್‌.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ 1.26 ಕೋಟಿ, ರಾಜ್ಯ ಒಕ್ಕಲಿಗರ ಸಂಘ 1.21 ಲಕ್ಷ, ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ 86 ಲಕ್ಷ ಇನ್ನೂ ಕೆಲವು ಸರ್ಕಾರಿ ಸಂಸ್ಥೆಗಳು ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿವೆ.

BBMP release list of highest tax defaulters

ಟೆಕ್ ದೈತ್ಯ ವಿಪ್ರೋ ಸಂಸ್ಥೆ 7 ಕೋಟಿ, ಬಾಗ್‌ಮನ್ ಟೆಕ್ ಪಾರ್ಕ್ 4 ಕೋಟಿ, ಶೆರಿಫ್ ಸೆಂಟ್ರಾ 1.07 ಕೋಟಿ, ಒರಾಕಲ್ ಸಂಸ್ಥೇ 12 ಕೋಟಿ, ಆರ್‌ಎಂಜೆಡ್ ಸಂಸ್ಥೆ 5 ಕೋಟಿ ಬಾಕಿ ಉಳಿಸಿಕೊಂಡಿದೆ.

ಪ್ಲಾಸ್ಟಿಕ್ ರಸ್ತೆ ನಿರ್ಮಾಣ; 5 ಟನ್ ಪ್ಲಾಸ್ಟಿಕ್ ಕೊಟ್ಟ ಬಿಬಿಎಂಪಿ ಪ್ಲಾಸ್ಟಿಕ್ ರಸ್ತೆ ನಿರ್ಮಾಣ; 5 ಟನ್ ಪ್ಲಾಸ್ಟಿಕ್ ಕೊಟ್ಟ ಬಿಬಿಎಂಪಿ

ಪಟ್ಟಿ ಇನ್ನೂ ಉದ್ದವಾಗಿದ್ದು ಒಟ್ಟು 1717 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ. ತೆರಿಗೆ ಬಾಕಿ ವಸೂಲಿಗೆ ಸೂಕ್ತ ಕ್ರಮಕೈಗೊಳ್ಳುವುದಾಗಿಯೂ ಬಿಬಿಎಂಪಿ ಹೇಳಿದೆ.

English summary
BBMP today released the list of companies and organizations which were long tax deafalters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X