ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಪರೀಕ್ಷೆ; ಹೊಸ ದಾಖಲೆ ಬರೆದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲು ಶ್ರಮಿಸುತ್ತಿದೆ. ಕರ್ನಾಟಕದಲ್ಲಿಯೇ ಅತಿ ಹೆಚ್ಚು ಸೋಂಕಿತರು ನಗರದಲ್ಲಿದ್ದಾರೆ.

ಬುಧವಾರ ಸಹ ನಗರದಲ್ಲಿ 5000 ಹೊಸ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,62,241ಕ್ಕೆ ಏರಿಕೆಯಾಗಿದೆ. ಕೋವಿಡ್ ಪರೀಕ್ಷೆಯಲ್ಲಿ ಬಿಬಿಎಂಪಿ ಹೊಸ ದಾಖಲೆ ಮಾಡಿದೆ.

ತಲೆನೋವು ಇದೆಯೇ? ಅದು ಕೋವಿಡ್ ಲಕ್ಷಣವಾಗಿರಬಹುದು: ಹೊಸ ಅಧ್ಯಯನ ವರದಿತಲೆನೋವು ಇದೆಯೇ? ಅದು ಕೋವಿಡ್ ಲಕ್ಷಣವಾಗಿರಬಹುದು: ಹೊಸ ಅಧ್ಯಯನ ವರದಿ

ಬೆಂಗಳೂರು ನಗರದಲ್ಲಿ ಬುಧವಾರ 35,183 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನ ಇಷ್ಟು ಪರೀಕ್ಷೆಗಳನ್ನು ನಡೆಸಿದ್ದು, ಇದೇ ಮೊದಲು. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 58,624.

ಮೊದಲ ಬಾರಿ ಬೆಂಗಳೂರಲ್ಲಿ 5012 ಹೊಸ ಕೋವಿಡ್ ಪ್ರಕರಣ ದಾಖಲು ಮೊದಲ ಬಾರಿ ಬೆಂಗಳೂರಲ್ಲಿ 5012 ಹೊಸ ಕೋವಿಡ್ ಪ್ರಕರಣ ದಾಖಲು

COVID Tests

ಅಕ್ಟೋಬರ್ 4ರಂದು 27,757, ಅಕ್ಟೋಬರ್ 5ರಂದು 34,336 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿತ್ತು. ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆಯಂತೆ ಪರೀಕ್ಷೆಗಳನ್ನು ಹೆಚ್ಚಳ ಮಾಡಲಾಗಿದ್ದು, ಅಕ್ಟೋಬರ್ 7ರಂದು 35,183 ಮಾದರಿಗಳ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಕೊವಿಡ್-19 ಗುಣಮುಖವಾಗಲು ಮನೆಯಲ್ಲೇ ಚಿಕಿತ್ಸೆ! ಬೆಂಗಳೂರಿನಲ್ಲಿ ಕೊವಿಡ್-19 ಗುಣಮುಖವಾಗಲು ಮನೆಯಲ್ಲೇ ಚಿಕಿತ್ಸೆ!

ಮಂಗಳವಾರ ಮೊದಲ ಬಾರಿಗೆ ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿ ದಾಟಿತ್ತು. 5012 ಪ್ರಕರಣಗಳು ದಾಖಲಾಗಿದ್ದವು, ಬುಧವಾರ ಸಹ 5 ಸಾವಿರ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದಲ್ಲಿ ಬುಧವಾರ 10947 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 6,68,652. ರಾಜ್ಯದಲ್ಲಿ ಇದುವರೆಗೂ 9,574 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,16,153.

ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವುದು ಬೆಂಗಳೂರು ನಗರದಲ್ಲಿಯೇ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,62,241. ಸಕ್ರಿಯ ಪ್ರಕರಣಗಳ ಸಂಖ್ಯೆ 58,624.

ದಂಡ ಸಂಗ್ರಹ ಮೊತ್ತ: ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಂಚಾರ ಮಾಡುವಾಗ ಮಾಸ್ಕ್ ಹಾಕದಿದ್ದರೆ 1 ಸಾವಿರ ರೂ. ದಂಡ ಹಾಕಲಾಗುತ್ತಿತ್ತು. ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಬುಧವಾರ ದಂಡ ಮೊತ್ತವನ್ನು 250 ರೂ.ಗಳಿಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ಬುಧವಾರ ನಗರದಲ್ಲಿ ಮಾಸ್ಕ್ ಹಾಕದ 529, ಸಾಮಾಜಿಕ ಅಂತರ ಪಾಲನೆ ಮಾಡದ 31 ಜನರಿಗೆ ದಂಡವನ್ನು ಹಾಕಿದ್ದಾರೆ. 5,60,067 ದಂಡವನ್ನು ಸಂಗ್ರಹ ಮಾಡಲಾಗಿದೆ. ಅಕ್ಟೋಬರ್ 7ರ ತನಕ ನಗರದಲ್ಲಿ 29,93,101 ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ.

Recommended Video

ಸರ್ಕಾರ ಹೇಳೋದೇ ಒಂದು ಪೊಲೀಸರು ಮಾಡೋದು ಇನ್ನೊಂದು | Oneindia Kannada

English summary
Bengaluru city total COVID cases reached 2,62,241. BBMP has reached a new milestone by 35,183 tests on one day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X